ಕನ್ನಡಪ್ರಭ ವಾರ್ತೆ ಮಂಡ್ಯ
ಕೆ.ಸಿ.ರವೀಂದ್ರ, ಬೋರೇಗೌಡ, ಎನ್.ನಾಗರಾಜು, ಬಿ.ಬೋರೇಗೌಡ, ಸಿ.ಬಿ.ಕೃಷ್ಣೇಗೌಡ, ಗೌರಮ್ಮ, ಸುನಂದಾ, ಡಿ.ಮೋಹನ, ಎಂ.ಆರ್.ಸಂದೀಪ, ರತ್ನ, ಕೆ.ಎಸ್. ಧರ್ಮೇಂದ್ರ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಸಂಘದ ಮಾಜಿ ಅಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಐದು ವರ್ಷದ ಆಡಳಿತ ಮಂಡಳಿಯ ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಮಂಡ್ಯ ನಗರ, ಕಲ್ಲಹಳ್ಳಿ, ಹೊಸಹಳ್ಳಿ, ಚಿಕ್ಕೇಗೌಡನದೊಡ್ಡಿ, ಚಿಕ್ಕಮಂಡ್ಯ, ಚಿಂದಗಿರಿದೊಡ್ಡಿಯ ಸಹಕಾರಿ ಬಂಧುಗಳು ಸಹಕಾರ ನೀಡಿದ್ದಾರೆ. ಸಂಘಕ್ಕೆ ಆಯ್ಕೆ ಬಯಸಿ ಹಲವರು ಅರ್ಜಿ ಸಲ್ಲಿಸಿದ್ದರು. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಮುಖಂಡರು ಒಟ್ಟಾಗಿ ಸೇರಿ ಚರ್ಚಿಸಿದ ಪರಿಣಾಮ ೧೧ ಮಂದಿ ನಿರ್ದೇಶಕರ ಅವಿರೋಧ ಆಯ್ಕೆ ಸಾಧ್ಯವಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.ಈಗ ಸಂಘಕ್ಕೆ ಆಯ್ಕೆಯಾಗಿರುವ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ಮುಖಂಡರಾದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೆ.ಎಸ್.ಆನಂದ್, ಎಂ.ರಮೇಶ್, ಕೆ.ಎಚ್.ಶಿವಲಿಂಗಯ್ಯ, ಚಿಕ್ಕಳ್ಳಿಗೌಡ, ಮಾಜಿ ನಗರಸಭಾ ಸದಸ್ಯರಾದ ಕೆ.ಗೂಳೀಗೌಡ, ಶಂಕರೇಗೌಡ, ನಗರಸಭಾ ಸದಸ್ಯ ಟಿ.ರವಿ ಮುಖಂಡರಾದ ಎಚ್.ಎಂ.ಸುರೇಶ್ ಶಿವಲಿಂಗೇಗೌಡ, ಶಿವರಾಮ್ ಇತರರಿದ್ದರು.