ದೇವಿ ಆರಾಧನೆಯಿಂದ ನಾಡಿಗೆ ಮಳೆ, ಬೆಳೆ ಸಮದ್ದಿಯಾಗುತ್ತದೆ ಎಂಬ ನಂಬಿಕೆಯಿಂದ ಚಾಮುಂಡೇಶ್ವರಿ ತಾಯಿಗೆ ರಾಜ್ಯಾದ್ಯಂತ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಆಯಸ್ಸು, ಆರೋಗ್ಯದ ಜೊತೆಗೆ ನೆಮ್ಮದಿಯಿಂದ ಬದುಕುವಂತೆ ನಾಡದೇವತೆ ಅರ್ಶೀವದಿಸಲಿ.
ಮಳವಳ್ಳಿ:
ಆಷಾಢ ಮಾಸದ ಅಂಗವಾಗಿ ನಾಡದೇವತೆ ಚಾಮುಂಡೇಶ್ವರಿ ತಾಯಿ ಪೂಜಾ ಮಹೋತ್ಸವ ಪಟ್ಟಣದಲ್ಲಿ ಭಕ್ತಿ ಪ್ರಧಾನವಾಗಿ ಜರುಗಿತು.
ಪಟ್ಟಣದ ಗಂಗಾಮತ ಬೀದಿಯಲ್ಲಿ ಸಿದ್ದಯ್ಯರ ಕುಟುಂಬ ವತಿಯಿಂದ ಚಾಮುಂಡೇಶ್ವರಿ ದೇವತೆಗೆ ವಿಶೇಷ ಪೂಜೆ, ಅಭಿಷೇಕ, ಮತ್ತು ವಿವಿಧ ಬಗೆಯ ಪುಷ್ಟ ಅಲಂಕಾರದ ಮೂಲಕ ಪೂಜಾ ಕೈಂಕರ್ಯ ನೆರೆವೇರಿಸಿ ತಾಯಿಗೆ ಧನ್ಯತೆ ಮೆರೆದರು.
ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿ, ದೇವಿ ಆರಾಧನೆಯಿಂದ ನಾಡಿಗೆ ಮಳೆ, ಬೆಳೆ ಸಮದ್ದಿಯಾಗುತ್ತದೆ ಎಂಬ ನಂಬಿಕೆಯಿಂದ ಚಾಮುಂಡೇಶ್ವರಿ ತಾಯಿಗೆ ರಾಜ್ಯಾದ್ಯಂತ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಆಯಸ್ಸು, ಆರೋಗ್ಯದ ಜೊತೆಗೆ ನೆಮ್ಮದಿಯಿಂದ ಬದುಕುವಂತೆ ನಾಡದೇವತೆ ಅರ್ಶೀವದಿಸಲಿ ಎಂದು ಕೋರಿದರು.
ದೇವರ ದರ್ಶನ ಪಡೆದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಶಿವು, ನಂಜುಂಡಯ್ಯ, ವೆಂಕಟೇಶ್, ಗುಂಚಕ್ಕಿ ಶಿವು, ಸ್ಟುಡಿಯೋ ವೆಂಕಟೇಶ್, ರಾಜು, ಅಪೋಲೋ ಕೃಷ್ಣ, ಸೋಮ ಸೇರಿದಂತೆ ಇತರರು ಇದ್ದರು. ಶ್ರೀಸಿದ್ದಪ್ಪಾಜಿ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವುಮಂಡ್ಯ:
ತಾಲೂಕಿನ ಗುಡಿಗೆನಹಳ್ಳಿಯಲ್ಲಿ ಕುಂಬಾರ ಸಮಾಜದ ಬಾಂಧವರು ನೂತನವಾಗಿ ನಿರ್ಮಿಸುತ್ತಿರುವ ಶ್ರೀಸಿದ್ದಪ್ಪಾಜಿ ದೇವಾಲಯ ನಿರ್ಮಾಣಕ್ಕೆ ಎಂ.ಎಂ.ಫೌಂಡೇಶನ್ ವತಿಯಿಂದ ಆರ್ಥಿಕ ನೆರವು (ಧನಸಹಾಯ) ನೀಡಲಾಯಿತು.ಈ ವೇಳೆ ದೇವಾಲಯ ನಿರ್ಮಾಣ ಸಮಿತಿ ಹಾಗೂ ಶ್ರೀಮಂಟೇಸ್ವಾಮಿ ಕುಂಬಾರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಚಂದ್ರಪ್ಪ, ಕಾರ್ಯದರ್ಶಿ ಶ್ರೀ ಸತೀಶ್ ಕುಮಾರ್, ಖಜಾಂಚಿ ಶ್ರೀ ರಮೇಶ್, ಗ್ರಾಮಸ್ಥರಾದ ರಾಜ್, ಶೆಟ್ಟಿ, ಕುಮಾರ್, ನಿಂಗರಾಜ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡರು ದೇವಾಲಯದ ನಿರ್ಮಾಣ ಕಾರ್ಯವು ಶೀಘ್ರವಾಗಿ ಪೂರ್ಣಗೊಂಡು ಶ್ರೀ ಸಿದ್ದಪ್ಪಾಜಿ ಸ್ವಾಮಿ ಭಕ್ತರಿಗೆ ನೆರವಾಗಲಿ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರನ್ನು ಕಾಪಾಡಲಿ ಎಂದು ಪ್ರಾರ್ಥಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.