ಕನ್ನಡಪ್ರಭ ವಾರ್ತೆ ವಿಜಯಪುರ
14ನೇ ವರ್ಷದ ಶ್ರಾವಣ ಮಾಸದ ತಪೋನುಷ್ಠಾನ ಮತ್ತು ಮಹಾತ್ಮರ ಬದುಕು ಮತ್ತು ಬೆಳಕು ಪ್ರವಚನದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಏನೂ ಗೊತ್ತಿರದ ಮಗುವಿಗೆ ಚಿಕ್ಕವನಿದ್ದಾಗ ಇದು ನಿನ್ನದು, ಇವರು ನಿನ್ನವರು, ಇದು ನಿನ್ನ ಮನೆ, ಇದು ನಿನ್ನ ಅಂಗಡಿ, ಇದು ನಿನ್ನ ಹೊಲ ಎಂದು ಹೇಳುವುದರಿಂದ ಮನುಷ್ಯನಿಗೆ ಮಮಕಾರದ ಬಂಧನ ಪ್ರಾಪ್ತವಾಗಿರುತ್ತದೆ. ಈ ಮಮಕಾರವೇ ಮನುಷ್ಯನ ಎಲ್ಲ ದುಃಖಗಳಿಗೆ ಕಾರಣವಾಗಿರುವುದರಿಂದ ಜೀವಾತ್ಮನ ದುಃಖ ನಿವೃತ್ತಿಯಾಗಬೇಕಾದರೇ ಮೊದಲು ಮಮಕಾರವನ್ನು ಕಳೆದುಕೊಳ್ಳುವುದು ಅತೀ ಅವಶ್ಯಕ. ಅಂತೆಯೇ ಗುರುಗಳು ತಮ್ಮ ಬಳಿಗೆ ಬಂದ ಶಿಷ್ಯನಿಗೆ ಇದಾವುದೂ ನಿನ್ನದಲ್ಲ, ಇವರಾರೂ ನಿನ್ನವರಲ್ಲ, ಎಂದು ವಿರತಿಯ ಉಪದೇಶ ಮಾಡುತ್ತಾನೆ. ಹೀಗೆ ಬಂಧುಗಳ ಮಾತು ಕೇಳುವುದರಿಂದ ಬಂದ ಬಂಧನ ಗುರುಪದೇಶದ ಶ್ರವಣದಿಂದ ನಿವೃತ್ತಿಯಾಗುತ್ತದೆ ಎಂದು ವಿವರಿಸಿದರು.ಶ್ರೀಶೈಲ ದೇವಸ್ಥಾನದ ಅಧಿಕಾರಿ ಹರಿದಾಸ ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಯಲ್ಲಿ ಪೀಠದ ಮಾರ್ಗದರ್ಶನ ಅತ್ಯಂತ ಅವಶ್ಯಕ. ರಾಜ್ಯದ ತುಂಬೆಲ್ಲ ಅಲ್ಲಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾಗಬೇಕು. ಇದರ ಜವಾಬ್ದಾರಿಯನ್ನು ಶ್ರೀಶೈಲ ಪೀಠದ ಜಗದ್ಗುರುಗಳು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ವಿಜಯಪುರದ ಸಿದ್ಧಲಿಂಗೇಶ್ವರ ಸ್ವಾಮಿಗಳು ಮಹಾತ್ಮರ ಬದುಕು ಮತ್ತು ಬೆಳಕು ವಿಷಯವನ್ನಾಧರಿಸಿ ತಿಂಗಳ ಪರ್ಯಂತ ನಡೆಯುವ ಪ್ರವಚನವನ್ನು ಪ್ರಾರಂಭಿಸಿದರು. ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕ ವೀರಯ್ಯಸ್ವಾಮಿ ಮತ್ತು ಶಿವಪ್ರಸಾದರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಶೈಲ ಪೀಠದ ಮುಖ್ಯ ಮ್ಯಾನೇಜರ್ ಮಂಜುನಾಥ ಎಂ.ಬಿ.ಸರ್ವರನ್ನು ಸ್ವಾಗತಿಸಿದರು. ಶರಣೆ ನೀಲಮ್ಮ ಸಂಗೀತ ನೀಡಿದರು. ಶ್ರೀಶೈಲದ ವೀರಶೈವ ಗುರುಕುಲ ಹಾಗೂ ಯಡೂರ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು.ಆ.8 ರಿಂದ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವು ಪ್ರಾರಂಭವಾಗಿದ್ದು ಇದರ ನಿಮಿತ್ತವಾಗಿ ಜಗದ್ಗುರುಗಳು ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ, ಭ್ರಮರಾಂಬ ದೇವಿಗೆ ಮತ್ತು ಜಗದ್ಗುರು ಪಂಡಿತರಾಧ್ಯರ ಲಿಂಗೋದ್ಭವ ಮೂರ್ತಿಗೆ ವಿಶೇಷ ಪೂಜೆ ಮತ್ತು ಮಂಗಳಾರತಿಯನ್ನು ಸಲ್ಲಿಸಿ ತಪೋನುಷ್ಠನವನ್ನು ಪ್ರಾರಂಭಿಸಿದರು. ಇದು ಸೆಪ್ಟೆಂಬರ್ 2 ರವರೆಗೆ ಅಖಂಡವಾಗಿ ನಡೆಯಲಿದ್ದು, ಪ್ರತಿದಿನ ವಿಭಿನ್ನ ಪ್ರಾಂತ ನಗರ ಗ್ರಾಮಗಳಿಂದ ಭಕ್ತರು ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಏನೂ ಗೊತ್ತಿರದ ಮಗುವಿಗೆ ಚಿಕ್ಕವನಿದ್ದಾಗ ಇದು ನಿನ್ನದು, ಇವರು ನಿನ್ನವರು, ಇದು ನಿನ್ನ ಮನೆ, ಇದು ನಿನ್ನ ಅಂಗಡಿ, ಇದು ನಿನ್ನ ಹೊಲ ಎಂದು ಹೇಳುವುದರಿಂದ ಮನುಷ್ಯನಿಗೆ ಮಮಕಾರದ ಬಂಧನ ಪ್ರಾಪ್ತವಾಗಿರುತ್ತದೆ. ಈ ಮಮಕಾರವೇ ಮನುಷ್ಯನ ಎಲ್ಲ ದುಃಖಗಳಿಗೆ ಕಾರಣವಾಗಿರುವುದರಿಂದ ಜೀವಾತ್ಮನ ದುಃಖ ನಿವೃತ್ತಿಯಾಗಬೇಕಾದರೇ ಮೊದಲು ಮಮಕಾರವನ್ನು ಕಳೆದುಕೊಳ್ಳುವುದು ಅತೀ ಅವಶ್ಯಕ. ಅಂತೆಯೇ ಗುರುಗಳು ತಮ್ಮ ಬಳಿಗೆ ಬಂದ ಶಿಷ್ಯನಿಗೆ ಇದಾವುದೂ ನಿನ್ನದಲ್ಲ, ಇವರಾರೂ ನಿನ್ನವರಲ್ಲ, ಎಂದು ವಿರತಿಯ ಉಪದೇಶ ಮಾಡುತ್ತಾನೆ. ಹೀಗೆ ಬಂಧುಗಳ ಮಾತು ಕೇಳುವುದರಿಂದ ಬಂದ ಬಂಧನ ಗುರುಪದೇಶದ ಶ್ರವಣದಿಂದ ನಿವೃತ್ತಿಯಾಗುತ್ತದೆ.-ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು,
ಶ್ರೀಶೈಲ ಪೀಠದ ಜಗದ್ಗುರು.