ಬಿಜೆಪಿ ವಿರುದ್ದ ಮಂಕಾಳ ವೈದ್ಯ ಆರೋಪ ಸತ್ಯಕ್ಕೆ ದೂರ: ಈಶ್ವರ ನಾಯ್ಕ

KannadaprabhaNewsNetwork |  
Published : Nov 20, 2026, 02:15 AM IST
ಪೊಟೋ ಪೈಲ್ : ಈಶ್ವರ ನಾಯ್ಕ, ರಾಜ್ಯ ಬಿಜಿಪಿ ಹಿಂದುಳಿದ ವರ್ಗ ವಿಭಾಗದ ಉಪಾಧ್ಯಕ್ಷ  | Kannada Prabha

ಸಾರಾಂಶ

ಪಂಚ ಗ್ಯಾರಂಟಿಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿರುವ ಮಂಕಾಳ ವೈದ್ಯರು ರಾಜ್ಯಸರ್ಕಾರದ ಆರ್ಥಿಕ ದಿವಾಳಿತನವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.

ಭಟ್ಕಳ:

ಶಾಸಕರಾಗಿ ಗೆದ್ದ ನಂತರ ಕ್ಷೇತ್ರದ ಜನರ ಸೇವೆ ಮಾಡಬೇಕಿದ್ದ ಮಂಕಾಳ ವೈದ್ಯರು ಕಿಂಚಿತ್ತೂ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡಿದ್ದನ್ನು ಬಿಟ್ಟರೆ ಬೇರೇನೂ ಸಾಧನೆ ಮಾಡಿಲ್ಲ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಹೊನ್ನಾವರದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಕಾಳ ವೈದ್ಯರು, ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕೆಲಸ ಆಗಿದೆ ಎಂದು ಹೇಳಿದ್ದು, ತನ್ಮೂಲಕ ಬಿಜೆಪಿ ವಿರುದ್ಧ ಆರೋಪಿಸದಿದ್ದರೆ ತಮ್ಮ ದಿನಚರಿ ಪೂರ್ಣವಾಗುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಪ್ರಚಾರ ಮಾಡಿಕೊಂಡಿದ್ದಾರೆ. ಪಂಚ ಗ್ಯಾರಂಟಿಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿರುವ ಮಂಕಾಳ ವೈದ್ಯರು ರಾಜ್ಯಸರ್ಕಾರದ ಆರ್ಥಿಕ ದಿವಾಳಿತನವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳನ್ನು ಹೇಳುತ್ತಿರುವುದು ಯಾರು ಎನ್ನುವುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಚುನಾವಣಾ ಪೂರ್ವದಲ್ಲಿ ತಾವು ನೀಡಿದ್ದ ಆಶ್ವಾಸನೆಗಳೇನು, ತದನಂತರ ನೀವು ಮಾಡಿದ್ದೇನು ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ. ರಸ್ತೆಗಳು ಗುಂಡಿಬಿದ್ದಿವೆ, ಅಭಿವೃದ್ಧಿ ಎನ್ನುವುದು ಮರಿಚೀಕೆಯಾಗಿದೆ. ಹೀಗಿರುವಾಗ ತಾವು ಬಿಜೆಪಿಯ ವಿರುದ್ಧ ಮಾತನಾಡುವುದನ್ನೇ ನಿತ್ಯಕಾಯಕ ಮಾಡಿಕೊಂಡಿದ್ದೀರಿ ಎಂದಿರುವ ಅವರು

ಶಿರೂರು ಟೋಲ್ ಗೇಟ್ ಬಳಿ ಅಂಬುಲೆನ್ಸ್ ಅಪಘಾತದಲ್ಲಿ ಹತರಾದವರ ಮನೆಗೆ ಭೇಟಿ ನೀಡಿದ ತಾವು ಸ್ವಂತ ಖರ್ಚಿನಲ್ಲಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಕಟ್ಟಿಸುತ್ತೇನೆ ಎಂದು ಮಾತುಕೊಟ್ಟಿದ್ದು, ಗೆದ್ದು ಬಂದ ನಂತರ ಈ ವಿಚಾರವನ್ನೇ ಮರೆತುಬಿಟ್ಟಿದ್ದೀರಿ. ನೀವು ಮತ್ತು ನಿಮ್ಮ ಸರ್ಕಾರ ಹಾಗೂ ನಿಮ್ಮ ಸಚಿವರುಗಳು ಸುಳ್ಳು ಹೇಳುತ್ತಿದ್ದಾರೆ. ವಿಪರ್ಯಾಸವೆಂದರೆ ನೀವು ಬಿಜೆಪಿಯವರನ್ನು ಸುಳ್ಳು ಹೇಳುವವರು ಎಂದು ಆರೋಪಿಸುತ್ತಿರುವುದು ಮಹಾ ಸುಳ್ಳಿನ ಕಂತೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಸದಾಶಿವ ಮೇತ್ರಿ
ಕಲಾ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿಕೊಳ್ಳಿ