ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶನಿವಾರ ರಬಕವಿಯ ಶ್ರೀ ಬೀರೇಶ್ವರ್ ಕೋ ಆಪ್ ಕ್ರೆಡಿಟ್ ಸೊಸೈಟಿ ರಬಕವಿ ಶಾಖೆಯಲ್ಲಿ ಅಮೂಲ್ಯ ಕಿರುಸಾಲ ಪಡೆದ ರಬಕವಿಯ ರುಕ್ಸಾನಾ ಸಲೀಂ ಗುರಾಡಿ ಇವರ ನೇರ ವಾರಸುದಾರರಾದ ಪತಿ ಸಲೀಮ್ ಸಿರಾಜಸಾಬ ಗುರಾಡಿ ಅವರು ಅಕಾಲಿಕ ನಿಧನರಾದ ಕಾರಣ ಅವರ ಪತ್ನಿ ರುಕ್ಸಾನಾ ಸಲೀಮ್ ಗುರಾಡಿಗೆ ಸಂಸ್ಥೆಯ ಸದಸ್ಯರ ಕಲ್ಯಾಣ ನಿಧಿಯಿಂದ ಕೊಡಲಾಗುವ ₹ ೩೦ ಸಾವಿರ ಪರಿಹಾರ ಮೊತ್ತದ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಬಕವಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಪರಪ್ಪ ಪೂಜೇರಿ, ಪರಶುರಾಮ ಕಾಖಂಡಕಿ, ಮಹಾಂತೇಶ ಗುಂಡಿ, ಮಲ್ಲಪ್ಪ ಚೌಲಗಿ, ಬಸಪ್ಪ ಗೋಪಾಳಿ, ಅಶೋಕ ಕೋತಿನ, ಸುನೀಲ ಮಮದಾಪೂರ ಹಾಗೂ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಇದ್ದರು.