ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ದೇವಾಲಯದ ಅಭಿವೃದ್ಧಿ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಜಿಲ್ಲಾಧಿಕಾರಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಅನುಮತಿ ಪಡೆದು ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡು ಮೇಲುಕೋಟೆ ಪುಳಿಯೋಗರೆ ಇರುವಂತೆ ಅನ್ನದಾನ ಪ್ರಾರಂಭಿಸಿ ಎಂದರು.
ದೇವಾಲಯದಲ್ಲಿ ಭಕ್ತರಿಗೆ ಮಹಾ ಮಂಗಳಾರತಿಯ ನಂತರ ಪ್ರಸಾದವಿನಿಯೋಗ ಮಾಡಲು ಯೋಜನೆ ರೂಪಿಸಬೇಕು. ಲಡ್ಡು ಪ್ರಸಾದ ಮಾರಾಟ ಕೇಂದ್ರ ಆರಂಭ, ಆದಾಯ ಹೆಚ್ಚಿಸಲು ಯೋಜನೆ ಜಾರಿಗೆ ತಂದು ದೇಗುಲದ ಉತ್ಸವಗಳು ವಿಶೇಷವಾಗಿ ನಡೆಯಲು ವ್ಯವಸ್ಥೆಯಾಗಬೇಕು. ದೇಗುಲದ ಹಣಕಾಸು ವ್ಯವಹಾರವನ್ನು ಸಂಪೂರ್ಣ ಡಿಜಿಟಲ್ ಮೂಲಕ ಮಾಡಬೇಕು ಎಂದರು.ಆಸ್ತಿ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಚರ್ಚಿಸಿದ ಶಾಸಕರು, ದೇವಾಲಯದ ಕೈಪಿಡಿಯಲ್ಲಿರುವ ಜಮೀನುಗಳು ಹಾಗೂ ಸ್ಥಳಗಳು ದೇವಾಲಯದ ಹೆಸರಿಗೆ ತಕ್ಷಣ ಖಾತೆ ವರ್ಗಾವಣೆಯಾಗಬೇಕು. ಇದಕ್ಕಾಗಿ ಗ್ರಾಪಂ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಹಾಗೂ ದೇವಾಲಯದ ಜಾಗಗಳನ್ನು ಒತ್ತುವರಿಮಾಡಿರುವುದನ್ನು ಹತ್ತು ದಿನಗಳಕಾಲ ಇಲ್ಲೇ ಇದ್ದು ತೆರವು ಮಾಡುವ ಕಾರ್ಯ ಮಾಡುತ್ತೇನೆ. ಇದೇ ವೇಳೆ ಸರ್ಕಾರದ ಸೌಲಭ್ಯಗಳು ಮನೆ ಮನೆಗೆ ತಲುಪುವಂತೆ ಮಾಡಲಾಗುತ್ತದೆ ಎಂದರು.
ವೈರಮುಡಿ ಜಾತ್ರಾ ಮಹೋತ್ಸವ ಸಂಬಂಧ ಒಂದು ರೂಪಾಯಿಯನ್ನೂ ದೇವಾಲಯದ ನಿಧಿಯಿಂದ ಖರ್ಚು ಮಾಡಬಾರದು ಸರ್ಕಾರದಿಂದಲೇ ಅನುದಾನ ಕೊಡಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ, 31 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂಬ ಸಂಗತಿ ಕೇಳಿಬರುತ್ತಿದೆ. ಇದು ಸಮಂಜಸ ಕ್ರಮವಲ್ಲ. ವೈರಮುಡಿ ಮಹೋತ್ಸವಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಖರ್ಚಿನ ಹಣವನ್ನು ಮರಳಿ ದೇವಾಲಯದ ನಿಧಿಗೆ ಜಮೆ ಮಾಡಿಸುತ್ತೇನೆ ಎಂದರು.
ಯತೀಶ್ ಅವರು ಮೇಲುಕೋಟೆಯಲ್ಲಿ ನಡೆಯುವ ಪೋಟೋಷೂಟ್ ರಶೀತಿ ನೀಡಿಕೆಯಲ್ಲಿ ಗೋಲ್ ಮಾಲ್ ಹೆಚ್ಚಾಗಿದೆ. ಕಡಿಮೆ ಹಣ ಪಡೆದು ರಶೀತಿ ಇಲ್ಲದೆಯೇ ಪೋಟೋಷೂಟ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ದೇವಾಲಯಕ್ಕೆ ನಷ್ಟ ಉಂಟಾಗುತ್ತಿದೆ ಎಂದರು.
ರಸ್ತೆ ಪಾರ್ಕಿಂಗ್ ಬದಲಾಗಬೇಕು:
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಿಡಿಒ ರಾಜೇಶ್ವರ್, ಇನ್ ಪೋಸಿಸ್ ವ್ಯವಸ್ಥಾಪಕಿ ಪ್ರೀತಿ ಮಹದೇವ್, ರೈತಸಂಘದ ಮುಖಂಡ ಟಗರು ದಿಲೀಪ್ , ಯೋಗೀಶ್, ಕನಗೋನಹಳ್ಳಿ ಪರಮೇಶ್‌ಗೌಡ, ಲಕ್ಷ್ಮಣ, ನಾಗಣ್ಣ, ಕಾಂಗ್ರೆಸ್ ಮುಖಂಡ ಯೋಗನರಸಿಂಹೇಗೌಡ ಇತರರು ಇದ್ದರು.