ವಿಕಸಿತ ಭಾರತದ ಮಂಡಲ ಮಟ್ಟದ ಕಾರ್ಯಾಗಾರ

KannadaprabhaNewsNetwork |  
Published : Jun 14, 2025, 03:41 AM IST
12ಎಚ್.ಎಲ್.ವೈ-1: ಪಟ್ಟಣದ ಶ್ರೀ ರಾಮಚಂದ್ರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ  ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ಅಭಿವೃದ್ಧಿ ಪರ ಆಡಳಿತದ ಕುರಿತು ವಿಕಸಿತ ಭಾರತದ ಮಂಡಲ ಮಟ್ಟದ ಕಾರ್ಯಾಗಾರವನ್ನು ಮಂಡಲ ಅಧ್ಯಕ್ಷ ವಿಠ್ಠಲ ಸಿದ್ಧಣ್ಣನವರ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಹಳಿಯಾಳ: ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ಅಭಿವೃದ್ಧಿ ಪರ ಆಡಳಿತದ ಕುರಿತು ವಿಕಸಿತ ಭಾರತದ ಮಂಡಲ ಮಟ್ಟದ ಕಾರ್ಯಾಗಾರವು ಗುರುವಾರ ಪಟ್ಟಣದ ರಾಮಚಂದ್ರ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, ಸದಾಕಾಲ ರಾಷ್ಟ್ರದ ಹಿತಕ್ಕಾಗಿ ಅಭಿವೃದ್ಧಿಗಾಗಿ ದುಡಿಯುತ್ತಿರುವ ಪ್ರಧಾನಮಂತ್ರಿ ಕೈಗೊಂಡಿರುವ ಅಭಿವೃದ್ಧಿ ಪರ ಯೋಜನೆಗಳು ಜನಪರ ಕಾರ್ಯಕ್ರಮಗಳನ್ನು ಐತಿಹಾಸಿಕ ನಿರ್ಧಾರಗಳನ್ನು ಪ್ರತಿ ಮನೆ ಮನಗಳಿಗೂ ಮುಟ್ಟಿಸುವ ಕಾರ್ಯವನ್ನು ನಾವು ಪ್ರತಿಯೊಬ್ಬರೂ ಕಾಳಜಿಯಿಂದ ಶೃದ್ಧೆಯಿಂದ ಮಾಡಬೇಕಾಗಿದೆ ಎಂದರು.

ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಪ್ರಜಾಪ್ರಭುತವ ವ್ಯವಸ್ಥೆಗೆ ಬಲ ಶಕ್ತಿ ಬಂದಿದೆ. ಪ್ರಧಾನಿಯವರ ಆಡಳಿತ ಅವರ ವ್ಯಕ್ತಿತವನ್ನು ಇಡೀ ವಿಶ್ವವೇ ಮೆಚ್ಚುತ್ತಿದೆ. ಇಂತಹ ಜನನಾಯಕರ ಮುಂದಾಳತ್ವದಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಮಾತನಾಡಿ, ಪ್ರಧಾನಿ ಮೋದಿಯವರ ಸರ್ಕಾರದ 11 ವರ್ಷಗಳ ಸಾಧನೆಗಳನ್ನು ಜನರ ಮನೆಬಾಗಿಲಿಗೆ ಹೇಗೆ ತಲುಪಿಸಬೇಕೆಂಬುದರ ಕುರಿತು ರೂಪಿಸಿದ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಗಳ ಆಯೋಜನೆ, ಮಂಡಲ ತಂಡಗಳ ರಚನೆ ಹಾಗೂ ಮುಂಬರುವ ದಿನಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದರು.

ಜಿಲ್ಲಾ ವಿಶೇಷ ಆಹ್ವಾನಿತರಾದ ಮಂಗೇಶ ದೇಶಪಾಂಡೆ ವಿಕಸಿತ ಭಾರತ ಸಂಕಲ್ಪ ಪತ್ರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪದಾಧಿಕಾರಿ ಗಣಪತಿ ಕರಂಜೇಕರ, ಬಸಣ್ಣಾ ಕುರುಬಗಟ್ಟಿ, ಹನುಮಂತ ಚಿನಗಿನಕೊಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ವಿ.ಎಮ್. ಪಾಟೀಲ, ಸಂತೋಷ ಘಟಕಾಂಬಳೆ, ಪ್ರಮುಖರಾದ ತಾನಾಜಿ ಪಟ್ಟೆಕರ್, ವಿಜಯ ಬೊಬಾಟೆ, ಯಲ್ಲಪ್ಪಾ ಹೊನನೋಜಿ, ಆನಂದ ಕಂಚನಾಳಕರ, ರಾಘವೇಂದರ ಛಲವಾದಿ ಹಾಗೂ ಜಿಲ್ಲಾ ಪದಾಧಿಕಾರಿಗಳು, ಪುರಸಭೆಯ ಸದಸ್ಯರು, ಮೊರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು, ಬೂತ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ಪ್ರಧಾನ ಕಾರ್ಯದರ್ಶಿ ವಿ.ಎಂ. ಪಾಟೀಲ, ಸಂತೋಷ ಘಟಕಾಂಬಳೆ ಹಾಗೂ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಞಾನೇಶ ಮಾನಗೆ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ