- ಹರಿಹರದಲ್ಲಿ ಬಂಜಾರ ಯುವಜನರ ಉದ್ಯಮಶೀಲತೆ ಶಿಬಿರ - - - ಕನ್ನಡಪ್ರಭ ವಾರ್ತೆ, ಹರಿಹರ
ನಗರದ ಮೈತ್ರಿವನದ ಪ್ರೊ. ಬಿ.ಕೃಷ್ಣಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಬಂಜಾರ ಯುವಜನರ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಲಸೆ ಕಾರ್ಮಿಕರ ಮಕ್ಕಳಿಗಾಗಿ ಸಂಚಾರಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಈ ದುಡಿಯುವ ಜನರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು ಎಂದು ತಿಳಿಸಿದರು.
ಬಂಜಾರ ಭಾಷೆಯನ್ನು ಭಾರತದ ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಸೇರಿಸುವ ಅಗತ್ಯವಿದೆ. ಬಂಜಾರ ಭಾಷೆಯನ್ನು ಸಂವಿಧಾನದಲ್ಲಿ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಸಂಘ ಸಂಸ್ಥೆಗಳು, ಚಿಂತಕರು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಬೇಕು ಎಂದರು.ಬಂಜಾರರ ಸಾಂವಿಧಾನಿಕ ಮೀಸಲಾತಿ ಕಿತ್ತುಕೊಳ್ಳಲು ನಡೆಯುವ ಷಡ್ಯಂತರಗಳನ್ನು ಎದುರಿಸಲು ಸದಾ ಜಾಗೃತರಾಗಬೇಕು. ಸಂವಿಧಾನ ಸಂರಕ್ಷಣೆಗಾಗಿ ನಾಡಿನ ಶೋಷಿತ ಸಮುದಾಯಗಳು ಆಯೋಜಿಸುವ ಐಕ್ಯ ಅಂದೋಲನಗಳಲ್ಲಿ ಬಂಜಾರರು ಭಾಗವಹಿಸಬೇಕು. ತಾಂಡಾಗಳಲ್ಲಿ ಮದುವೆ, ಹಬ್ಬಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚಗಳಿಗೆ ನಿಯಂತ್ರಣ ಹಾಕಬೇಕು. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮುಂದಾಗಬೇಕು ಎಂದು ಸಲಹೆ ನೀಡಿದರು.
- - - -೨೯ಎಚ್‌ಆರ್‌ಆರ್೨:
ಸಮಾರಂಭದಲ್ಲಿ ಹೈಕೋರ್ಟ್ ವಕೀಲ ಅನಂತ ನಾಯ್ಕ ಮಾತನಾಡಿದರು.