ಅಕ್ರಮ ಗಾಂಜಾ ಮಾರಾಟ ಆರೋಪಿಗೆ 6 ವರ್ಷ ಸಜೆ, ದಂಡ

KannadaprabhaNewsNetwork |  
Published : Feb 25, 2026, 01:15 AM IST
23ಹೆಚ್‌ವಿಆರ್3ಹಾವೇರಿ: ತಾಲೂಕಿನ ಕಾಟೇನಹಳ್ಳಿಯ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಆರೋಪಿ ಫಿರೋಜ್ ಖಾನ್ 2020ರ ಸೆಪ್ಟೆಂಬರ್ 17ರಂದು ಕಾನೂನು ಬಾಹಿರವಾಗಿ ಗಾಂಜಾ ಪಾಕೆಟ್‌ಗಳನ್ನು ಪಡೆದುಕೊಂಡು ಬಂದು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯಲ್ಲಿಯೇ ಕಾನೂನು ಬಾಹಿರವಾಗಿ ಶೇಖರಿಸಿಕೊಂಡಿದ್ದನು.

ಚಿಕ್ಕಬಳ್ಳಾಪುರ: ಅಕ್ರಮ ಗಾಂಜಾ ಮಾರಾಟ ಆರೋಪಿಗೆ 6 ವರ್ಷ ಸಜೆ, 60 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ.

ಗೌರಿಬಿದನೂರು ನಗರದ ನೆಹರೂಜಿ ಕಾಲೋನಿಯ ನಿವಾಸಿ ಫಿರೋಜ್ ಖಾನ್ ಶಿಕ್ಷೆಗೊಳಗಾದ ಅಪರಾಧಿ.

ಆರೋಪಿ ಫಿರೋಜ್ ಖಾನ್ 2020ರ ಸೆಪ್ಟೆಂಬರ್ 17ರಂದು ಕಾನೂನು ಬಾಹಿರವಾಗಿ ಗಾಂಜಾ ಪಾಕೆಟ್‌ಗಳನ್ನು ಪಡೆದುಕೊಂಡು ಬಂದು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯಲ್ಲಿಯೇ ಕಾನೂನು ಬಾಹಿರವಾಗಿ ಶೇಖರಿಸಿಕೊಂಡಿದ್ದನು. ಗೌರಿಬಿದನೂರು ನಗರ ಪೊಲೀಸರು ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದಾಗ ಸುಮಾರು 6,72,200 ರು.ಗಳ ಬೆಲೆಬಾಳುವ 16.800 ಕೆ.ಜಿ ತೂಕದ ಗಾಂಜಾ ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಂಡು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನಂತರ ಸದರಿ ಪ್ರಕರಣವು ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸ್ಪೆಷಲ್ ಸಿ ಸಂಖ್ಯೆ 141/2020 ರಂತೆ ವಿಚಾರಣೆ ನಡೆದಿದ್ದು,ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಬಿ.ಅರುಣಾಕ್ಷಿ ಅವರು ವಾದವನ್ನು ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಆಗ್ರಹ
27ಕ್ಕೆ ಬಸವತತ್ವ ಪೀಠದ ಸುವರ್ಣ ಮಹೋತ್ಸವ