ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಶಂಕರಗೌಡ ಸಭಾ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕಲಾವಿದರ ಬಳಗ ಹಮ್ಮಿಕೊಂಡಿದ್ದ ಉಮಾಶಂಕರ್ -50 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಕಲಾವಿದರು ಸಿನೆಮಾದಲ್ಲಿ ಹಾಡುವ ಕಲಾವಿದರಿಗಿಂತ ಕಡಿಮೆಯೇನಿಲ್ಲ. ಸಾಧನೆ ಮಾಡಲು ಶ್ರಮ, ಪ್ರಯತ್ನ ಹಾಕಬೇಕು ಅಷ್ಟೇ ಎಂದು ಸಲಹೆ ನೀಡಿದರು.
ಉನ್ನತ ಜಾತಿಯವರೂ ಈಗ ಜಾನಪದವನ್ನು ಫ್ಯಾಷನ್ ಆಗಿ ಹಾಡುತ್ತಾರೆ. ಅದು ತಯಾರಾದ ದನಿ, ನಮ್ಮವರದು ಹುಟ್ಟು ದನಿ, ದೊಡ್ಡ ದೊಡ್ಡ ಉತ್ಸವ, ಮೇಳಗಳಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಿ ಹೆಚ್ಚಿನ ಸಂಭಾವನೆ ಕೊಡಬೇಕು ಎಂಬುದು ಜಿಲ್ಲಾಡಳಿತಕ್ಕೆ ನನ್ನ ಆಗ್ರಹಪೂರ್ವಕ ಒತ್ತಾಯ ಎಂದರು.ಜಾನಪದ ಕಲಾವಿದ ಉಮಾಶಂಕರ್ ಅವರನ್ನು ಅಭಿನಂದಿಸಿದ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಕಲಾವಿದರು ಈ ಭುವನದ ಗಂಧರ್ವರು. ಜಿಲ್ಲೆಯ ಕಲಾವಿದರು ಬಹಳ ಗಟ್ಟಿಗರು, ಮೃಧುಹೃದಯಿಗಳು, ಭಾಷಾಭಿಮಾನಿಗಳು, ನೆಲ ಜಲದ ಹೋರಾಟಕ್ಕೆ ಸದಾ ಸಿದ್ಧರು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಾರ ಉಮೇಶ, ಪ್ರದೀಪ, ಗೆಜ್ಜಲಗೆರೆ ಗಂಗಾರ್ಧ, ಹೊಂಬೇಗೌಡ ಹೆಬ್ಬಕವಾಡಿ, ಸೌಮ್ಯ ಶ್ರೀರಾಮ, ಸಂಪಹಳ್ಳಿ ಬಸವರಾಜು ಇತರರು ಹಾಡುಗಳ ಅಲೆಯಲ್ಲಿ ಪ್ರೇಕ್ಷಕರನ್ನು ತೇಲಿಸಿದರು. ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು, ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಶೇಖರ್, ಶಿಕ್ಷಕಿ ರತ್ನಾಜೈನ್, ಇತರರು ಉಪಸ್ಥಿತರಿದ್ದರು.