ಮಣಿಪಾಲ: ಘರ್ ಘರ್ ಕೊಂಕಣಿಯ 151ನೇ ಕಾರ್ಯಕ್ರಮ ಸಂಪನ್ನ

KannadaprabhaNewsNetwork | Published : Apr 19, 2024 1:00 AM

ಸಾರಾಂಶ

ಮನೋಹರ್ ನಾಯಕ್ ರಚಿಸಿದ ಕೊಂಕಣಿ ವಿವಾಹದ ಹಾಗೂ ಜೋಗುಳದ ಹಾಡುಗಳ ವೀಡಿಯೋ ಚಿತ್ರೀಕರಣ ನಡೆಯಿತು. ಕೊಂಕಣಿ ಭಾಷಿಗ ಪಂಗಡಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಮಣಿಪಾಲ

ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಸರಣಿಯ 151ನೇ ಕಾರ್ಯಕ್ರಮವು ಇಲ್ಲಿನ ಪೆರಂಪಳ್ಳಿಯ ಹಿರಿಯ ಸಾಹಿತಿ ಕಾಡಬೆಟ್ಟು ಮನೋಹರ ನಾಯಕ್ - ಶೀಲಾ ನಾಯಕ್ ದಂಪತಿ ಆತಿಥ್ಯದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿನ್ನಾ, ಮಾತೃ ಭಾಷೆ ಶ್ರೇಷ್ಠವಾದುದು, ಅದನ್ನು ಕಲಿಸಿದ ತಾಯಿಯೇ ಶ್ರೇಷ್ಟ ದೇವರು. ಆ ಋಣವನ್ನು ತೀರಿಸಲಸಾಧ್ಯ. ಕೊನೆ ಪಕ್ಷ ಮನೆಯಲ್ಲಿ ಭಾಷೆಗಾಗಿ ದೀಪ ಹಚ್ಚುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ತರಂಗ ವಾರ ಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ, ಖ್ಯಾತ ಕಲಾವಿದ ತೋನ್ಸೆ ರಂಗ ಪೈ, ರಂಗ ಕಲಾವಿದ ಶಶಿಭೂಷಣ ಕಿಣಿ, ನಿರ್ಮಾಪಕ ಟಿ.ಎ.ಶ್ರೀನಿವಾಸ ಉಪಸ್ಥಿತರಿದ್ದರು. ಚೇಂಪಿ ರಾಮಚಂದ್ರ ಭಟ್ ನಿರೂಪಣೆಗೈದರು.

ಇದೇ ಸಂದರ್ಭದಲ್ಲಿ ಮನೋಹರ್ ನಾಯಕ್ ರಚಿಸಿದ ಕೊಂಕಣಿ ವಿವಾಹದ ಹಾಗೂ ಜೋಗುಳದ ಹಾಡುಗಳ ವೀಡಿಯೋ ಚಿತ್ರೀಕರಣ ನಡೆಯಿತು. ಕೊಂಕಣಿ ಭಾಷಿಗ ಪಂಗಡಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಟಿಎಂಎಪೈ ಫೌಂಡೇಶನ್‌ನ ಟಿ. ಅಶೋಕ್ ಪೈ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ, ವೈಶ್ಯವಾಣಿ ಸಮಾಜ ಅಧ್ಯಕ್ಷ ವಸಂತ ನಾಯಕ್, ಕುಡಾಳ್ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಸಾವಂತ್, ಕೊಂಕಣಿ ಸಾಹಿತ್ಯಕಾರ ಡಾ. ಜೆರಾಲ್ಡ್ ಪಿಂಟೋ, ಸಮಾಜ ಸೇವಕ ವಿಶ್ವನಾಥ ಶೆಣೈ, ಶ್ರೀ ದುರ್ಗಾಂಭ ದೇವಸ್ಥಾನ ಅರ್ಚಕ ಶಿವಾನಂದ ಭಟ್, ಖಾರ್ವಿ ಸಮಾಜದ ಲಾವಕಾರ ಖಾರ್ವಿ, ದೈವಜ್ಞ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್, ಪಲ್ಲವಿ ಮಡಿವಾಳ ಕುಮಟ, ಮನೋಹರ ನಾಯಕ್ ಮತ್ತು ಶೀಲಾ ನಾಯಕ್ ಉಪಸ್ಥಿತರಿದ್ದರು.

ಉಡುಪಿ ಪರಿಸರದ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆಗೈದ 12 ಸಾಧಕರನ್ನು ಸನ್ಮಾನಿಸಲಾಯಿತು. ಇಬ್ಬರು ಯುವ ಪ್ರತಿಭಾನ್ವಿತರಿಗೆ ಯುವ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿದ್ವಾನ್ ಹರಿಪ್ರಸಾದ್ ಶರ್ಮ ಹಾಗೂ ಚೇಂಪಿ ರಾಮಚಂದ್ರ ಭಟ್ ನಿರೂಪಣೆಗೈದರು.

Share this article