ಮಂಗಳೂರು: ದೀಪಾವಳಿ ಗೋಪೂಜೆ ಸಲ್ಲಿಸಿ ಆಹಾರ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

KannadaprabhaNewsNetwork |  
Published : Nov 04, 2024, 12:26 AM ISTUpdated : Nov 04, 2024, 11:57 AM IST
ಗೋಪೂಜೆ ನೆರವೇರಿಸಿದ ಡಿಸಿಎಂ ಡಿಕೆ ಶಿವಕುಮಾರ್‌. | Kannada Prabha

ಸಾರಾಂಶ

ಮಹಿಳಾ ಕಾಂಗ್ರೆಸ್‌ ವತಿಯಿಂದ ಗೋಪೂಜಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಕೆಶಿ ಕೂಡ ಭಾಗವಹಿಸಿದರು. ಅಲಂಕೃತ ಗೋವಿಗೆ ಪೂಜೆ ನೆರವೇರಿಸಿ ಆಹಾರ ನೀಡಿದರು.

 ಮಂಗಳೂರು : ಮಂಗಳೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶನಿವಾರ ನಗರದಲ್ಲಿ ದೀಪಾವಳಿ ಗೋಪೂಜೆ ಅಂಗವಾಗಿ ಗೋವಿಗೆ ಆರತಿ ಎತ್ತಿ, ತಿನ್ನಲು ಆಹಾರ ನೀಡಿ ಗೋಪೂಜೆ ಆಚರಿಸಿದರು.

ನಗರದ ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಡಿಸಿಎಂ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು ಹಾರ, ಶಾಲು ಹಾಕಿ‌ ಸನ್ಮಾನಿಸಿದರು.

ಮಹಿಳಾ ಕಾಂಗ್ರೆಸ್‌ ವತಿಯಿಂದ ಗೋಪೂಜಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಕೆಶಿ ಕೂಡ ಭಾಗವಹಿಸಿದರು. ಅಲಂಕೃತ ಗೋವಿಗೆ ಪೂಜೆ ನೆರವೇರಿಸಿ ಆಹಾರ ನೀಡಿದರು.

ಕಾಂಗ್ರೆಸ್‌ ಮುಖಂಡರಾದ ಮಂಜುನಾಥ ಭಂಡಾರಿ, ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ರಕ್ಷಿತ್‌ ಶಿವರಾಮ್‌, ಪದ್ಮರಾಜ್‌ ಆರ್‌., ಶಶಿಧರ ಹೆಗ್ಡೆ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಶಾಲೆಟ್‌ ಪಿಂಟೊ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿಗಾಗಿ ಮಕ್ಕಳಿಂದ ಪತ್ರ: ₹490 ಕೋಟಿ ಕೊಟ್ಟ ಸಿಎಂ!
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಬಿಯರ್‌, ವೈನ್‌ ಅಗ್ಗ?