ಕನ್ನಡಪ್ರಭ ವಾರ್ತೆ ಮಾಲೂರು
ರಾಜ್ಯ ಸರ್ಕಾರ ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯ ರಸ್ತೆಯ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದ ಅವರುಮಾಲೂರು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ದಿನ ಈ ದಿನವಾಗಿದೆ, ಶಾಸಕರ ಸತತ ಪರಿಶ್ರಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಸರ್ಕಾರ ಏರಿಸಿದೆ. ಇದುವರೆಗೂ ಪಟ್ಟಣ ಎಂದು ಕರೆಯುತ್ತಿದ್ದ ನಾವು ಇಂದಿನಿಂದ ಮಾಲೂರು ನಗರವಾಗಿದೆ ಎಂದರು.
ವಿರೋಧ ಪಕ್ಷಕ್ಕೆ ಎಚ್ಚರಿಕೆ ಗಂಟೆಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎಂ.ವಿಜಯನರಸಿಂಹ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶಾಸಕರ ಅಭಿವೃದ್ಧಿಯನ್ನು ಪ್ರಶ್ನಿಸಿರುವ ವಿರೋಧ ಪಕ್ಷದವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.ಪುರಸಭೆ ಅಧ್ಯಕ್ಷ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷೆ ಕೋಮಲ, ಸ್ಥಾಯಿಸಮಿತಿ ಅಧ್ಯಕ್ಷ ಎ.ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂದನ್, ಪ್ರದೀಪ್ ರೆಡ್ಡಿ, ಹನುಮಂತಪ್ಪ, ನಾಯಿಂ ಉಲ್ಲಾ, ಪುರಸಭೆ ಸದಸ್ಯರಾದ ಮುರಳಿ, ಜಾಕೀರ್, ಪರಮೇಶ್ವರ್, ಭವ್ಯ, ವೆಂಕಟೇಶ್, ಶೈಲಾ, ಸತೀಶ್ ರಾಜಣ್ಣ, ದಿನ್ನಹಳ್ಳಿ ರಮೇಶ್, ತನ್ವಿವೀರ್, ತಿಮ್ಮೇಗೌಡ, ಆಂಜನಪ್ಪ, ತನು, ವಸಂತ್, ಶಬೀರ್, ಇನ್ನಿತರರು ಹಾಜರಿದ್ದರು.