ದ್ವೇಷದ ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿಯ ಹಣತೆ ಹಚ್ಚೋಣ – ವಂ. ಕುಮಾರ್ ಸಾಲಿನ್ಸ್

KannadaprabhaNewsNetwork |  
Published : Jan 24, 2026, 03:45 AM IST
ಮಲ್ಪೆ | Kannada Prabha

ಸಾರಾಂಶ

ಸಿಎಸ್ಐ ಎಬನೇಜರ್ ಚರ್ಚಲ್ಲಿ ಜರುಗಿದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆ

ಕನ್ನಡಪ್ರಭ ವಾರ್ತೆ ಮಲ್ಪೆ: ದ್ವೇಷದ ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಎಂಬ ಹಣತೆಗಳನ್ನು ಹಚ್ಚಿ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ನೀಡುವುದು ಇಂದಿನ ಆದ್ಯತೆಯಾಗಬೇಕು ಎಂದು ಇಲ್ಲಿನ ಯುಬಿಎಂ ಚರ್ಚ್‌ನ ವಂ. ಕುಮಾರ್ ಸಾಲಿನ್ಸ್ ಹೇಳಿದರು.

ಇಲ್ಲಿನ ಸಿಎಸ್ಐ ಎಬನೇಜರ್ ಚರ್ಚಲ್ಲಿ ಜರುಗಿದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು.ಯೇಸು ಸ್ವಾಮಿಯು ಮರಣವನ್ನು ಜಯಿಸಿ ಪುನರುತ್ಥಾನದ ಬೆಳಕನ್ನು ನಮಗೆ ನೀಡಿದ್ದಾರೆ. ಅಂತೆಯೇ ನಾವು ಕೂಡ ಕತ್ತಲನ್ನು ತುಂಬಿದ ದುರ್ಬಲರ ಬದುಕಿನಲ್ಲಿ ಪ್ರೀತಿಯ ಹಣತೆ ಹಚ್ಚುವ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದರು.ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಸಹಾಯಕ ಧರ್ಮಗುರು ವಂ. ಪ್ರದೀಪ್ ಕಾರ್ಡೊಜಾ ತಮ್ಮ ಪ್ರಬೋಧನೆಯಲ್ಲಿ ಪರರನ್ನು ಪ್ರೀತಿಸದ ಮಾನವ ಹೃದಯ ಸ್ಮಶಾನಕ್ಕೆ ಸಮ. ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋಭಾವ ವೃದ್ಧಿಗೊಳಿಸಬೇಕು. ಸಮಾಜದಲ್ಲಿ ನಿರ್ಗತಕರನ್ನು ಅನಾಥರನ್ನು ಪ್ರೀತಿಸುವ ಮೂಲಕ ಯೇಸು ಸ್ವಾಮಿ ತೋರಿಸಿದ ದಾರಿಯಲ್ಲಿ ಸಾಗಬೇಕು ಎಂದರು. ಪ್ರಾರ್ಥನಾ ಕೂಟದ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರುಗಳಾದ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ವಹಿಸಿದ್ದರು.

ಪ್ರಾರ್ಥನಾ ಕೂಟದಲ್ಲಿ ವಂ.ಡಾ.ರೋಕ್ ಡಿಸೋಜಾ, ವಂ.ಜೋನ್ ಫರ್ನಾಂಡಿಸ್, ವಂ.ವಿಲ್ಸನ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ, ವಂ. ಜೋಕಿಮ್ ಡಿಸೋಜಾ, ಸಿಎಸ್ ಐ ಸಭೆಯ ಉಡುಪಿ ವಲಯ ಮುಖ್ಯಸ್ಥರಾದ ವಂ.ಕಿಶೋರ್, ವಂ.ಎಡ್ವಿನ್ ಸೋನ್ಸ್, ತೊಟ್ಟಂ ಚರ್ಚಿನ ಪಾಲನಾ ಸಮಿತಿಯ ಲೆಸ್ಲಿ ಆರೋಜಾ, ಸಿಸ್ಟರ್ ಸುಶ್ಮಾ, ರೋಮನ್ ಕ್ಯಾಥೊಲಿಕ್, ಸಿಎಸ್ ಐ, ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು. ಸಿಎಸ್ ಐ ಎಬನೇಜರ್ ಚರ್ಚ್ ಮಲ್ಪೆ ಪಾಸ್ಟರ್ ವಂ. ವಿನಯ್ ಸಂದೇಶ್ ಸ್ವಾಗತಿಸಿ, ಲೂವಿಸ್ ಫರ್ನಾಂಡಿಸ್ ವಂದಿಸಿದರು. ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ