ಬರಗೂರು ವಿಧಾನಸಭೆಯಲ್ಲಿ ಕೂರಬೇಕು

KannadaprabhaNewsNetwork |  
Published : Mar 26, 2026, 01:15 AM IST
3 | Kannada Prabha

ಸಾರಾಂಶ

ಬರಗೂರು ರಾಮಚಂದ್ರಪ್ಪ ಅವರ ಮಾತಿನಲ್ಲಿ ಬಂಡಾಯ ಇರಬಹುದು. ಆದರೆ ಅವರು ಬಹುತ್ವವನ್ನೇ ಉಸಿರಾಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಕನ್ನಡಕ್ಕಾಗಿ ಅನೇಕ ವ್ಯಕ್ತಿಗಳನ್ನು ಬರಗೂರು ರಾಮಚಂದ್ರಪ್ಪ ಅವರು ಸೃಷ್ಟಿಸಿದ್ದಾರೆ. ಅಂತಹವರು ವಿಧಾನ ಸಭೆಯಲ್ಲಿ ಕೂರಬೇಕು. ಇದಕ್ಕಾಗಿ ಕುಲಪತಿಗಳು ಸೇರಿದಂತೆ ಅಧಿಕಾರಿ ವರ್ಗ ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕು ಎಂದು ನಟಿ ಭಾವನಾ ರಾಮಣ್ಣ ಹೇಳಿದರು.ಮಾನಸ ಗಂಗೋತ್ರಿಯ ಕನ್ನಡ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನವು ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ನಡೆದ ಬರಗೂರು: ಮಹತ್ವದ ಬೇರು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಬರಗೂರು ರಾಮಚಂದ್ರಪ್ಪ ಅವರ ಮಾತಿನಲ್ಲಿ ಬಂಡಾಯ ಇರಬಹುದು. ಆದರೆ ಅವರು ಬಹುತ್ವವನ್ನೇ ಉಸಿರಾಗಿಸಿಕೊಂಡಿದ್ದಾರೆ. ಅವರಲ್ಲಿ ಭಾವಕೋಶ ಇರುವುದರಿಂದಲೇ ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.ಬರಗೂರು ರಾಮಚಂದ್ರಪ್ಪ ಹೇಳಿದಂತೆ ಯಾವುದೇ ಪುರುಷ ಕವಿಯಾಗಲಿ, ಬರಹಗಾರರಾಗಲಿ ಅವರಲ್ಲಿ ಹೆಂಗರಳು ಇರಬೇಕು. ಹೆಂಗರುಳು ಇದ್ದಾಗ ಮಾತ್ರ ಭಾಷೆ, ದೇಶ, ಕುಟುಂಬ ಸೇರಿದಂತೆ ಪ್ರತಿಯೊಂದನ್ನು ಕರುಣೆಯಿಂದ ನೊಡಬಹುದು. ಒಂದು ಚಿಕ್ಕ ಮಾತಿಗೂ ಕೂಡ ಹೆಣ್ಣು ಭಾವನಾತ್ಮಕವಾಗುತ್ತಾಳೆ. ಪುರುಷ ಪ್ರಧಾನ ಸಮಾಜ ಇದೆ. ಆದರೆ ಪುರುಷರ ದೃಷ್ಟಿಯಿಂದ ನೋಡುವ ಸಮಾಜ ಬೇರೆ ಇದೆ. ಅದರಲ್ಲಿ ಒಂದು ಹೆಣ್ಣು ಕರಳುನ್ನು ಸೇರಿಸಿ ಅದರ ಮೂಲಕ ಸಮಾಜವನ್ನು ನೋಡಬೇಕು ಎಂದು ಅವರು ಹೇಳಿದರು.ನಾವೆಲ್ಲ ಅದೃಷ್ಟವಂತರು. ನಮ್ಮ ಕರ್ನಾಟದಲ್ಲಿ ಉತ್ತಮ ಶಿಕ್ಷಣ ಪಡೆಯಬಹುದು, ಹೋರಾಟ ಮಾಡಬಹುದು, ನಮಗೆ ಅಂದುಕೊಂಡತಹ ಜೀವನ ನಡೆಸಲು ಅವಕಾಶ ಇದೆ. ಇಂದಿಗೂ ನಮ್ಮ ಭಾರತದಲ್ಲಿ ಎಷ್ಟೋ ಕಡೆ ಇಂತಹ ಅವಕಾಶವೇ ಇಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಷ್ಟೋ ಪುರುಷರಿಗೆ ಹೆಣ್ಣಿನ ಮನಸ್ಸನ್ನು ಹಾಗೂ ಅವರ ನೋವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದೆ. ಹಾಗಾಗಿ ನಮ್ಮ ಕರ್ನಾಟಕದಲ್ಲಿ ಸಮಾಜ ಒಂದೇ ಸಮನ್ವಯದಿಂದ ನಡೆಯುತ್ತಿದೆ ಎಂದರು.ಹೆಣ್ಣಿಗೆ ಪ್ರತಿ ಪದ, ಜೀವ, ಭಾಷೆ, ದೇಶ ಎಲ್ಲದರೊಂದಿಗೂ ಕರುಳುಬಳ್ಳಿಯ ಸಂಬಂಧ. ಅವರ ಸಿನಿಮಾದ ಕಥೆಗಳು ಸ್ತ್ರೀ ಸಂವೇದನೆಯನ್ನೇ ಹೇಳುತ್ತವೆ. ಭಾಗೀರಥಿ ಸಿನಿಮಾ ಕೆರೆಗೆ ಹಾರ ಪದ್ಯದಿಂದ ಸ್ಫೂರ್ತಿ ಪಡೆದಿದ್ದರೂ ಬರಗೂರರ ವಿಮರ್ಶಾ ವಿಸ್ತರಣೆಯು ಎಲ್ಲರನ್ನೂ ಸೆಳೆಯುತ್ತದೆ. ಬರಗೂರು ರಾಮಚಂದ್ರಪ್ಪ ಅವರು ರಾಜಕುಮಾರ್ ಅವರ ಒಡನಾಡಿಗಳಾಗಿದ್ದರು. ಸಾಹಿತ್ಯ, ಸಿನಿಮಾ, ಹೋರಾಟ ಸೇರಿದಂತೆ ಎಲ್ಲಾ ಜ್ಞಾನ ಭಂಡಾರ ಆಗಿದ್ದಾರೆ. ಭೂತಕಾಲ ಮತ್ತು ವರ್ತಮಾನದ ಕೊಂಡಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನದ ಖಜಾಂಚಿ ಲತಾ ಪಾಲ್ಗೊಂಡಿದ್ದರು. ಕೆ.ಎಲ್. ದಿವ್ಯಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಮಾರಣ್ಣ ಸಿಎಂ ಆಗಲು ಸಂಕಲ್ಪ ಮಾಡಿ
ಕಲೆ ಮಾನವನ ಉನ್ನತಿಗೆ, ಸಂತೋಷಕ್ಕೆ ಕಾರಣ