ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬ್ಯಾಂಕ್ ಆಪ್ ಬರೋಡದ ಗ್ರಾಹಕ ತಗ್ಗಲೂರಿನ ಟಿ.ಎಸ್.ನಾಗರಾಜು ಬ್ಯಾಂಕ್ ಖಾತೆ ನಂಬರ್ 724500001469 ಗೆ ಸೆ.9 ರ ಮಂಗಳವಾರದಂದು 9880882001 ಮೊಬೈಲ್‌ನ ವಾಟ್ಸಾಪ್‌ಗೆ ಪಿಎಂ ಕಿಸಾನ್ ಹೆಸರಿನ ಲಿಂಕ್ ಬಂದಿದೆ. ಗ್ರಾಹಕ ಟಿ.ಎಸ್.ನಾಗರಾಜು ಪಿಎಂ ಕಿಸಾನ್ ಲಿಂಕ್ ಒತ್ತುವ ಮುನ್ನ ಬ್ಯಾಂಕ್ ಖಾತೆಯಲ್ಲಿ 1,17,690 ರು. ಗಳಿತ್ತು. ಪಿಎಂ ಕಿಸಾನ್ ಲಿಂಕ್‌ಗೆ ಒತ್ತಿದ ನಂತರ ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಣ ಕಡಿತಗೊಂಡ ಬಳಿಕ ಗ್ರಾಹಕ ಟಿ.ಎಸ್.ನಾಗರಾಜು ಸೈಬರ್ ಹೆಲ್ಪ್ ಲೈನ್ 1930 ನಂಬರಿಗೆ ಕರೆ ಮಾಡಿ ದೂರು ಹೇಳಿದ್ದಾರೆ. ಜೊತೆಗೆ ಚಾಮರಾಜನಗರ ಸೆನ್ ಕ್ರೈಂ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಕಡಿತಗೊಂಡ ಒಂದು ಲಕ್ಷ ಹಣವನ್ನು ವಾಪಸ್ ಕೊಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.10ಜಿಪಿಟಿ4
ಟಿ.ಎಸ್.ನಾಗರಾಜು