ಮಂಗಳೂರು: ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್) ಹೊಸದಿಲ್ಲಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಿತು. ವಿಚಾರ ಸಂಕಿರಣವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ.ಆರ್. ರಮನಿ ಸಹ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಸರ್ಕಾರಿ ಆರ್ಟ್ಸ್ ಕಾಲೇಜು ಕೊಯಂಬತ್ತೂರು, ಪ್ರೊ. ಜಗದೀಶ ಬಾಳ ನಿವೃತ್ತ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ, ಮಂಗಳೂರು, ಡಾ. ಎನ್. ಸುಬ್ಬುಕೃಷ್ಣ ಶಾಸ್ತ್ರಿ ಸಿ.ಎಂ.ಆರ್ ವಿಶ್ವವಿದ್ಯಾನಿಲಯ ಬೆಂಗಳೂರು, ಡಾ. ರೋಶನಿ ಯಶವಂತ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಡಾ. ಅಬ್ದುಲ್ ರಝಾಕ್ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜು ಉಡುಪಿ, ಡಾ. ಪುರುಷೋತ್ತಮ ಕೆ.ವಿ. ಪ್ರಾಂಶುಪಾಲರು ಪೊಂಪೆ ಕಾಲೇಜು ಐಕಳ ಭಾಗವಹಿಸಿದ್ದರು.ಡಾ. ಜಯವಂತ ನಾಯಕ್ ಸಮಾರೋಪ ಭಾಷಣ ಮಾಡಿದರು.
ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ. ಮಂಜುಳ ಮಲ್ಯ ಎಂ. ಹಾಗೂ ಡಾ. ಜಯಶ್ರೀ ಕೆ. ಸಂಯೋಜಿಸಿದರು. ಡಾ.ಸುಮನ ನಿರೂಪಿಸಿದರು.