ಮಂಗಳೂರಿನ 33 ಕಡೆ ಬೀದಿ ಬದಿ ವ್ಯಾಪಾರ ವಲಯ

KannadaprabhaNewsNetwork |  
Published : Sep 03, 2024, 01:34 AM IST
32 | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಉದ್ದೇಶದಿಂದ ಒಟ್ಟು 33 ಸ್ಥಳಗಳಲ್ಲಿ ಬೀದಿ ವ್ಯಾಪಾರ ವಲಯಗಳನ್ನು ಗುರುತಿಸಲಾಗಿದೆ. ಲಾಲ್‌ಬಾಗ್‌ ಪಬ್ಬಾಸ್‌ ಹಿಂಬದಿಯ ನೆಹರೂ ಆವನ್ಯೂ ಅಡ್ಡ ರಸ್ತೆಯಲ್ಲಿ 14 ವ್ಯಾಪಾರಿಗಳಿಗೆ (ಹಣ್ಣು ಹಂಪಲು ಮಾರಾಟ), ಕರಾವಳಿ ಉತ್ಸವ ಮೈದಾನ ನೀರಿನ ಟ್ಯಾಂಕ್‌ ಬಳಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಉದ್ದೇಶದಿಂದ ಒಟ್ಟು 33 ಸ್ಥಳಗಳಲ್ಲಿ ಬೀದಿ ವ್ಯಾಪಾರ ವಲಯಗಳನ್ನು ಗುರುತಿಸಲಾಗಿದೆ.ಲಾಲ್‌ಬಾಗ್‌ ಪಬ್ಬಾಸ್‌ ಹಿಂಬದಿಯ ನೆಹರೂ ಆವನ್ಯೂ ಅಡ್ಡ ರಸ್ತೆಯಲ್ಲಿ 14 ವ್ಯಾಪಾರಿಗಳಿಗೆ (ಹಣ್ಣು ಹಂಪಲು ಮಾರಾಟ), ಕರಾವಳಿ ಉತ್ಸವ ಮೈದಾನ ನೀರಿನ ಟ್ಯಾಂಕ್‌ ಬಳಿ ವ್ಯಾಪಾರಿಗಳಿಗೆ (ಸ್ಟ್ರೀಟ್‌ಫುಡ್‌), ಮಣ್ಣಗುಡ್ಡೆ ಹಾಪ್‌ಕಾಮ್ಸ್‌ ಹಿಂಬದಿ 15 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಅಳಕೆ ಮಾರುಕಟ್ಟೆ ಎದುರು 35 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಸ್ಟೇಟ್‌ ಬ್ಯಾಂಕ್‌ ಇಂದಿರಾ ಕ್ಯಾಂಟೀನ್‌ ಎದುರು 125 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಸ್ಟೇಟ್‌ಬ್ಯಾಂಕ್‌ ಫುಟ್‌ಬಾಲ್‌ ಮೈದಾನದ ಹಿಂಬದಿ 74 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಪಂಪ್‌ವೆಲ್‌ ಜಂಕ್ಷನ್‌ ಕಂಕನಾಡಿ ಪೊಲೀಸ್‌ ಚೌಕಿ ಸಮೀಪ 20 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಪಂಪ್‌ವೆಲ್‌ ಬ್ರಿಡ್ಜ್‌ ಸಮೀಪ 5 ವ್ಯಾಪಾರಿಗಳಿಗೆ (ಮೀನು ವ್ಯಾಪಾರ), ಪಡೀಲ್‌ ಬಜಾಲ್‌ ಕ್ರಾಸ್‌ 5 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಕೊಟ್ಟಾರ ಕ್ರಾಸ್‌ 5 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಬಿಜೈ ಕೆಇಬಿ ಸಮೀಪ 20 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ)ಕ್ಕೆ ಅವಕಾಶ ನೀಡಲಾಗಿದೆ.ನಂದಿಗುಡ್ಡೆ ಕೋಟಿ ಚೆನ್ನಯ ಸರ್ಕಲ್‌ ಬಳಿ 10 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಪದವಿನಂಗಡಿ- ಶರ್ಬತ್‌ ಕಟ್ಟೆ(ಕೆಪಿಟಿ ಕಾಲೇಜು) 15 ವ್ಯಾಪಾರಿಗಳಿಗೆ (ಫುಡ್‌ ಸ್ಟ್ರೀಟ್‌), ಮೇರಿಹಿಲ್‌ ಪೆಟ್ರೋಲ್‌ ಪಂಪ್‌ ಹತ್ತಿರ 10 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಟೌನ್‌ಹಾಲ್‌ನ ಎದುರಿನ ರೈಲ್ವೇ ಸ್ಟೇಷನ್‌ನಿಂದ ಆರ್‌ಟಿಒ ಕಚೇರಿವರೆಗೆ 150 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ದೇರೆಬೈಲ್‌ ಪ್ರಶಾಂತ್‌ ನಗರ ಚರ್ಚ್‌ ಬಳಿ 15 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಬೊಂದೇಲ್‌ ಜಂಕ್ಷನ್‌ 5 ಮಂದಿಗೆ (ಮಿಶ್ರ ವ್ಯಾಪಾರ), ಕಾವೂರು ಮರಕಡ ರಸ್ತೆ 10 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಕಾವೂರು ಮಾರುಕಟ್ಟೆ ಎದುರು 10 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ನಂತೂರು ಪದವು ನೀರಿನ ಟ್ಯಾಂಕ್‌ ಬಳಿ 10 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಕದ್ರಿ ಮುಖ್ಯ ರಸ್ತೆ ಬದಿ 5 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಕುಂಟಿಕಾನ ಅಗ್ನಿಶಾಮಕ ಕಚೇರಿ ಮುಂಭಾಗ ಹೆದ್ದಾರಿಯ ಇನ್ನೊಂದು ಬದಿಯಲ್ಲಿ 5 ವ್ಯಾಪಾರಿಗಳಿಗೆ (ಫುಡ್‌ಸ್ಟಾಲ್‌ ), ಶರ್ಬತ್‌ ಕಟ್ಟೆ ಜಿಲ್ಲಾ ಕಾರ್ಮಿಕ ಇಲಾಖೆ ಮುಂಭಾಗದ ಖಾಲಿ ಸ್ಥಳದಲ್ಲಿ 5 ವ್ಯಾಪಾರಿಗಳಿಗೆ (ಫುಡ್‌ ಸ್ಟಾಲ್‌ ), ನಂದಿಗುಡ್ಡೆ ಪೋಸ್ಟ್‌ ಆಫೀಸ್‌ ಎದುರು 20 ವ್ಯಾಪಾರಿಗಳಿಗೆ (ಫುಡ್‌ ಸ್ಟಾಲ್‌), ಸಂಘನಿಕೇತನ ಗಾಂಧಿ ಪಾರ್ಕ್ ಬಳಿ 3 ವ್ಯಾಪಾರಿಗಳಿಗೆ (ಫುಡ್‌ ಸ್ಟಾಲ್‌), ಒಬ್ಬ ವ್ಯಾಪಾರಿಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗುವುದು.

ಸುರತ್ಕಲ್‌ನ ಮುಡಾ ಮಾರುಕಟ್ಟೆ ಹಿಂದಿನ ರಸ್ತೆಯಲ್ಲಿ 20 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಮುಡಾ ಮಾರುಕಟ್ಟೆ ಒಳಗಿನ ಖಾಲಿ ಸ್ಥಳ, ಕಾಟಿಪಳ್ಳ ಕೈಕಂಬದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ 30 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), ಕಾಟಿಪಳ್ಳ ಗಣೇಶಪುರ ದೇವಸ್ಥಾನದ ಎದುರಿನ ಸ್ಥಳ 20 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ), 5ನೇ ಬ್ಲಾಕ್‌ ಮೀನು ಮಾರುಕಟ್ಟೆಬಳಿ 12 ವ್ಯಾಪಾರಿಗಳಿಗೆ ಮಿಶ್ರ ವ್ಯಾಪಾರ, ಬೈಕಂಪಾಡಿ ಎಪಿಎಂಸಿ ಎದುರಿನ ಸ್ಥಳ 56 ವ್ಯಾಪಾರಿಗಳಿಗೆ (ಮಿಶ್ರ ವ್ಯಾಪಾರ) ಜಾಗ ಗುರುತಿಸಲಾಗಿದೆ.ಸ್ಟೇಟ್‌ ಬ್ಯಾಂಕ್‌ ಬಳಿ 93 ಮಂದಿಗೆ:

ಪ್ರಥಮ ಹಂತದಲ್ಲಿ ಕಂಟೋನ್ಮೆಂಟ್‌ ವಾರ್ಡ್‌ನ ಸ್ಟೇಟ್‌ ಬ್ಯಾಂಕ್‌ ಇಂದಿರಾ ಕ್ಯಾಂಟೀನ್‌ ಎದುರುಗಡೆ ನಿರ್ಮಾಣಗೊಳ್ಳುತ್ತಿರುವ ವ್ಯಾಪಾರ ವಲಯದಲ್ಲಿ 132 ಸ್ಟಾಲ್‌ಗಳಲ್ಲಿ 93 ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಮನಪಾದ ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ಮಾಡಿರುವ 667 ಬೀದಿ ಬದಿ ವ್ಯಾಪಾರಿಗಳ ಪೈಕಿ 93 ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ದೊರೆಯಲಿದೆ. ಇದರಲ್ಲಿ ಹೂವಿನ ವ್ಯಾಪಾರಕ್ಕೆ 10 ಕೊಡೆ ಆಧಾರಿತ ಸ್ಟಾಲ್‌, ಬಟ್ಟೆ, ಬ್ಯಾಗ್‌ ಫ್ಯಾನ್ಸಿ ವ್ಯಾಪಾರ, ಚಪ್ಪಲ್‌, ವಾಚ್‌ ರಿಪೇರಿ ಮೊದಲಾದವುಗಳ 18 ಸ್ಟಾಲ್‌, ಹಣ್ಣು ಹಂಪಲು 25 ಸ್ಟಾಲ್‌, ತರಕಾರಿ ವ್ಯಾಪಾರ 15 ಸ್ಟಾಲ್‌, ಜ್ಯೂಸ್‌, ಎಳನೀರು, ಕಬ್ಬಿಣ ವ್ಯಾಪಾರ 12 ಸ್ಟಾಲ್‌, ಫಾಸ್ಟ್‌ ಫುಡ್‌ 13 ಸ್ಟಾಲ್‌ಗಳು ಇರಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!