ಕನ್ನಡಪ್ರಭ ವಾರ್ತೆ ಚನ್ನಗಿರಿ
ವಡ್ನಾಳ್ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಈ ಹಿಂದೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಂಜಿನಪ್ಪ ಇವರ ಸದಸ್ಯ ಸ್ಥಾನವು ಅನುರ್ಜಿತಗೊಂಡ ಕಾರಣ ಬುಧುವಾರ ಬ್ಯಾಂಕ್ ಸರ್ವ ಸದಸ್ಯರ ಸಭೆ ನಡೆದು ಡಿ.ಸಿ ಕುಮಾರ್‌ರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಆಯ್ಕೆ ಪ್ರಕ್ರಿಯೆ ಮುಗಿದ ನಂತರ ನೂತನ ಬ್ಯಾಂಕ್ ನಿರ್ದೇಶಕ ಕುಮಾರ್ ಮಾಡಾಳು ವಿರೂಪಾಕ್ಷಪ್ಪ, ಮಾಡಾಳು ಮಲ್ಲಿಕಾರ್ಜುನ್‌ರನ್ನು ಅವರ ಗೃಹ ಕಚೇರಿಯಲ್ಲಿ ಅಭಿನಂದಿಸಿದರು. ಈ ವೇಳೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಯಾವುದೇ ಆಧಿಕಾರವಾಗಲಿ ಅದು ಶಾಶ್ವತ ಅಲ್ಲ ಸಿಕ್ಕಂತಹ ಅವಕಾಶದಲ್ಲಿ ಜನತೆಗೆ, ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡಿಕೊಟ್ಟಾಗ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯವಾಗಿದೆ ಎಂದು ಹೇಳುತ್ತಾ, ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲಸೌಲಭ್ಯ ನೀಡಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಡಿ.ಸಿ.ಕುಮಾರ್‌ರನ್ನು ಅಭಿನಂದಿಸಿದರು.ಈ ವೇಳೆ ಬ್ಯಾಂಕ್ ನಿರ್ದೇಶಕ ಗಂಗಗೊಂಡನಹಳ್ಳಿ ಜಗದೀಶ್, ಕೋಗಲೂರು ಉಮೇಶ್, ಬಿಜೆಪಿ ಮುಖಂಡ ದಿಗ್ಗೇನಹಳ್ಳಿ ನಾಗರಾಜ್, ರಂಗಸ್ವಾಮಿ ಸೇರಿ ಮೊದಲಾದವರಿದ್ದರು.