ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀವ್ಯಾಸರಾಜ ಮಠದ ಆವರಣದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದಲೂ ವಿಶೇಷ ಪೂಜಾ ಕಾರ್ಯಗಳು ನಿರ್ವಿಘ್ನವಾಗಿ ನಡೆದವು. ಮಧ್ಯಾರಾಧನೆಯ ಅಂಗವಾಗಿ ದೇವಳದಲ್ಲಿ ಪಾದಪೂಜೆ ಮತ್ತು ಸಂಕಲ್ಪ, ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ ನಡೆಯಿತು ನಂತರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಲ್ಲಕ್ಕಿ ಉತ್ಸವ ಹಾಗೂ ಮಹಾರಥೋತ್ಸವ ನಡೆಯಿತು. ಬಳಿಕ ಕನಕಾಭಿಷೇಕ ಮಾಡಲಾಯಿತು.
ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಕ್ತಿಗಾನಸುಧಾ, ಶ್ರೀ ಮನ್ಮಾಧ್ವ ಭಜನಾ ಮಂಡಳಿಯಿಂದ ದೇವರನಾಮ, ವರಹಹರಿವಿಠಲದಾಸರಿಂದ ಶ್ರೀರಾಘವೇಂದ್ರ ವಿಜಯ ಪ್ರವಚನ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಬೇವಿನಹಳ್ಳಿ ಬಳಿ ಇರುವ ಶ್ರೀರಾಘವೇಂದ್ರ ದೇವಾಲಯ, ಕಾವೇರಿನಗರ ಬಡಾವಣೆಯಲ್ಲಿರುವ ಶ್ರೀ ರಾಯರ ಬೃಂದಾವನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ಶ್ರೀರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವ
ಪಟ್ಟಣದ ಶ್ರೀರಾಘವೇಂದ್ರ ಮಠದಲ್ಲಿ ಪೂರ್ವ ಆರಾಧನೆ ನಿಮಿತ್ತ ಶನಿವಾರ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಭಾನುವಾರ ಮುಂಜಾನೆ ಮಠದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶ್ರೀಸತ್ಯನಾರಾಯಣ ಸ್ವಾಮಿ ದೇವರಿಗೆ ಅಭಿಷೇಕದೊಂದಿಗೆ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು.ಸುಪ್ರಭಾತ, ದೇವತಾ ಪೂಜೆ ಪಾರಾಯಣಾದಿಗಳ ನಂತರ ಶ್ರೀರಾಘವೇಂದ್ರ ಶ್ರೀಗಳ ಬೃಂದಾವನಕ್ಕೆ ಅಷ್ಟೋತ್ತರ, ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕ ಬಳಿಕ ಮಹಾ ಮಂಗಳಾರತಿ ನೆರವೇರಿತು.