ನಯನಜ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಯೋಜನೆ ರೂಪಿಸಿ: ಕೆ.ಎಂ.ಶಿವಪ್ಪ

KannadaprabhaNewsNetwork | Published : Jul 26, 2024 1:32 AM

ಸಾರಾಂಶ

ರಾಜ್ಯ ಸರ್ಕಾರ ಹಡಪದ ಅಪ್ಪಣ್ಣರ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ. ಕೇವಲ ಜಯಂತಿಯನ್ನು ಆಚರಿಸಿದರೆ ಸಾಲದು. ಅತ್ಯಂತ ಹಿಂದುಳಿದ ನಯನಜ ಕ್ಷತ್ರೀಯ ಸಮಾಜದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನಯನಜ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಂತೆ ತಾಲೂಕು ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಆಗ್ರಹಿಸಿದರು.

ಪಟ್ಟಣದ ನಯನಜ ಕ್ಷತ್ರಿಯ ಸಮಾಜದ ಕಾರ್ಯಾಲಯದಲ್ಲಿ ಸಮುದಾಯದ ಜನ ಆಯೋಜಿಸಿದ್ದ ಮಹಾಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಹಡಪದ ಅಪ್ಪಣ್ಣರ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ. ಕೇವಲ ಜಯಂತಿಯನ್ನು ಆಚರಿಸಿದರೆ ಸಾಲದು. ಅತ್ಯಂತ ಹಿಂದುಳಿದ ನಯನಜ ಕ್ಷತ್ರೀಯ ಸಮಾಜದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಯುವಕರು ಶಿಕ್ಷಣವಂತರಾಗಿದ್ದರೂ ನಿರುದ್ಯೋಗ ಸಮಸ್ಯೆಗೆ ಸಿಲುಕಿ ನಲುಗಿದ್ದಾರೆ. ಜಯಂತ್ಯುತ್ಸವದ ಸವಿನೆನಪಿಗಾಗಿ ನಯನಜ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅಗತ್ಯ ವೃತ್ತಿ ಕೌಶಲ್ಯ ಮತ್ತು ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿದರು.

ಹಡಪದ ಅಪ್ಪಣ್ಣನವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರು ಎಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ ಎಂದರು.

ಅಪ್ಪಣ್ಣನವರ ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ಮಾತೃಭೂಮಿ ವೃದ್ದಾಶ್ರಮದಲ್ಲಿ ಅನ್ನಸಂತರ್ಪಣೆ ನಡೆಸಿದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ರಾಮಕೃಷ್ಣ, ಎಚ್.ಎ.ತೇಜಸ್ವಿನಿ, ನಂಜುಂಡ, ಹರೀಶ್, ಮರಿಯಯ್ಯ, ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಸಮಾಜದ ಮುಖಂಡರಾದ ಶಿವಪ್ಪ, ವೆಂಕಟರಾಮು, ಗೋವಿಂದರಾಜು, ಮರಿಯಯ್ಯ, ನಂಜುಮಡ, ಅಶೋಕ್, ಶೇಖರ್, ಶ್ಯಾಮಸುಂದರ್, ಗಿರೀಶ್, ಎಚ್.ಎನ್.ಮಂಜುನಾಥ್, ಸಂತೋಷ್, ರಾಮು, ಮನೋಜ್ , ರತ್ನ, ಭಾಗ್ಯಮ್ಮ ನಾಗಮ್ಮ, ಸೌಮ್ಯ, ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.ಮೀನುಗಾರಿಕೆ ಸಹಾಯಧನಕ್ಕೆ ಅರ್ಜಿ ಆಹ್ವಾನಮಂಡ್ಯ: ಮಂಡ್ಯ ಮೀನುಗಾರಿಕೆ ಇಲಾಖೆಯಿಂದ 2024-25ನೇ ಸಾಲಿಗೆ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ವಲಯ ಯೋಜನೆಗಳಾದ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ, ಕೆರೆ/ಜಲಾಶಯಗಳ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ನೆರವು ಮತ್ತು ಕೆರೆಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ/ ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆ ಸಹಾಯಧನ ನೆರವು ನೀಡಲಾಗುವುದು. ಅರ್ಜಿ ಸಲ್ಲಿಸಲು ಅಗಸ್ಟ್ 17 ಕೊನೆ ದಿನ. ಅರ್ಹ ಫಲಾನುಭವಿಗಳು ಆನ್ ಲೈನ್ ನ ಸೇವಾಸಿಂಧು ಮೂಲಕ ಅಥವಾ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸುವುದು. ಅರ್ಜಿ ಜೊತೆಗೆ ಅಗತ್ಯ ದಾಖಲೆಗಳೊಡನೆ ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲೂಕು ಮೊ-9844184899 ಮದ್ದೂರು ಮೊ-9972127558, ಮಳವಳ್ಳಿ ಮೊ-7738621939, ಕೆ.ಆರ್.ಪೇಟೆ ಮತ್ತು ಪಾಂಡವಪುರ ಮೊ- 9964037262, ನಾಗಮಂಗಲ ಮೊ- 9620512914 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Share this article