ಜಾಗೃತಿ ಜಾಥಾ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶದಂತೆ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಕೈಯಲ್ಲಿ ಇದೆ ಎಂದು ತಹಶೀಲ್ದಾರ್ ಸೈಯದ್ ಕಲೀಮ್ ಉಲ್ಲಾ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ. ಪುಟ್ ಬಾತ್ ಮೇಲೆ ಇರುವ ಅಂಗಡಿಗಳ ತೆರವಿನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಇದನ್ನು ಬಳಕೆ ಮಾಡಬಾರದು. ಸರ್ಕಾರದ ಆದೇಶಗಳಿಗೆ ಸಾರ್ವಜನಿಕರು ಸಹಕಾರ ನೀಡದಿದ್ದರೆ ಅದರ ಉದ್ದೇಶ ವಿಫಲವಾಗುತ್ತದೆ. ಜನತೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ನಿಮ್ಮ ಮಕ್ಕಳ ಭವಿಷ್ಯದ ಹಿತ ಮುಖ್ಯವಾಗಿರುತ್ತದೆ. ಪಾದಾಚಾರಿಗಳು ಪುಟ್ ಬಾತ್ ಮೇಲೆ ನಡೆದುಕೊಂಡು ಹೋಗಬೇಕು. ಹಾಗಾಗಿ ತಮ್ಮ ಅಂಗಡಿಗಳನ್ನು ತೆರುವುಗೊಳಿಸಬೇಕು. ಇದರಿಂದ ಬಹಳ ಅಪಘಾತಗಳು ನಡೆಯುವುದು ಕಮ್ಮಿಯಾಗುತ್ತದೆ ಎಂದು ಮನವಿ ಮಾಡಿದರು.
ನಾವು ಹಲವಾರು ವರ್ಷಗಳಿಂದ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕಾರಣಕ್ಕೂ ಅಂಗಡಿ ತೆರವುಗೊಳಿಸಲಿಕ್ಕೆ ಬಿಡುವುದಿಲ್ಲ ಎಂದು ಜನರು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಏಕ ಬಳಕೆ ಪ್ಲಾಸ್ಟಿಕ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಟ್ಟಣ ಪಂಚಾಯಿತಿ ಶುಕ್ರವಾರ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ಪುಟ್ ಬಾತ್ ಅಕ್ರಮವಾಗಿ ಇರುವ ಅಂಗಡಿಗಳನ್ನು ತೆರುವುಗೊಳಿಸುವಂತೆ ಎರಡು ದಿನ ಪಟ್ಟಣ ಪಂಚಾಯಿತಿ ಕಾಲಾವಕಾಶ ನೀಡಿತು.