ಮಲೇಬೆನ್ನೂರು: ಪಟ್ಟಣದ ಪುರಸಭೆ ನಾಡ ಕಚೇರಿ, ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಸರಳವಾಗಿ ಆಚರಿಸಲಾಯಿತು.
ಕುಂಬಳೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಭಾರ ಪ್ರಾಚಾರ್ಯ ಹನುಮಂತಯ್ಯ ಅಧ್ಯಕ್ಷತೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಾದ ಲೋಹಿತ್, ಮೆಹಬೂಬಿ, ಭಾಗ್ಯ ಅವರನ್ನು ಗೌರವಿಸು ಮೂಲಕ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಿಸಲಾಯಿತು. ಉಪನ್ಯಾಸಕ ತೆಲಿಗಿ ಮಂಜುನಾಥ್ ಉಪನ್ಯಾಸ ನೀಡಿದರು. ಶಾಲಾ ಉಸ್ತುವಾರಿ ಸಮಿತಿಯ ಬೆನ್ನೂರು ರಮೇಶ್, ಕಲ್ಲೇಶ್, ಎಂ.ಪರಮೇಶ್ವರಪ್ಪ, ಡಿ.ಕರಿಬಸಪ್ಪ, ಸದಾನಂದ, ಶ್ರೀನಿವಾಸಮೂರ್ತಿ, ಮುಖ್ಯಶಿಕ್ಷಕ ಗೋವಿಂದಪ್ಪ, ಶಿಕ್ಷಕಿ ನಾಗವೇಣಿ ಮಾತನಾಡಿದರು.
ಇಲ್ಲಿಗೆ ಸಮೀಪದ ಧುಳೆಹೊಳೆ, ಆದಾಪುರ, ಕಡರನಾಯ್ಕನಹಳ್ಳಿ, ದೇವರಬೆಳಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ್ತು ಕೊಕ್ಕನೂರು ಅಂಜನಾದೇವಿ ಶಾಲೆಯಲ್ಲಿಯೂ ಜಯಂತಿ ಆಚರಿಸಲಾಗಿದೆ.- - - -೨ಎಂಬಿಆರ್೨:
ಕುಂಬಳೂರು ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.