ಕನ್ನಡಪ್ರಭ ವಾರ್ತೆ, ತುಮಕೂರು
ನಗರದಲ್ಲಿ ಯೂನಿವರ್ಸಲ್ ಬ್ಯೂಸಿನೆಸ್ ಫೋರಂ ವತಿಯಿಂದ ಏರ್ಪಡಿಸಿದ್ಧ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹೃದಯರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ವಿಷಯ ಕುರಿತು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ಮೊದಲು ಒತ್ತಡದಿಂದ ಮುಕ್ತರಾಗಬೇಕು ಎಂದು ತಿಳಿಸಿದರು.ಪ್ರತಿ ನಿತ್ಯವೂ ಜೀವನದಲ್ಲಿ ಜಂಜಾಟ ಇದ್ದೇ ಇರುತ್ತದೆ. ಇದರ ನಡುವೆ ನಮ್ಮಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಲು ನಾವು ತಿನ್ನುವ ಆಹಾರಕ್ಕೆ ಅನುಗುಣವಾಗಿ ತಪ್ಪದೇ ದಿತ್ಯವೂ ವ್ಯಾಯಾಮ ಮಾಡಲೇಬೇಕು. ಇದರಲ್ಲಿ ನಡುಗೆ ಅವಶ್ಯವಾಗಿದೆ. ಕನಿಷ್ಠ ನಲವತ್ತೈದು ನಿಮಿಷವಾದರೂ ವಾಕಿಂಗ್ ಮಾಡಲೇ ಬೇಕು ಎಂದು ತಿಳಿಸಿದರು.
ಮಿತ ಆಹಾರ, ಯೋಗ, ಧ್ಯಾನ ಮಾಡವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದ ಅವರು ರೋಗ ಬಂದಾಗ ವೈದ್ಯರನ್ನು ಸಂಪರ್ಕ ಮಾಡುತ್ತಾರೆ, ರೋಗ ಬರದಂತೆ ಜಾಗೃತಿ ವಹಿಸುವುದೇ ಬಹಳ ಮುಖ್ಯ ಎಂದು ತಿಳಿಸಿದರು.
ಚರ್ಮರೋಗ ತಜ್ಞರಾದ ಡಾ.ಜೆ.ಬಿ. ಸುಷ್ಮಾ ಮಾತನಾಡಿ ಇಂದು ಅನೇಕ ಕಾಯಿಲೆಗಳು ಚರ್ಮದಲ್ಲಿ ಕಾಣುವ ರೋಗದಿಂದ ವ್ಯಕ್ತವಾಗುತ್ತವೆ. ನಮಗೆ ಯಾವುದೇ ಕಾಯಿಲೆ ಇಲ್ಲ ಎನ್ನುವಂತೆಯೇ ಇರುತ್ತೇವೆ. ಆದರೆ ಒಳಗಡೆ ಅದು ತನ್ನ ಪ್ರಭಾವ ಬೆಳೆಸುತ್ತಿರುತ್ತದೆ. ತಮ್ಮ ಚರ್ಮದ ಮೇಲೆ ಗೋಚರ ವಾಗುತ್ತದೆ. ಕತ್ತಿನ ಸುತ್ತ ಕಪ್ಪುಕಂಡು ಬರುತ್ತಿದೆ ಎಂದರೆ ತಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯು.ಬಿ.ಎಫ್ ಉಪಾಧ್ಯಕ್ಷ ಜ್ಞಾನೇಂದ್ರ ಪ್ರಸಾದ್ ದೀಪು, ಕೋಶಾಧ್ಯಕ್ಷ ನಾಗಭೂಷಣ್, ಚಿ.ನಿ.ಪುರುಷೋತ್ತಮ್, ದಂತ ವೈದ್ಯ ಡಾ.ಸಂಜಯ್ ನಾಯಕ್, ಆಯುರ್ವೇದ ವೈದ್ಯ ಡಾ.ಪ್ರಕಾಶ್ ಪಾಲ್ತೆ, ಯು.ಬಿ.ಎಫ್ ನ ಸದಸ್ಯರಾದ ಗೋಪಿನಾಥ್, ಕಿರಣ್ ರಾಜಶೇಖರಯ್ಯ, ಕಾಂತರಾಜ್, ಕೃಷ್ಣ, ವಿಕಾಸ್, ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.