ಕೆಎಂಸಿ ವಿದ್ಯಾರ್ಥಿಗಳ ಮಹತ್ತರ ಸಾಧನೆ: ಡಾ. ಬಲ್ಲಾಳ್

KannadaprabhaNewsNetwork |  
Published : Oct 15, 2026, 02:45 AM IST
ಮಾಹೆಯಲ್ಲಿ ಹಳೆವಿದ್ಯಾರ್ಥಿಗಳ ಜಾಗತಿಕ ಸಮಾವೇಶ ಮಿಲಾಪ್ ಸಂಪನ್ನಗೊಂಡಿತು. | Kannada Prabha

ಸಾರಾಂಶ

ಒಂದು ಸಂಸ್ಥೆಯನ್ನು ಅದು ರೂಪಿಸುವ ವ್ಯಕ್ತಿಗಳಿಂದ ಅಳೆಯಲಾಗುತ್ತದೆ ಎಂಬುದನ್ನು ಮಿಲಾಪ್ (ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಜಾಗತಿಕ ಹಳೆವಿದ್ಯಾರ್ಥಿಗಳ ಸಮಾವೇಶ) ನಮಗೆ ನೆನಪಿಸುತ್ತದೆ, ನಮ್ಮ ಹಳೆವಿದ್ಯಾರ್ಥಿಗಳು ದೇಶಾದ್ಯಂತ ಆಸ್ಪತ್ರೆಗಳನ್ನು ಮುನ್ನಡೆಸುತ್ತಿರುವುದನ್ನು ಕಂಡು ನಮಗೆ ಅಪಾರ ಹೆಮ್ಮೆಯಾಗಿದೆ. ಅವರ ಅನುಭವವು ಮಣಿಪಾಲದ ಮುಂದಿನ ತಲೆಮಾರಿನ ಆಸ್ಪತ್ರೆ ಆಡಳಿತಗಾರರನ್ನು ನಿರಂತರವಾಗಿ ಸಮೃದ್ಧಗೊಳಿಸಲಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.

ಮಣಿಪಾಲ: ಒಂದು ಸಂಸ್ಥೆಯನ್ನು ಅದು ರೂಪಿಸುವ ವ್ಯಕ್ತಿಗಳಿಂದ ಅಳೆಯಲಾಗುತ್ತದೆ ಎಂಬುದನ್ನು ಮಿಲಾಪ್ (ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಜಾಗತಿಕ ಹಳೆವಿದ್ಯಾರ್ಥಿಗಳ ಸಮಾವೇಶ) ನಮಗೆ ನೆನಪಿಸುತ್ತದೆ, ನಮ್ಮ ಹಳೆವಿದ್ಯಾರ್ಥಿಗಳು ದೇಶಾದ್ಯಂತ ಆಸ್ಪತ್ರೆಗಳನ್ನು ಮುನ್ನಡೆಸುತ್ತಿರುವುದನ್ನು ಕಂಡು ನಮಗೆ ಅಪಾರ ಹೆಮ್ಮೆಯಾಗಿದೆ. ಅವರ ಅನುಭವವು ಮಣಿಪಾಲದ ಮುಂದಿನ ತಲೆಮಾರಿನ ಆಸ್ಪತ್ರೆ ಆಡಳಿತಗಾರರನ್ನು ನಿರಂತರವಾಗಿ ಸಮೃದ್ಧಗೊಳಿಸಲಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ 4ನೇ ಜಾಗತಿಕ ಹಳೆವಿದ್ಯಾರ್ಥಿಗಳ ಸಮಾವೇಶ - ಮಿಲಾಪ್ - 2026 ಸಂಭ್ರಮದಲ್ಲಿ ಮಾತನಾಡಿದರು.

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ಆಸ್ಪತ್ರೆ ಕೇವಲ ಆರೈಕೆಯ ಸ್ಥಳವಲ್ಲ, ಅದು ಕಲಿಕೆ ಮತ್ತು ಸಂಶೋಧನೆಯ ತಾಣವೂ ಹೌದು. ಸದೃಢ ಶಿಕ್ಷಣ ಮತ್ತು ಸಂಶೋಧನೆಯು ಉತ್ತಮ ರೋಗಿ ಆರೈಕೆಗೆ ದಾರಿ ಮಾಡಿಕೊಡುತ್ತದೆ. ಈ ಸಂಯೋಜನೆಯಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ನಮ್ಮ ಹಳೆವಿದ್ಯಾರ್ಥಿಗಳೇ ಜೀವಂತ ಸಾಕ್ಷಿ ಎಂದರು.

ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಪಿ. ನವೀನ್ ಕುಮಾರ್ ಅವರು ಹಳೆವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮೊದಲ ದಿನ ಹಳೆವಿದ್ಯಾರ್ಥಿಗಳು ಹಾವಂಜೆಯಲ್ಲಿರುವ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ಗೆ ಭೇಟಿ ನೀಡಿದರು. ಅಲ್ಲಿ ಕೇಂದ್ರದ ನಿರ್ದೇಶಕಿ ಡಾ. ಸೀಮಾ ರಾವ್ ಅವರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಯೋಜಿತವಾದ ಹಾಸ್ಪಿಸ್ ಆರೈಕೆ ಮಾದರಿ ಪರಿಚಯಿಸಿದರು.

ಎರಡನೇ ದಿನ ಸಿಇಒ ಸಮಾವೇಶ ನಡೆಯಿತು. ವಿಭಾಗದ ಮಾಜಿ ಮುಖ್ಯಸ್ಥ ಡಾ. ಸತ್ಯಶಂಕರ್ ಅವರು ನವೀಕೃತ ವಿಭಾಗವನ್ನು ಉದ್ಘಾಟಿಸಿದರು.

ಸಮಾವೇಶದಲ್ಲಿ ಬೆಂಗಳೂರಿನ ಸೂಪರ್‌ಹೆಲ್ತ್ ಸಹಸಂಸ್ಥಾಪಕ ಡಾ. ಅಲೆಕ್ಸ್ ಕುರುವಿಲ್ಲಾ ಅವರು ಹೈಬ್ರಿಡ್ ಕ್ಲಿಕ್ ಆ್ಯಂಡ್ ಮಾರ್ಟರ್ ಆಸ್ಪತ್ರೆಯ ನಿರ್ವಹಣೆ ಬಗ್ಗೆ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ನಿತೀಶ್ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದ ಮುಂದಿನ ದಶಕದ ಬಗ್ಗೆ ಹಾಗೂ ಪುಣೆಯ ಜ್ಯುಪಿಟರ್ ಆಸ್ಪತ್ರೆಗಳ ಸಿಇಒ ಡಾ. ರಾಜೇಂದ್ರ ಪಾಟಣ್‌ಕರ್ ಅವರು ಆಸ್ಪತ್ರೆಯ ಹಣಕಾಸು ಸ್ಥಿತಿಯ ಮೇಲೆ ನಿಗಾ ಇಡಲು ಡಿಜಿಟಲ್ ನಾವೀನ್ಯತೆ ಸಿಇಒಗಳಿಗೆ ಹೇಗೆ ನೆರವಾಗಬಲ್ಲದು ಎಂಬ ಬಗ್ಗೆ ಮಾತನಾಡಿದರು.

ದೇಶವಿದೇಶದ ಹಳೆ ವಿದ್ಯಾರ್ಥಿಗಳು: ಮೂರು ದಶಕಗಳ ವಿವಿಧ ಬ್ಯಾಚ್‌ಗಳ ಸುಮಾರು 30 ಹಳೆವಿದ್ಯಾರ್ಥಿಗಳು ಮಣಿಪಾಲದಲ್ಲಿ ನಡೆದ ಈ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ದೇಶವಿದೇಶದಿಂದ ಆಗಮಿಸಿದ್ದರು.

ನಂತರ ಹಳೆವಿದ್ಯಾರ್ಥಿಗಳು ನೂತನ ರಾಮದಾಸ್ ಪೈ ಸ್ಪೆಷಾಲಿಟಿ ಬ್ಲಾಕ್ ಹಾಗೂ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಭೇಟಿ ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಹಳೆವಿದ್ಯಾರ್ಥಿಯೂ ಆಗಿರುವ ಡಾ. ಸುಧಾಕರ್ ಕಂಟಿಪುಡಿ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ