105ರ ತಾಯಿ-85ರ ಮಗಳ ಅಪರೂಪದ ಭೇಟಿ

KannadaprabhaNewsNetwork |  
Published : Sep 16, 2026, 02:45 AM IST
20 ವರ್ಷದ ಬಳಿಕ ಒಂದಾದ ತಾಯಿ-ಮಗಳು! | Kannada Prabha

ಸಾರಾಂಶ

ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ

ಬೆಳ್ತಂಗಡಿ: ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ

ಮಕ್ಕಿಯಲ್ಲಿ ಮಕ್ಕಳ ಜೊತೆ ವಾಸ ಇರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರು ಸುಶೀಲಾ. ಅವರಿಗೀಗ 85 ವಯಸ್ಸು. ಸೀತಮ್ಮ ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನಲ್ಲಿ ಸಾಗಿ ಬಳಿಕ ಒಂದೂವರೆ ಕಿಲೋ ಮೀಟರ್ ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕು. ಸುಶೀಲಾ ಅವರು ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ವಾಸವಾಗಿದ್ದಾರೆ. ದೂರ ದೂರ ಇರುವ ತಾಯಿ–ಮಗಳು ಒಂದಾಗಿ ಸುಮಾರು 20 ವರ್ಷ ಸಂದಿತ್ತು. ಹಿಂದಿನ ನೆನಪು ಮಾತ್ರ ಮನಸ್ಸಲ್ಲಿ ಉಳಿದಿತ್ತು. ಮುತ್ತಜ್ಜಿ ಸೀತಮ್ಮ ಅವರಿಗೆ ವಯಸ್ಸಿನ ಕಾರಣ ಮಗಳ ಬಳಿ ಬರಲು ಸಾಧ್ಯರಲಿಲ್ಲ. ಮಗಳು ಸುಶೀಲಾ ಅವರಿಗೆ ಅನಾರೋಗ್ಯದ ಕಾರಣದಿಂದ ತಾಯಿ ಬಳಿ ಹೋಗಲು ಸಾಧ್ಯವಾಗದೆ ಹಲವು ವರ್ಷವಾಗಿತ್ತು. ಆದರೆ ಮೊಮ್ಮಕ್ಕಳು ಅಜ್ಜಿ ಆಸೆ ಪೂರೈಸಲು ಸುಶೀಲಾ ಅವರನ್ನು ಕರೆದುಕೊಂಡು ದಟ್ಟ ಕಾಡಿನ ಕಚ್ಛಾ ರಸ್ತೆಯ ಮೂಲಕ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ಜೀಪಿನಲ್ಲಿ ಅಜ್ಜಿಯನ್ನು ಕರೆದುಕೊಂಡು ಸಾಗಿದರೂ ಮುತ್ತಜ್ಜಿ ಮನೆಯವರೆಗೂ ವಾಹನ ಸಾಗಲು ಸಾಧ್ಯವಿಲ್ಲ. ಹೀಗಾಗಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಮನೆ ತಲುಪಿದ್ದಾರೆ. ಅಜ್ಜಿಯನ್ನು ಕರೆದುಕೊಂಡು ಮುತ್ತಜ್ಜಿ ಮನೆಗೆ ತೆರಳಬೇಕು ಎನ್ನುವುದು ಮೊಮ್ಮಕ್ಕಳಾದ ನಮ್ಮ ಆಸೆಯಾಗಿತ್ತು. ಆದರೆ ಅಜ್ಜಿಗೆ ವಯಸ್ಸಾದ ಕಾರಣ, ಮುತ್ತಜ್ಜಿ ಮನೆಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ. ಕೇಶವ ಮೊಮ್ಮಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಅಗ್ನಿ ದುರಂತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಬರಘೋಷಣೆಗೆ ಆಗ್ರಹಿಸಿ ೨೧ರಂದು ತಾಳಿಕೋಟೆ ಬಂದ್‌