ಹುಬ್ಬಳ್ಳಿ:
ಗುರುವಾರ ಇಲ್ಲಿನ ಹು-ಧಾ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಆರಂಭಿಸಿರುವ ಮಜೇಥಿಯಾ ಫೌಂಡೇಶನ್‌ನ ಉಚಿತ ಫಿಜಿಯೋಥೆರಪಿ ಕೇಂದ್ರದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಟಗುಪ್ಪಿಯಲ್ಲಿ ಆಸ್ಪತ್ರೆಯಲ್ಲಿ ನಮ್ಮ ಸಂಸ್ಥೆಯಿಂದ ಫಿಜಿಯೋಥೆರಪಿ ಕೇಂದ್ರ ಸ್ಥಾಪಿಸಿಕೊಡುತ್ತೇವೆಂದು ಮುಖ್ಯವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಗೆ ಸೂಚಿಸಿದರು. ಅದರಂತೆಯೇ ಈಗ ಕಾರ್ಯಾರಂಭ ಮಾಡಿದ್ದು, 2 ವರ್ಷದಲ್ಲಿ 1836 ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನೂ 5543 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಉದ್ಘಾಟಿಸಿ ಮಾತನಾಡಿ, 2 ವರ್ಷದ ಹಿಂದೆ ಫಿಜಿಯೋಥೆರಪಿ ಕೇಂದ್ರ ಆರಂಭಿಸಲಾಗಿದೆ. ಫೌಂಡೇಶನ್‌ನಿಂದ ಇನ್ನಷ್ಟು ನೆರವು ಪಡೆದು ರೋಗಿಗಳಿಗೆ ಚಿಕಿತ್ಸೆ ಕೊಡಲಾಗುವುದು. ಈ ಕುರಿತು ಜಿತೇಂದ್ರ ಮಜೇಥಿಯಾ ಅವರ ಜತೆಗೆ ಚರ್ಚಿಸಿದ್ದೇನೆ ಎಂದರು.ಫೌಂಡೇಶನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಕಶ್ಯಪ ಮಜೇಥಿಯಾ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ ಡಾ. ಕೆ. ರಮೇಶಬಾಬು, ಎಚ್.ಆರ್. ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ಡಾ. ನಾಗರಾಜ ರಾವ್ ಸಾನು, ಡಾ. ಕವಿತಾ ಮೋಹರೆ, ಡಾ. ವಿ.ಬಿ. ನಿಟಾಲಿ, ಡಾ. ರಮೇಶ್ ಬಾಬು, ಬಾಲಕೃಷ್ಣ ಸಾರಾಫ್, ದಯಾಭಾಯ, ಬುರ್ಜ್ ಭುಟಾಡಾ, ಪ್ರಹ್ಲಾದ್ ರಾವ, ಡಾ. ನಾಗರಾಜರಾವ್ ಸಾನು ಹಾಗೂ ಸಿಇಒ ಡಾ. ಸುನೀಲಕುಮಾರ್ ಕುಕನೂರು ಸೇರಿ ಹಲವರಿದ್ದರು.