ಶ್ರವಣದ ಮೂಲಕ ಕೇಳಿಸಿಕೊಳ್ಳುವ ಸೌಭಾಗ್ಯ ಮನುಷ್ಯನಿಗೆ ಸಿಕ್ಕಿದೆ

KannadaprabhaNewsNetwork |  
Published : Jun 10, 2025, 04:12 AM IST
9ಎಚ್ಎಸ್ಎನ್9:  | Kannada Prabha

ಸಾರಾಂಶ

ಭೂಮಿ ಮೇಲೆ ನಡೆಯುವ ಪ್ರತಿಯೊಂದು ಘಟನೆಯನ್ನು ನೋಡುವ ಮತ್ತು ಕೇಳಿಸಿಕೊಳ್ಳುವ ಸೌಭಾಗ್ಯವನ್ನು ಭಗವಂತ ಮನುಷ್ಯನಿಗೆ ಕೊಟ್ಟಿದ್ದಾನೆ. ಅದನ್ನು ಸವಿಯುವ ಅವಕಾಶ ಕಳೆದುಕೊಳ್ಳಬಾರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ತಿಳಿಸಿದರು. ಭೂಮಿ ಮೇಲೆ ನಡೆಯುವ ಪ್ರತಿಯೊಂದು ಘಟನೆಯನ್ನು ನೋಡುವ ಮತ್ತು ಕೇಳಿಸಿಕೊಳ್ಳುವಂತಹ ಸೌಭಾಗ್ಯವನ್ನು ಭಗವಂತ ನಮಗೆ ಕೊಟ್ಟಿದ್ದಾನೆ ಅದನ್ನು ಸವಿಯುವ ಅವಕಾಶ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ರೋಟರಿ ಕ್ಲಬ್ ಆಫ್ ಸೆಂಟ್ರಲ್ ಮತ್ತು ಟೀಮ್ ಈಶ್ವರ್ ಮಲ್ಪೆ ಅವರು ಯಂತ್ರವನ್ನು ಕೊಡುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಭೂಮಿ ಮೇಲೆ ನಡೆಯುವ ಪ್ರತಿಯೊಂದು ಘಟನೆಯನ್ನು ನೋಡುವ ಮತ್ತು ಕೇಳಿಸಿಕೊಳ್ಳುವ ಸೌಭಾಗ್ಯವನ್ನು ಭಗವಂತ ಮನುಷ್ಯನಿಗೆ ಕೊಟ್ಟಿದ್ದಾನೆ. ಅದನ್ನು ಸವಿಯುವ ಅವಕಾಶ ಕಳೆದುಕೊಳ್ಳಬಾರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ತಿಳಿಸಿದರು. ನಗರದ ಜಿಲ್ಲಾ ಕನ್ನಡಡ ಸಾಹಿತ್ಯ ಪರಿಷತ್ತು ಭವನದಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್, ನೇತೃತ್ವದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿಯ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಬಹಳ ಮುಖ್ಯ ಎಂದರೇ ಕಿವಿಯಾಗಿದ್ದು, ಆದರೆ ಅನೇಕರು ಅದಕ್ಕೆ ಮಹತ್ವವನ್ನು ಕೊಡುತ್ತಿಲ್ಲ. ಶ್ರವಣದೋಷ ಎನ್ನುವುದಕ್ಕೆ ಹೆಚ್ಚು ಆದ್ಯತೆ ಕೊಡುವುದಿಲ್ಲ. ಅದರ ಸ್ವಚ್ಛತೆ, ನಿರ್ವಹಣೆ ಇರಬಹುದು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕು. ಮನುಷ್ಯನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಬಹುಮಖ್ಯವಾಗಿ ಕಾರ್ಯ ನಿರ್ವಹಿಸುವುದು ಶ್ರವಣ. ಆದರೆ ಆ ಶ್ರವಣಕ್ಕೆ ನಾವುಗಳು ಯಾರು ಮಹತ್ವವನ್ನು ಕೊಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಶ್ರವಣ ಇಲ್ಲ ಎಂದರೇ ಯಾವ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕಿವಿ ಕೇಳುವುದಿಲ್ಲ ಎಂದರೇ ಕೇಳದಿರುವುದೇ ಒಳ್ಳೆಯದು ಎಂದು ಸುಮ್ಮನಾಗಿಬಿಡುತ್ತಾರೆ. ಏಕೆ ಸುಮ್ಮನೆ ಕೇಳಬೇಕು ಎನ್ನುವ ಕಾಲ ಈಗ ಆಗಿಬಿಟ್ಟಿದೆ. ಏನು ಕೇಳದಿರುವುದೇ ಒಳ್ಳೆಯದು ಎನ್ನುವ ಕಾಲ ಆಗಿಬಿಟ್ಟಿದೆ. ಅಲ್ಲಿಗೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಮನುಷ್ಯನಿಗೆ ಇರುವ ಶ್ರವಣ ದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು. ಏನಾದರೂ ಕೇಳಿಸಿಕೊಳ್ಳಬೇಕು! ಈ ಪರಿಸರವನ್ನು ನಾವು ಬದುಕಿರುವ ಕೊನೆಯ ಕ್ಷಣದವರೆಗೂ ಕೂಡ ಈ ಭೂಮಿ ಮೇಲೆ ನಡೆಯುವ ಪ್ರತಿಯೊಂದು ಘಟನೆಯನ್ನು ನೋಡುವ ಮತ್ತು ಕೇಳಿಸಿಕೊಳ್ಳುವಂತಹ ಸೌಭಾಗ್ಯವನ್ನು ಭಗವಂತ ನಮಗೆ ಕೊಟ್ಟಿದ್ದಾನೆ ಅದನ್ನು ಸವಿಯುವ ಅವಕಾಶ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ರೋಟರಿ ಕ್ಲಬ್ ಆಫ್ ಸೆಂಟ್ರಲ್ ಮತ್ತು ಟೀಮ್ ಈಶ್ವರ್ ಮಲ್ಪೆ ಅವರು ಯಂತ್ರವನ್ನು ಕೊಡುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಮಾತನಾಡಿ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ಸಂಸ್ಥೆ ಯಾವಾಗಲೂ ಜನರಿಗೆ ಅವಶ್ಯಕತೆ ಇರುವ ಕೆಲಸವನ್ನು ಮಾಡುತ್ತಿದ್ದು, ರೋಟರಿ ಉದ್ದೇಶ ಏನಿತ್ತು ಅದನ್ನ ಅರ್ಥಪೂರ್ಣವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ತಂಡಕ್ಕೆ ಒಳ್ಳೆಯದಾಗಲಿ. ಬಂದಿರುವ ಎಲ್ಲರಿಗೂ ಕಿವಿ ತಪಾಸಣೆ ಹಾಗೂ ಯಂತ್ರಗಳ ವಿತರಣೆ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಟೀಂ ಈಶ್ವರ್ ಮಲ್ಪೆ ತಂಡದ ಲವಬಂಗೇರಾ, ಡಾ. ಪವನ ಕುಮಾರ್, ರೋಟರಿ ಎಜಿ ವಲಯ ೯ ನಿರ್ಮಲ್ ಕುಮಾರ್, ಮಂಜುನಾಥ್, ರೋಟರಿ ಕ್ಲಬ್ ಆಫ್ ಮಿಟರನ್ ಅಧ್ಯಕ್ಷ ಡಾ. ತೇಜಸ್ವಿ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ಅಧ್ಯಕ್ಷ ಎಂ.ಡಿ. ನಾಗೇಶ್, ಕಾರ್ಯದರ್ಶಿ ಅಶೋಕ್, ಸದಸ್ಯರಾದ ಬಿ.ಆರ್‌. ಬೊಮ್ಮೇಗೌಡ, ಕೆ.ಎಲ್. ರಮೇಶ್, ಯೋಗೀಶ್ ಗೌಡ, ಪರಮೇಶ್, ಸದಸ್ಯ ಪ್ರಕಾಶ್, ಪತ್ರಕರ್ತ ನಾಗರಾಜ್ ಹೆತ್ತೂರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ