ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ, ಸಮುದಾಯ ವೈದ್ಯಕೀಯ ವಿಭಾಗಗಳ ವತಿಯಿಂದ, ಜನರಿದ್ದಲ್ಲಿ ತೆರಳಿ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಚಾರಿ ನೇತ್ರ ತಪಾಸಣಾ ಘಟಕ ‘ದೃಷ್ಟಿ ಚಕ್ರ’ಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ, ಸಮುದಾಯ ವೈದ್ಯಕೀಯ ವಿಭಾಗಗಳ ವತಿಯಿಂದ, ಜನರಿದ್ದಲ್ಲಿ ತೆರಳಿ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಚಾರಿ ನೇತ್ರ ತಪಾಸಣಾ ಘಟಕ ‘ದೃಷ್ಟಿ ಚಕ್ರ’ಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಮಾತನಾಡಿ, ತಡೆಗಟ್ಟಬಹುದಾದ ದೃಷ್ಟಿ ಸಮಸ್ಯೆಗಳನ್ನು, ವಿಶೇಷವಾಗಿ ಗ್ರಾಮೀಣ ಭಾಗದ ಆರೋಗ್ಯ ವಂಚಿತರಿಗೆ ಸಕಾಲಿಕ ಚಿಕಿತ್ಸೆ ನೀಡುವಲ್ಲಿ ದೃಷ್ಟಿ ಚಕ್ರ ಉತ್ತಮ ಹೆಜ್ಜೆಯಾಗಿದೆ. ಇದಕ್ಕೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲವಿದೆ ಎಂದರು.ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆವಹಿಸಿದ್ದರು, ಉಪಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ್, ಮಣಿಪಾಲ್ ಫೌಂಡೇಶನ್ ಸಿಇಒ ಹರಿನಾರಾಯಣ್ ಶರ್ಮ ಮತ್ತು ಮಾಹೆ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ಭಾಗವಹಿಸಿದ್ದರು.ಮಾಹೆ ಸಿಒಒ ಡಾ.ಆನಂದ್ ವೇಣುಗೋಪಾಲ್, ಕೆಎಂಸಿ ಡೀನ್ ಡಾ.ಅನಿಲ್ ಕೆ. ಭಟ್, ಎಂಸಿಎಚ್‌ಪಿ ಡೀನ್ ಡಾ.ಅರುಣ್ ಮಯ್ಯ, ಕಸ್ತೂರ್ಬಾ ಆಸ್ಪತ್ರೆ ಸಿಒಒ ಡಾ.ಸುಧಾಕರ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ.ಹರೀಶ್ ಕುಮಾರ್ ಎಸ್. ಉಪಸ್ಥಿತರಿದ್ದರು. ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ಸುಲತಾ ವಿ. ಭಂಡಾರಿ ಯೋಜನೆಯ ಅವಲೋಕನ ನೀಡಿದರೆ, ಆಪ್ಟೋಮೆಟ್ರಿ ವಿಭಾಗದ ಮುಖ್ಯಸ್ಥೆ ಡಾ. ಕೃತಿಕಾ ವಂದಿಸಿದರು.------
ದೃಷ್ಟಿ ಚಕ್ರ ಎಂದರೇ...ಮಣಿಪಾಲ್ ಫೌಂಡೇಶನ್‌ನ ಸಿಎಸ್‌ಆರ್ ಯೋಜನೆಯಡಿ, ಕಣ್ಣಿನ ಪೊರೆ, ಗ್ಲುಕೋಮಾ, ರೆಟಿನೋಪತಿ, ಕಾರ್ನಿಯಲ್ ಮತ್ತು ರಿಫ್ರಾಕ್ಷನ್ ದೋಷಗಳನ್ನು ಪತ್ತೆಹಚ್ಚಲು ಈ ದೃಷ್ಟಿಚಕ್ರ ಘಟಕವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಕಡಿಮೆ ಕುರುಡುತನ ಗುರುತಿಸಲು ಮತ್ತು ಸ್ಥಳದಲ್ಲೇ ದೃಷ್ಟಿ ಪುನಶ್ಚೇತನ ತರಬೇತಿ ಮತ್ತು ಸಮಾಲೋಚನೆಯನ್ನು ಒದಗಿಸಲು ಈ ವಾಹನವನ್ನು ರೂಪಿಸಲಾಗಿದೆ. ಇದು ಆಸ್ಪತ್ರೆ ಮತ್ತು ಗ್ರಾಮೀಣ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಡಾ. ಸುಲತಾ ವಿ. ಭಂಡಾರಿ ನೇತೃತ್ವದ ಈ ಘಟಕವು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.