ಅದ್ಧೂರಿಯಾಗಿ ನಡೆದ ಇಲ್ಯುಮಿನೇಟ್‌ 3.0 ಕಾರ್ಯಕ್ರಮ

KannadaprabhaNewsNetwork |  
Published : Feb 11, 2025, 12:48 AM IST
45 | Kannada Prabha

ಸಾರಾಂಶ

ಸುಸ್ಧಿರ ಮತ್ತು ಆರೋಗ್ಯಕರ ಭವಿಷ್ಯ ನಿರ್ಮಿಸುವ ವಿಚಾರದಲ್ಲಿ ಹೊಸ ತಂತ್ರಜ್ಞಾನ ಮತ್ತು ಎಐ ತಂತ್ರಜ್ಞಾನಗಳ ಪಾತ್ರದ ಕುರಿತು ಸಂವಹನ

ಕನ್ನಡಪ್ರಭ ವಾರ್ತೆ ಮೈಸೂರುಎಲ್‌ ಅಂಡ್‌ಟಿ ಸರ್ವೀಸ್‌ ಲಿಮಿಟೆಡ್‌ ಮತ್ತು ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಸ್ಥಾಪಿಸಿರುವ ಪ್ರಮುಖ ಸಾರ್ವಜನಿಕ ವೇದಿಕೆ ಇಲ್ಯುಮಿನೇಟ್‌ 3.0 ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.ಸುಸ್ಧಿರ ಮತ್ತು ಆರೋಗ್ಯಕರ ಭವಿಷ್ಯ ನಿರ್ಮಿಸುವ ವಿಚಾರದಲ್ಲಿ ಹೊಸ ತಂತ್ರಜ್ಞಾನ ಮತ್ತು ಎಐ ತಂತ್ರಜ್ಞಾನಗಳ ಪಾತ್ರದ ಕುರಿತು ಸಂವಹನ ನಡೆಸಲಾಯಿತು. ಆಧಾರ್ ಸಂಸ್ಥಾಪಕ ಸಿಟಿಒ ಶ್ರೀಕಾಂತ್ ನಾದಮುನಿ ಮತ್ತು ಬಝ್ ಆನ್ ಅರ್ಥ್ ನ ಸ್ಥಾಪಕ ಮತ್ತು ಸಿಇಒ ಗಾಯತ್ರಿ ಚೌಹಾಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಉದ್ಯಮದ ಪರಿಣತರಿಗೆ ಅಗತ್ಯ ಕಿವಿಮಾತು ಹೇಳಿದರು.ತಮ್ಮ ಸಾಧನೆಯ ಹಿಂದಿನ ಬದುಕಿನ ಕತೆಗಳನ್ನು ಮತ್ತು ತಮ್ಮ ಹಲವು ವರ್ಷದ ಅನುಭವ ಕಥನವನ್ನು ಹಂಚಿಕೊಂಡ ಸಂಪನ್ಮೂಲ ವ್ಯಕ್ತಿಗಳು ಭಾರತದ ಪ್ರತಿಭಾ ವಲಯದ ಬುದ್ಧಿವಂತಿಕೆ, ಪರಿಶ್ರಮ ಮತ್ತು ಪರಿಣತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 1.4 ಶತಕೋಟಿ ಭಾರತೀಯರನ್ನು ಒಂದುಗೂಡಿಸುವ ಒಂದು ವಿಶಿಷ್ಟ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಯೋಜನೆಯಾದ ಆಧಾರ್‌ನ ಯಶಸ್ಸಿನ ಪ್ರಯಾಣದಲ್ಲಿ ಜೊತೆಗಿದ್ದ ಶ್ರೀಕಾಂತ್ ನಾದಮುನಿ ಅವರು ತಮ್ಮ ಪ್ರಯಾಣದ ಕತೆ ಹೇಳಿದರು.ಗಾಯತ್ರಿ ಚೌಹಾಣ್ ಇಂದು ನಾವು ಎದುರಿಸುತ್ತಿರುವ ಪ್ರಮುಖ ಪರಿಸರ ಸಮಸ್ಯೆಗಳ ಕುರಿತು ಮಾತನಾಡಿದರು. ಸುಸ್ಧಿರ ಮತ್ತು ಒಳಗೊಳ್ಳುವಿಕೆಯ ಭವಿಷ್ಯ ಸಾಧಿಸಲು ತಾಂತ್ರಿಕ ಪ್ರಗತಿಗಳು ಹೇಗೆ ನೆರವಾಗಬಲ್ಲವು ಎಂಬ ಮಾಹಿತಿ ಒದಗಿಸಿದರು.ಎಲ್ ಅಂಡ್‌ ಟಿ ಟೆಕ್ನಾಲಜಿ ಸರ್ವಿಸಸ್ನ ಮೆಡಿಕಲ್, ಸ್ಮಾರ್ಟ್ ವರ್ಲ್ಡ್ ವಿಭಾಗದ ಅಧ್ಯಕ್ಷ ಅಭಿಷೇಕ್ ಸಿನ್ಹಾ ಅವರು ಫೈರ್ ಸೈಡ್ ಚಾಟ್ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ದೇಶದ ಮುಂದಿನ ಹಂತದ ಬೆಳವಣಿಗೆ ಹೇಗೆ ರೂಪಿಸಬಹುದು ಎಂಬ ಕುರಿತು ಒಳನೋಟ ಹಂಚಿಕೊಂಡರು.ಎನ್.ಐ.ಇ ಪ್ರಾಂಶುಪಾಲ ಡಾ. ರೋಹಿಣಿ ನಾಗಪದ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಷಿಪ್ರ ತಂತ್ರಜ್ಞಾನ ಆವಿಷ್ಕಾರಗಳು ನಮ್ಮ ಆಲೋಚನೆ ಮತ್ತು ಗ್ರಹಿಕೆ ಮರುರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.ಪ್ರತೀ ಹೊಸ ಆವೃತ್ತಿಯ ಮೂಲಕ ಇಲ್ಯುಮಿನೇಟ್ ಕಾರ್ಯಕ್ರಮವು ಭಾರತದ ಎಂಜಿನಿಯರಿಂಗ್ ಸಾಧನೆಗಳನ್ನು ಸಂಭ್ರಮಿಸುವ ಪ್ರಮುಖ ವೇದಿಕೆಯಾಗಿ ತನ್ನ ಸ್ಥಾನ ಬಲಪಡಿಸುತ್ತಿದೆ. ಮೂನ್ ಮ್ಯಾನ್ ಆಫ್ ಇಂಡಿಯಾ ಮತ್ತು ಇಸ್ರೋ ಮಾಜಿ ವಿಜ್ಞಾನಿ ಡಾ. ಮೈಲ್ ಸ್ವಾಮಿ ಅಣ್ಣಾದೊರೈ ಅವರು ಪಾಲ್ಗೊಂಡಿದ್ದರು.ವಂದೇ ಭಾರತ್ ಎಕ್ಸ್ಪ್ರೆಸ್ನ ಸಾಧಕ ಸುಧಾಂಶು ಮಣಿ; ಏಥರ್ ಎನರ್ಜಿಯ ಹಿರಿಯ ಉಪಾಧ್ಯಕ್ಷ ಕೆ.ಎಸ್‌. ರಮೇಶ್ ಮತ್ತು ಲಾರ್ಸೆನ್ ಆಂಡ್ ಟರ್ಬೋ ಕೈಗೊಂಡಿದ್ದ ಏಕತೆಯ ಪ್ರತಿಮೆಯ ಹಿಂದಿನ ಕಲಾಕಾರ ಪ್ರಾಜೆಕ್ಟ್ ಸ್ಪೆಷಲಿಸ್ಟ್ ತ್ಯಾಗರಾಜನ್ ಪಾಲ್ಗೊಂಡಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ