ಕನ್ನಡಪ್ರಭ ವಾರ್ತೆ ಭಟ್ಕಳ
ಸಂತೋಷ ತಂದೆ ರಾಮಾ ನಾಯ್ಕ (35) ಮೃತರು. ವೃತ್ತಿಯಿಂದ ಎಲೆಕ್ಟ್ರಿಷಿಯನ್ ಆಗಿರುವ ಅವರು ಡಿಶ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಹೊನ್ನೆಮಡಿ ಗ್ರಾಮದ ನಿವಾಸಿ ಅರುಣ ಈರಪ್ಪ ನಾಯ್ಕರ ಮನೆಯ ಮೇಲ್ಛಾವಣಿಯಲ್ಲಿ ಟಾಟಾ ಸ್ಕೈ ಡಿಶ್ ಫಿಟ್ಟಿಂಗ್ ನಡೆಸುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪರಿಣಾಮವಾಗಿ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು
ಮೃತನ ಸಹೋದರ ನಾಗೇಶ ತಂದೆ ರಾಮಾ ನಾಯ್ಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಕುಂಬಾರಹುಳ ಕಚ್ಚಿ ಕಾರ್ಮಿಕ ಸಾವುಗಾರೆ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಕುಂಬಾರಹುಳ ಕಚ್ಚಿ ಕಾರ್ಮಿಕ ಮೃತಪಟ್ಟ ಘಟನೆ ಕುಮಟಾ ಪಟ್ಟಣದ ಗುಂದದಲ್ಲಿ ನಡೆದಿದೆ. ತಾಲೂಕಿನ ಮಾಸೂರಿನ ನಿವಾಸಿ ಗಣೇಶ ಹನುಮಂತ ಪಟಗಾರ (೪೬) ಮೃತರು.ಗುಂದದ ರಾಜು ನಾಯ್ಕ ಎಂಬವರ ಮನೆಗೆ ಕಾಂಪೌಂಡ್ ಕಟ್ಟುವ ಗಾರೆ ಕೆಲಸಕ್ಕೆ ಗಣೇಶ ಪಟಗಾರ ಇನ್ನೋರ್ವ ಕಾರ್ಮಿಕನೊಂದಿಗೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹಾರಿಬಂದ ವಿಷಕಾರಿ ಕುಂಬಾರಹುಳಗಳು ಗಣೇಶ ಅವರ ಕೈ ಹಾಗೂ ತುಟಿಗೆ ಕಚ್ಚಿದೆ. ವಿಷದ ತೀವ್ರತೆಗೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ವಾಂತಿ ಮಾಡಿಕೊಂಡಿದ್ದು, ತಕ್ಷಣವೇ ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಮಟಾ: ಗಾರೆ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಕುಂಬಾರಹುಳ ಕಚ್ಚಿ ಕಾರ್ಮಿಕ ಮೃತಪಟ್ಟ ಘಟನೆ ಪಟ್ಟಣದ ಗುಂದದಲ್ಲಿ ನಡೆದಿದೆ. ತಾಲೂಕಿನ ಮಾಸೂರಿನ ನಿವಾಸಿ ಗಣೇಶ ಹನುಮಂತ ಪಟಗಾರ (೪೬) ಮೃತರು.ಗುಂದದ ರಾಜು ನಾಯ್ಕ ಎಂಬವರ ಮನೆಗೆ ಕಾಂಪೌಂಡ್ ಕಟ್ಟುವ ಗಾರೆ ಕೆಲಸಕ್ಕೆ ಗಣೇಶ ಪಟಗಾರ ಇನ್ನೋರ್ವ ಕಾರ್ಮಿಕನೊಂದಿಗೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹಾರಿಬಂದ ವಿಷಕಾರಿ ಕುಂಬಾರಹುಳಗಳು ಗಣೇಶ ಅವರ ಕೈ ಹಾಗೂ ತುಟಿಗೆ ಕಚ್ಚಿದೆ. ವಿಷದ ತೀವ್ರತೆಗೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ವಾಂತಿ ಮಾಡಿಕೊಂಡಿದ್ದು, ತಕ್ಷಣವೇ ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.