ಕನಕಗಿರಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಣೆ ಮಾಡುವ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಆರೈಕೆದಾರರ ಪೂರ್ವ ತರಬೇತಿ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ರಾಜಶೇಖರ ಹೇಳಿದರು.
ಕೂಸಿನ ಮನೆ ಕೇಂದ್ರದ ಉತ್ತಮ ನಿರ್ವಹಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆರೈಕೆದಾರರಿಗೆ ಸೇವಾ ಪೂರ್ವ ತರಬೇತಿ ನೀಡಿ ಈಗಾಗಲೇ ತಾಲೂಕಿನ ಎಲ್ಲ ಗ್ರಾಪಂ ಕಚೇರಿಗಳಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗಿದೆ. ಕೇರ್ ಟೇಕರ್‌ಗಳು ತರಬೇತಿಯ ಸದುಪಯೋಗ ಪಡೆದು ಮಕ್ಕಳನ್ನು ಆರೋಗ್ಯಯುತವಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಸದಸ್ಯರು, ಪಿಡಿಒ ನಾಗೇಶ ಎಚ್., ತರಬೇತಿ ಸಂಪನ್ಮೂಲ ವ್ಯಕ್ತಿ ವಿದ್ಯಾವತಿ, ಎಸ್‌ಐಆರ್‌ಡಿ ಡಿಟಿಸಿ ದೇವರಾಜ್, ತಾಪಂ ವಿಷಯ ನಿರ್ವಾಹಕ ಶಿವಮೂರ್ತಯ್ಯ ಕಂಪಾಪುರಮಠ, ಪವನಕುಮಾರ,
ಐಇಸಿ ಸಂಯೋಜಕ ಶಿವಕುಮಾರ ಕೆ., ಆರ್‌ಜಿಪಿಆರ್‌ಎಫ್ ಫೆಲೋ ಡಾ. ತಿಪ್ಪೇಸ್ವಾಮಿ, ಎನ್ಆರ್‌ಎಲ್ಎಂ ಸಂಯೋಜಕಿ ರೇಣುಕಾ, ಗ್ರಾಪಂ ಸಿಬ್ಬಂದಿ ಮಹೇಶಗೌಡ ಇತರರಿದ್ದರು.