ಮಲ್ಲಿಕಾರ್ಜುನ ಮುರುಘರಾಜೇಂದ್ರ ಗಳ ಸೇವೆ ಅನನ್ಯ

KannadaprabhaNewsNetwork |  
Published : Aug 09, 2025, 02:03 AM IST
ಚಿತ್ರ:೧.  ಸ್ಮರಣೋತ್ಸವ ಸಮಾರಂಭದಲ್ಲಿ ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.೨. ಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದ ಸಂತರು ಮತ್ತು ಭಕ್ತರು. | Kannada Prabha

ಸಾರಾಂಶ

ಸ್ಮರಣೋತ್ಸವ ಸಮಾರಂಭದಲ್ಲಿ ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಗಳು 30 ವರ್ಷಗಳಿಗೂ ಹೆಚ್ಚು ಕಾಲ ಪೀಠಾಧ್ಯಕ್ಷರಾಗಿ ಭಕ್ತ ಸಮೂಹಕ್ಕೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಕ ಜೊತೆಗೆ ಸಮಾಜ ಕಟ್ಟುವ, ದಾಸೋಹ ವ್ಯವಸ್ಥೆ ಕಲ್ಪಿಸುವ ಹತ್ತು ಹಲವು ಸೇವೆಗಳಿಂದ ಸಮಾಜೋಭಿವೃದ್ಧಿಗೆ ಶ್ರಮಿಸಿದ್ದರ ಕಾರಣದಿಂದ ಅಪಾರ ಸಂಖ್ಯೆಯ ಭಕ್ತಸಮೂಹವನ್ನು ಸೃಷ್ಟಿಸಿದರು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.

ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ 31ನೇ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿ ಚಿತ್ಕಳೆ ಪರಿಷ್ಕೃತ ಮತ್ತು ವಿಸ್ತÈತ ಆವೃತ್ತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ, ಗಳು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದ ಫಲವಾಗಿ ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಗಿದೆ. ಅಂತಹ ಮಹಾನ್ ಚೇತನ ಕುರಿತು ಚಿನ್ಮೂಲಾದ್ರಿ ಚಿತ್ಕಳೆ ಕೃತಿ ಬಿಡುಗಡೆಯಾಗಿದೆ. ಇದು ಪ್ರತಿಯೊಂದು ಗ್ರಂಥಾಲಯ, ಶಿಕ್ಷಣಸಂಸ್ಥೆಗಳಲ್ಲಿ, ಮನೆ-ಮನೆಗಳಲ್ಲಿ ಇರುವಂತಾದರೆ ಅವರ ಆದರ್ಶ ನಿಲುವುಗಳನ್ನು ತಿಳಿದು ನಡೆಯಲು ಸಹಕಾರಿಯಾಗುತ್ತದೆ ಎಂದರು.

ಹೊಳಲ್ಕೆರೆ ಮಾಜಿ ಶಾಸಕ ಪಿ.ರಮೇಶ್ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ಜೀವನಶೈಲಿ ಪ್ರಸ್ತುತ ಜನಮಾನ್ಯರಲ್ಲಿ ಆಳವಾಗಿ ಬೇರೂರಿದೆ. ಗಳು ಎಲ್ಲಿ ಜನ ಬಡತನದ ಜೀವನ ನಡೆಸುತ್ತಿದ್ದರೋ ಅಂಥವರನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದರು. ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಕಲ್ಪಿಸಿದರು. ಶಿಕ್ಷಣ ಎಲ್ಲಿ ವೃದ್ಧಿಯಾಗುತ್ತದೋ ಅಲ್ಲಿ ಸಮಾಜದ ಏಳಿಗೆಯಾಗುತ್ತದೆ ಎಂದು ಆಲೋಚಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಗಳು ಅನೇಕರಿಗೆ ಲಿಂಗದೀಕ್ಷೆ ನೀಡಿದವರಾಗಿದ್ದಾರೆ. ಕಾಯಕ ಸಂಸ್ಕೃತಿಯ ಮೂಲಕ ಬಸವಾದಿ ಶರಣರು 12ನೇ ಶತಮಾನದಲ್ಲಿ ಶ್ರಮಿಸಿದರೆ ಅವರ ಹಾದಿಯಲ್ಲೇ ಕಾಯಕಯೋಗಿಯಾಗಿ ದುಡಿದಂತವರಾಗಿದ್ದಾರೆ ಮಲ್ಲಿಕಾರ್ಜುನ ಮಹಾಸ್ವಾಮೀಜಿ. ಅವರು ಹೊಳಲ್ಕೆರೆಯಲ್ಲಿ ಐಕ್ಯವಾಗುವುದರ ಮೂಲಕ ಈ ಕ್ಷೇತ್ರವನ್ನು ಹೊಳೆವಕೆರೆಯನ್ನಾಗಿಸಿ ಇತಿಹಾಸದ ಪುಟಗಳಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ಆಡಳಿತ ಮಂಡಳಿ ಸದಸ್ಯರಾದ ಡಾ.ಪಿ.ಎಸ್.ಶಂಕರ್ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ಜನರಲ್ಲಿ ಶಿಕ್ಷಣ ಜ್ಞಾನ ತುಂಬಲು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಅನೇಕ ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡಿ ಸಾರ್ವಜನಿಕರ ಏಳಿಗೆಗೆ ಶ್ರಮಿಸಿದವರು. ಅಂದು ಅವರು ಹಾಕಿದ ಅಡಿಪಾಯದಿಂದಾಗಿ ಇಂದು ಮಠವು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ಆ. 8ರಂದು ಬಯಲೊಳಗಾಗಿ ಹೊಳಲ್ಕೆರೆಗೆ ಬಂದರು. ಅವರು ಹೇಳಿದಂತೆ ನಡೆದವರು. ತಮ್ಮ ಕಾಲದ ದಿನವನ್ನು ಮುಂಚಿತವಾಗಿ ತಿಳಿಸಿದವರು. ಲಿಂಗ ಎಂದರೆ ಶಕ್ತಿದೇವತೆ. ಜ್ಯೋತಿರ್ಲಿಂಗವಾಗಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನದಂತೆ ನಡೆದವರು ಗಳು. ಮುತ್ತಿನ ಹಾರದಂತೆ ಇದ್ದು ಕೊಟ್ಟಮಾತು ತಪ್ಪದವರು ಗಳು. ಅವರಲ್ಲಿ ಬಸವಣ್ಣನವರ ಬಗ್ಗೆ ಅಪಾರವಾದ ಭಕ್ತಿ ಇತ್ತು. ಅದಕ್ಕೆ ಪೂರಕವಾಗಿ ಬಸವಣ್ಣ ಭಕ್ತ ನಾವು ಭವಿಗಳು ಎಂದು ನುಡಿದಿರುವುದನ್ನು ಸ್ಮರಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥದಲ್ಲಿ ಮಲ್ಲಿಕಾರ್ಜುನ ಜಗದ್ಗುರುಗಳ ಚಿತ್ರಣವನ್ನು ಕಣ್ತುಂಬಿ ಬರುವಂತೆ ರಚಿಸಲಾಗಿದೆ. ಇಡೀ ರಾಜ್ಯದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಮುರುಘಾ ಮಠದ ಕೀರ್ತಿಯನ್ನು ಎತ್ತಿಹಿಡಿದವರಾಗಿದ್ದಾರೆ. ಅವರನ್ನು ಶಿಕ್ಷಣ ಸೂರ್ಯ ಎಂದು ಕರೆದರೆ ತಪ್ಪಾಗಲಾರದು. ಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯ ಕರ್ನಾಟಕದ ಶಿಕ್ಷಣ ಕ್ಷೇತ್ರದ ಹರಿಕಾರ ಎಂದರೆ ತಪ್ಪಾಗಲಾರದು. ಗಳು ತಮ್ಮ ಲೀಲಾ ವಿಶ್ರಾಂತಿ ಪಡೆಯಲು ಹೊಳಲ್ಕೆರೆ ಆಯ್ಕೆ ಮಾಡಿಕೊಂಡಿರುವುದು ನಮ್ಮ ಈ ತಾಲೂಕಿನ ಜನತೆಯ ಪುಣ್ಯ ಎಂದರು.

ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳ ಬಗ್ಗೆ ಹೊರತರಲಾಗಿರುವ 636 ಪುಟಗಳ ಚಿನ್ಮೂಲಾದ್ರಿ ಚಿತ್ಕಳೆ ಪುಸ್ತಕ ಇಂದು ಬೃಹತ್ ಗ್ರಂಥವಾಗಿ ಹೊರಹೊಮ್ಮುತ್ತಿದೆ. ಇದು ಪರಿಷ್ಕೃತ ಮತ್ತು ವಿದತೃತ ಗ್ರಂಥವಾಗಿದೆ ಎಂದು ಹೇಳಿದರು.

ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ಚಿನ್ಮೂಲಾದ್ರಿ ಚಿತ್ಕಳೆ ಬೃಹತ್ ಗ್ರಂಥದ ಪ್ರಧಾನ ಸಂಪಾದಕ ಪ್ರೊ.ಲಕ್ಷ್ಮಣ ತೆಲಗಾವಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಣ ತೆಲಗಾವಿ ಪ್ರಧಾನ ಸಂಪಾದಕತ್ವ, ಕೆ.ಎಲ್.ರಾಜಶೇಖರ್ ಸಂಪಾದಕತ್ವದಲ್ಲಿ ಹೊರತಂದಿರುವ ಚಿನ್ಮೂಲಾದ್ರಿ ಚಿತ್ಕಳೆ ಪರಿಷ್ಕೃತ ವಿಸ್ತೃತ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಇದಕ್ಕೂ ಮುನ್ನ ಶಿವಯೋಗಿ ಸಿ.ಕಳಸದ ಅವರು ಬಸವತತ್ತ್ವ ಧ್ಯಜಾರೋಹಣ ನೆರವೇರಿಸಿದರು. ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಕೊಡ್ಲಿಪೇಟೆ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಗುರುಮಠಕಲ್, ಬಸವಲಿಂಗಮೂರ್ತಿ ಸ್ವಾಮೀಜಿ ಉಳವಿ, ಶರಣೆ ಸತ್ಯಕ್ಕ ಬೀದರ್, ಬೈರಮಂಗಲ ರಾಮೇಗೌಡ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹಡಿ ಶಿವಮೂರ್ತಿ ವೇದಿಕೆಯಲ್ಲಿದ್ದರು. ಮಹಾಲಿಂಗ ಸ್ವಾಮೀಜಿ ತಂಗನಹಳ್ಳಿ, ಬಸವ ಭಂಗೇಶ್ವರ ಸ್ವಾಮೀಜಿ, ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಮರುಳಶಂಕರ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಶಿಕಾರಿಪುರ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಬ್ಯಾಡಗಿ, ಶರಣೆ ಮುಕ್ತಾಯಕ್ಕ ಸೇರಿದಂತೆ ಹರಗುರುಚರಮೂರ್ತಿಗಳು ಎಲ್.ರಾಜಶೇಖರ್, ಕೆಇಬಿ ಷಣ್ಮುಖಪ್ಪ ಭಾಗವಹಿಸಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ