ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ಪರಿಸರ, ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಯಲ್ಲಾಪುರ: ನದಿ ತಿರುವು ಯೋಜನೆ ಸ್ಥಗಿತಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಯಶಸ್ವಿಯಾಗಬೇಕು ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮನವಿ ಮಾಡಿದರು.
ವರದಾ- ಬೇಡ್ತಿ, ಅಘನಾಶಿನಿ- ವೇದಾವತಿ ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ನ. ೩ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹಿನ್ನೆಲೆ ಟಿಎಂಎಸ್ ಸಭಾಭವನದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಇಳಿಯಬೇಕು ಎಂದು ಕೋರಿದರು.
ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ಪರಿಸರ, ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹೋರಾಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದರು.
ಅ. ೧೪ರಂದು ಮಧ್ಯಾಹ್ನ ೩ಕ್ಕೆ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ, ಸಂಜೆ ೫ಕ್ಕೆ ವಜ್ರಳ್ಳಿ ಸೊಸೈಟಿಯ ಸಭಾಭವನದಲ್ಲಿ, ೬.೩೦ಕ್ಕೆ ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನದಲ್ಲಿ ಸಭೆ ನಡೆಯಲಿದೆ.
ಅ. ೧೫ರಂದು ಮಧ್ಯಾಹ್ನ ೩ಕ್ಕೆ ದೇಹಳ್ಳಿ ಸೊಸೈಟಿ ಸಭಾಭವನ, ಸಂಜೆ ೪.೩೦ಕ್ಕೆ ಆನಗೋಡ ಸೊಸೈಟಿ ಸಭಾಭವನ, ಸಂಜೆ ೬.೩೦ಕ್ಕೆ ಕಣ್ಣಿಗೇರಿ ಸೊಸೈಟಿ ಸಭಾಭವನ, ರಾತ್ರಿ ೮ಕ್ಕೆ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವ ಕಟ್ಟಡದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಅ. ೧೬ರಂದು ಮಧ್ಯಾಹ್ನ ೩ಕ್ಕೆ ಕುಂದರಗಿ ಸೊಸೈಟಿ, ಸಂಜೆ ೪.೩೦ಕ್ಕೆ ಉಮ್ಮಚಗಿ ಸೊಸೈಟಿ, ಸಂಜೆ ೬ಕ್ಕೆ ಹಿತ್ಲಳ್ಳಿ ಸೊಸೈಟಿ, ಸಂಜೆ ೭.೩೦ಕ್ಕೆ ಹಾಸಣಗಿ ಸೊಸೈಟಿ ಸಭಾಭವನದಲ್ಲಿ ಸಭೆ ಏರ್ಪಡಿಸಲಾಗಿದೆ. ಅ. ೧೮ರಂದು ಮಧ್ಯಾಹ್ನ ೩ಕ್ಕೆ ಕಿರವತ್ತಿ, ಸಂಜೆ ೫ಕ್ಕೆ ಹುಣಶೆಟ್ಟಿಕೊಪ್ಪ, ಸಂಜೆ ೭ಕ್ಕೆ ಉಪಳೇಶ್ವರದಲ್ಲಿ ಸಭೆ ನಡೆಯಲಿದೆ. ಅ. ೨೧ರಂದು ಸಂಜೆ ೩.೩೦ಕ್ಕೆ ಮುಂಡಗೋಡ ತಾಲೂಕಿನ ಬೆಡಸಗಾಂವ, ಸಂಜೆ ೫ಕ್ಕೆ ಪಾಳಾದಲ್ಲಿ ಸಭೆ ಆಯೋಜಿಸಲಾಗಿದೆ.
ಅ. ೨೨ರಂದು ಮಧ್ಯಾಹ್ನ ೩.೩೦ಕ್ಕೆ ಯಲ್ಲಾಪುರದ ಎಲ್ಎಸ್ಎಂಪಿ ಸೊಸೈಟಿ ಸಭಾಭವನದಲ್ಲಿ ಪಟ್ಟಣ ವ್ಯಾಪ್ತಿಯ ಸಂಪರ್ಕ ಸಭೆ ನಡೆಯಲಿದೆ. ಅ. ೨೩ರಂದು ಮಧ್ಯಾಹ್ನ ೩.೩೦ಕ್ಕೆ ಹಳಿಯಾಳ ತಾಲೂಕಿನ ಭಾಗವತಿ, ಡೌಗಿನಾಲಾ, ಸಾಂಬ್ರಾಣಿ ಭಾಗದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದರು.
ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ರಸ್ತೆ ತಡೆ ಸಮಿತಿಯ ಸಂಚಾಲಕರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿ.ಟಿ. ಹೆಗಡೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರವಿ ಭಟ್ಟ ಬಿಡಾರ, ರಾಘವೇಂದ್ರ ಭಟ್ಟ, ರಘುಪತಿ ಹೆಗಡೆ, ನಾಗರಾಜ ಕವಡಿಕೇರಿ, ಕೆ.ಟಿ. ಹೆಗಡೆ, ಶ್ರೀರಾಮ ಲಾಲಗುಳಿ, ಶ್ರೀಧರ ಅಣಲಗಾರ, ಭಾಸ್ಕರ ಸಿದ್ದಿ, ಗೋಪಾಲಕೃಷ್ಣ ಗಾಂವ್ಕರ ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.