ಶಾಸಕರು ಹೇಳಿದ್ದೇನು?- ಕಳೆದ ವರ್ಷ ಕೊನೆಯ ತಿಂಗಳಲ್ಲಿ ಟ್ಯಾಂಕರ್ ಬಳಸಿ ಕುಡಿಯುವ ನೀರು ಒದಗಿಸಲಾಗಿತ್ತು
- ಅಧಿಕಾರಿಗಳು ತಮ್ಮಲ್ಲಿ ಇರುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು
- - - ಕನ್ನಡಪ್ರಭ ವಾರ್ತೆ ಹೊಸನಗರರಾಜ್ಯದಲ್ಲಿ ಈ ಬಾರಿ ಮಳೆ ತೀವ್ರತರದಲ್ಲಿ ಕೈ ಕೊಟ್ಟಿದೆ. ಪರಿಣಾಮ ಜನವರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಧಿಕಾರಿಗಳು ಈಗಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಯಾವೂಬ್ಬ ವ್ಯಕ್ತಿಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹಲವಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ. ಕಳೆದ ವರ್ಷ ಕೊನೆಯ ತಿಂಗಳಲ್ಲಿ ಟ್ಯಾಂಕರ್ ಬಳಸಿ ಕುಡಿಯುವ ನೀರು ಒದಗಿಸಲಾಗಿತ್ತು. ಭಾರೀ ಮಳೆ ಬೀಳುವ ಪ್ರದೇಶದಲ್ಲೂ ನೀರಿಗೆ ತತ್ವಾರ ಉಂಟಾಗಿತ್ತು. ಈ ಸಾರಿಯೂ ಬಾರಿ ಪ್ರಮಾಣದಲ್ಲಿ ಮಳೆ ಹಿನ್ನೆಡೆಯಾಗಿದೆ. ಕುಡಿಯುವ ನೀರು ಸಮಸ್ಯೆಯಾಗಿ ಕಾಡಲಿದೆ. ಹಾಗಾಗಿ, ಅಧಿಕಾರಿಗಳು ತಮ್ಮಲ್ಲಿ ಇರುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಹೊಸನಗರ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಿಗೂ ನೀರುಣಿಸಲು ಜೆ.ಜೆ.ಎಂ. ಯೋಜನೆಯೊಂದು ಪರಿಣಾಮಕಾರಿ ಯೋಜನೆ ಆಗಿದೆ. ಹಳ್ಳಿಗೂ ನೀರು ಸರಬರಾಜು ಮಾಡಲು ಯೋಜನೆಯಲ್ಲಿ ಅವಕಾಶವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಇದನ್ನು ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಪಿಡಿಒಗಳು ಯೋಜನೆಯ ಬಗ್ಗೆ ಹದ್ದಿನ ಕಣ್ಣಿಟ್ಟುಕಾಯಬೇಕು. ಯಾವುದೇ ರಾಜಿ ಪಂಚಾಯ್ತಿ, ಮರ್ಜಿಗೆ ಒಳಗಾಗಬಾರದು. ಯೋಜನೆ ಅನುಷ್ಟಾನದಲ್ಲಿ ಯಾವುದೇ ದೂರು ಬಂದರೂ ಪಿಡಿಒಗಳನ್ನು ಪ್ರಶ್ನೆ ಮಾಡಲಾಗುತ್ತದೆಎಂದು ಎಚ್ಚರಿಸಿದರು.
ಕಳೆದ ವರ್ಷ ನೀರಿಗೆ ಸಮಸ್ಯೆಆದ ಗ್ರಾಮಗಳಲ್ಲಿ ಮೊದಲುಜೆ.ಜೆ.ಎಂ ಯೋಜನೆ ಮಂಜೂರು ಆಗಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್, ಕುಡಿಯುವ ನೀರುಯೋಜನೆ ಎಇಇ ಶಿವಪ್ರಸಾದ್ ಇದ್ದರು.---------------------------