ತಳ ಸಮುದಾಯಗಳ ಕುಲದೈವದ ಶೋಧ ನಡೆಸಬೇಕು

KannadaprabhaNewsNetwork |  
Published : Feb 14, 2026, 01:15 AM IST
12 | Kannada Prabha

ಸಾರಾಂಶ

ಶರಣರೆಂದರೆ ಕೇವಲ ವಚನಕಾರರಲ್ಲ. ಪ್ರ್ಭುತ್ವ ವಿರೋಧಿಸಿ ತಳ ಸಮುದಾಯಗಳ ಪರವಾಗಿ ಹೋರಾಡಿ, ಅವರಿಗೆ ಅಸ್ಮಿತೆ ತಂದುಕೊಟ್ಟ

ಕನ್ನಡಪ್ರಭ ವಾರ್ತೆ ಮೈಸೂರುತಳ ಸಮುದಾಯಗಳ ಕುಲದೈವಗಳು ಮತ್ತು ಅವರ ಜೀವನ ಸಂಸ್ಕೃತಿಯ ಶೋಧ ನಡೆಸಬೇಕು ಎಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬಾಬೂ ಜಗಜೀವನ್‌ ರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಮ.ಸಿ. ನಾರಾಯಣ ರಚಿಸಿರುವ ಖಂಡಾಯಗಳು ಮತ್ತು ಶ್ರೀ ಮಾದಾರ ಚನ್ನಯ್ಯ ಶರಣರುಗಳು ಕುರುಬನಕಟ್ಟೆ ಶ್ರೀಕ್ಷೇತ್ರ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಶರಣರೆಂದರೆ ಕೇವಲ ವಚನಕಾರರಲ್ಲ. ಪ್ರ್ಭುತ್ವ ವಿರೋಧಿಸಿ ತಳ ಸಮುದಾಯಗಳ ಪರವಾಗಿ ಹೋರಾಡಿ, ಅವರಿಗೆ ಅಸ್ಮಿತೆ ತಂದುಕೊಟ್ಟ ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಿದ್ಧಿ ಪುರುಷರು. ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆ ಮಾಡಿದರು. ಮಂಟೇಸ್ವಾಮಿ ಅವರೂ ನನ್ನ ಆದಿಮ ಬೆಳಕು ಮಾದಾರ ಚೆನ್ನಯ್ಯ ಎನ್ನುತ್ತಾರೆ. 12ನೇ ಶತಮಾನದ ಶರಣ ಪರಂಪರೆಯು ಸ್ಥಾವರಗೊಂಡಿದ್ದಾಗ ನಿಜದ ಹಾದಿಗೆ ತಂದವರು, ಬಸವಣ್ಣನವರಿಗೆ ನಿಜ ಶರಣರು ಯಾರೆಂದು, ತಾತ್ವಿಕ ಭಿನ್ನತೆ ಏನೆಂದು ತೋರಿಸಿಕೊಟ್ಟ ಮಾರ್ಗಪ್ರವರ್ತಕ ಮಂಟೇಸ್ವಾಮಿ ಎಂದು ಅವರು ಹೇಳಿದರು.ತಳ ಸಮುದಾಯಗಳ ಚರಿತ್ರೆಯನ್ನು ನಾವು ಸಂಸ್ಕೃತಿ, ಆಚರಣೆಗಳ ಅಧ್ಯಯನದ ಮೂಲಕ ಕಂಡುಕೊಳ್ಳಬೇಕು. ತಳ ಸಮುದಾಯಗಳು ಕುಲದೈವಗಳ ಮೂಲಕ ಸಾಂಸ್ಕೃತಿಕ ಹಿರಿಮೆ– ಗರಿಮೆಯನ್ನು ಗುರುತಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಮಂಟೇಸ್ವಾಮಿ, ಮಲೆ ಮಹದೇಶ್ವರ, ಮರಳಸಿದ್ಧ, ರೇವಣಸಿದ್ಧ, ಜುಂಜಪ್ಪ ಮೊದಲಾದವರು ತಳ ಸಮುದಾಯದ ದನಿ ಆಗಿದ್ದವರು. ಈ ಎಲ್ಲಾ ಸಿದ್ಧ ಪುರುಷರು ತಳ ಸಮುದಾಯದಿಂದಲೇ ಬಂದವರು. ಇವರ ಚರಿತ್ರೆಯನ್ನು ಮಕ್ಕಳಿಗೆ ಹೇಳಬೇಕು. ತಳ ಸಮುದಾಯಗಳು ಆರ್ಥಿಕ, ರಾಜಕೀಯವಾಗಿ ಬಡವರಾಗಿದ್ದರೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿವೆ. ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು ಎಂದರು.ಕೃತಿ ಕುರಿತು ಪ್ರೊ. ಸುಮಿತ್ರಾ, ಪ್ರೊ. ಶ್ರೀನಿವಾಸಮೂರ್ತಿ ಮಾತನಾಡಿದರು. ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್, ಕೇಂದ್ರದ ನಿರ್ದೇಶಕ ಪ್ರೊ.ಕೆ. ಸದಾಶಿವ, ಲೇಖಕ ಅರಕಲವಾಡಿ ನಾಗೇಂದ್ರ, ಪ್ರೊ.ಸಿ. ರಾಮಸ್ವಾಮಿ, ದೇವರತ್ನ ಫೌಂಡೇಷನ್ ಸ್ಥಾಪಕ ಎಂ. ಶಿವಪ್ರಸಾದ್, ಉದ್ಯಮಿ ಎಚ್.ಕೆ. ಸೋಮಶೇಖರ, ಮುಖಂಡ ಅಂಬಣ್ಣ ಅರೋಲಿಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬದ ಸವಿ ನೆನಪಿಗೆ ಗಿಡನೆಟ್ಟು ಪೋಷಿಸಬೇಕು: ಶಾಸಕ ತಮ್ಮಯ್ಯ
ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ