- ನಾಟಕ ಅಕಾಡೆಮಿ, ರಂಗ ಸಮಾಜ ಸದಸ್ಯರಾಗಿ ಅನುಭವಿ
ಕಳೆದ 2 ವರ್ಷಗಳಿಂದಲೂ ಖಾಲಿ ಇದ್ದ ದಾವಣಗೆರೆ ವೃತ್ತಿ ರಂಗಾಯಣ ನಿರ್ದೇಶಕರ ಹುದ್ದೆಗೆ ಮುಂದಿನ 3 ವರ್ಷಗಳ ಅವಧಿಗೆ ಮಲ್ಲಿಕಾರ್ಜುನ ಕಡಕೋಳ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿ, ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಮಲ್ಲಿಕಾರ್ಜುನ ಕಡಕೋಳ ರಂಗಾಸಕ್ತರು ಮತ್ತು ಸರ್ಕಾರದ ಗಮನ ಸೆಳೆದಿದ್ದರು. ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಕಡಕೋಳರ ಪರಿಶ್ರಮ ಗಮನಾರ್ಹ. "ವೃತ್ತಿ ರಂಗಭೂಮಿ: ವರ್ತಮಾನದ ಸವಾಲುಗಳು " ವಿಷಯದ ಮೇಲೆ ಕಡಕೋಳ ಫೆಲೋಶಿಪ್ ಮಾಡಿದ್ದಾರೆ.ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ಸರ್ಕಾರ ನೇಮಕ ಮಾಡಿದೆಯೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ರಂಗಭೂಮಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡುವ ಕೆಲಸ ಸರ್ಕಾರದಿಂದ ಆಗಿದೆ.
ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣಗಳ ಕಾರ್ಯ ಚಟುವಟಿಕೆಗಳನ್ನು ವೇಗ ಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ.
- - - -12ಕೆಡಿವಿಜಿ18:ಮಲ್ಲಿಕಾರ್ಜುನ ಕಡಕೋಳ