ಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯವಾಗಲಿ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jan 14, 2025, 01:03 AM IST
ಕಾರ್ಯಕ್ರಮದಲ್ಲಿ ವಿ.ಕೆ. ಭಟ್ಟ ಶೀಗೇಪಾಲ, ಡಾ. ವಸಂತ ಶಾಸ್ತ್ರಿ ಮಂಚಿಕೇರಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಮ್ಮ ಹಿಂದಿನ ಹಿರಿಯರ ಜೀವನ ಶೈಲಿಯಂತೆ ಮುನ್ನಡೆಯದಿದ್ದರೆ ಇನ್ನೂ ಕಷ್ಟದ ಬದುಕನ್ನು ಕಾಣಬೇಕಾದೀತು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಯಲ್ಲಾಪುರ: ಉತ್ತಮ ಆರೋಗ್ಯಕ್ಕೆ ಯೋಗ ಬೇಕು. ಜೀವನದಲ್ಲಿ ಆರೋಗ್ಯ ಪ್ರಧಾನವಾದುದು. ಅನೇಕರು ಯೋಗದ ಸಾಧನೆಗಾಗಿ ತಪಸ್ಸನ್ನೇ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಚಿಕ್ಕಂದಿನಿಂದಲೇ ಯೋಗ ಶಿಕ್ಷಣ ಕಡ್ಡಾಯವಾಗಿ ಪಡೆಯುವಂತಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಜ. ೧೨ರಂದು ಪಟ್ಟಣದ ವೆಂಕಟರಮಣ ಮಠದಲ್ಲಿ ಜಿಲ್ಲಾ ಯೋಗ ಫೆಡರೇಶನ್, ಯಲ್ಲಾಪುರ ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಅಡಿಕೆ ವ್ಯವಹಾರಸ್ಥರ ಸಂಘದ ಆಶ್ರಯದಲ್ಲಿ ಯೋಗ ಸಮ್ಮೇಳನ ಮತ್ತು ಸ್ಪರ್ಧಾ ಕಾರ್ಯಕ್ರಮದ ಸಮಾರೋಪದಲ್ಲಿ ಬಹುಮಾನ ವಿತರಿಸಿ, ಸಾಧಕರನ್ನು ಸನ್ಮಾನಿಸಿ, ಮಾತನಾಡಿದರು.ಯೋಗ, ವಾಕಿಂಗ್ ಮಾಡುವವರನ್ನು ನಗರದಲ್ಲಿ ಕಾಣಬಹುದು. ಆರೋಗ್ಯ ರಕ್ಷಣೆಗಾಗಿ ಪರದಾಡಬೇಕಾಗುತ್ತದೆ. ಅದರಲ್ಲೂ ಇಂದಿನ ವಿಷಯುಕ್ತ ತರಕಾರಿ, ಹಣ್ಣು, ಆಹಾರ ಪದಾರ್ಥಗಳು ನಮ್ಮ ಜೀವನಶೈಲಿಯನ್ನೇ ಬದಲಾಯಿಸಿದೆ. ನಮ್ಮ ಹಿಂದಿನ ಹಿರಿಯರ ಜೀವನ ಶೈಲಿಯಂತೆ ಮುನ್ನಡೆಯದಿದ್ದರೆ ಇನ್ನೂ ಕಷ್ಟದ ಬದುಕನ್ನು ಕಾಣಬೇಕಾದೀತು ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಗದಲ್ಲಿ ಹಲವು ವ್ಯಾಖ್ಯಾನಗಳಿವೆ. ಅಷ್ಟಾಂಗ ಯೋಗದಲ್ಲಿ ೮ ವಿಧವಿದೆ. ಭಾಷೆಯ ಶುದ್ಧತೆಗೆ ವ್ಯಾಕರಣದ ಅಗತ್ಯವಿದ್ದಂತೆ ಶರೀರದ, ಮನಸ್ಸಿನ ರಕ್ಷಣೆ ಶುದ್ಧತೆಗೆ ಯೋಗ ತೀರಾ ಅಗತ್ಯವಾಗಿದೆ. ಮನಸ್ಸು, ಅಂತರಂಗವನ್ನು ಯೋಗ ಶುದ್ಧಗೊಳಿಸುತ್ತದೆ. ಯೋಗಕ್ಕೂ ಆಯುಷ್ಯಕ್ಕೂ ಸಂಬಂಧವಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯೋಗ ಫೆಡರೇಶನ್ ಅಧ್ಯಕ್ಷ ಅನಿಲ ಕರಿ ಮಾತನಾಡಿ, ಯೋಗವನ್ನು ಗುರುಮುಖೇನ ಕಲಿಯಬೇಕು. ಯುವ ಪೀಳಿಗೆಗಳಿಗೆ ಯೋಗದ ಮಹತ್ವದ ಅರಿವನ್ನು ಮೂಡಿಸಬೇಕಾಗಿದೆ ಎಂದರು.ಸನ್ಮಾನಿತ ಯೋಗ ಗುರು ಡಾ. ವಸಂತ ಶಾಸ್ತ್ರಿ ಮಂಚಿಕೇರಿ ಮಾತನಾಡಿ, ಹಠಸಿದ್ಧಿ ಸೇರಿದಂತೆ ಹಲವು ಪ್ರಕಾರಗಳಿವೆ. ಪ್ರಾಣ, ಅಪಾನ, ವ್ಯಾನ, ಉದಾನ, ಧ್ಯಾನ, ಧಾರಣ, ಸಮಾಧಿ ಹೀಗೆ ಹಲವು ರೀತಿಯ ವಿಧಾನಗಳನ್ನು ಅಷ್ಟಾಂಗ ಯೋಗದ ಸಿದ್ಧಿಯಿಂದ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಈ ಸಂದರ್ಭದಲ್ಲಿ ಹಿರಿಯ ಯೋಗ ಗುರುಗಳಾದ ಪತಂಜಲಿ ಯೋಗ ಸಮಿತಿಯ ತಾಲೂಕಾಧ್ಯಕ್ಷ ವಿ.ಕೆ. ಭಟ್ಟ ಶೀಗೇಪಾಲ, ಡಾ. ವಸಂತ ಶಾಸ್ತ್ರಿ ಮಂಚಿಕೇರಿ ಅವರನ್ನು ಸನ್ಮಾನಿಸಲಾಯಿತು. ವೆಂಕಟರಮಣ ಮಠದ ಅಧ್ಯಕ್ಷ ವಿನಾಯಕ ಪೈ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಉಪಸ್ಥಿತರಿದ್ದರು. ತಾಲೂಕು ಯೋಗ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಾಯ ಭಟ್ಟ ಆನೆಜಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷ ಡಿ.ಎನ್. ಗಾಂವ್ಕರ ನಿರ್ವಹಿಸಿದರು. ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮ

ಸಿದ್ದಾಪುರ: ಸ್ಥಳೀಯ ಎಂಜಿಸಿ ಪದವಿಪೂರ್ವ ಕಾಲೇಜಿನ ೫೬ನೇ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಆಯುರ್ವೇದ ಕಾಲೇಜಿನ ಸಮೀರ್ ಭಾದ್ರಿ, ಎಂಜಿಸಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಗನ್ನಾಥ್ ಮೊಗೇರ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಶ್ರೀಶೈಲ ಎಂ.ಕೆ. ವಹಿಸಿದ್ದರು.

ನಿಕಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಸುರೇಶ್ ಬಿ. ನೀರಲಗಿ ಸ್ವಾಗತಿಸಿದರು. ಶೋಭಾ ಶೇಟ್ ವಾರ್ಷಿಕ ವರದಿ ವಾಚಿಸಿದರು. ವಿಘ್ನೇಶ್ವರ ಭಟ್ ವಂದಿಸಿದರು. ಪಂಚಮಿ ಮತ್ತು ಈಶಾ ಕಾರ್ಯಕ್ರಮವನ್ನು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ