ನಿಸ್ವಾರ್ಥ ಸೇವೆಯಿಂದ ಮನುಕುಲಕ್ಕೆ ಒಳಿತು: ಚಂದ್ರಶೇಖರ್‌ ಗುರೂಜಿ

KannadaprabhaNewsNetwork | Published : Apr 27, 2025 1:32 AM

ಸಾರಾಂಶ

ಜನಸೇವೆ ಮಾಡುವಾಗ ನಿಸ್ವಾರ್ಥದಿಂದ ಮಾಡಿ, ಇದರಿಂದ ಮನುಕುಲಕ್ಕೆ ಒಳಿತಾಗುತ್ತದೆ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ತಿಳಿಸಿದರು.

ನುಗ್ಗೇಹಳ್ಳಿ: ಜನಸೇವೆ ಮಾಡುವಾಗ ನಿಸ್ವಾರ್ಥದಿಂದ ಮಾಡಿ, ಇದರಿಂದ ಮನುಕುಲಕ್ಕೆ ಒಳಿತಾಗುತ್ತದೆ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ತಿಳಿಸಿದರು.

ಹೋಬಳಿಯ ದೇವಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಕಮದೇವಿ ಹಾಗೂ ಶ್ರೀ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾತೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ನಮ್ಮನ್ನು ನಾವು ಅರಿತು ಸನ್ಮಾರ್ಗದಲ್ಲಿ ಸಾಗಿದರೆ ಮೋಕ್ಷ ದೊರೆಯುತ್ತದೆ. ಮನುಷ್ಯನಿಗೆ ಬೇಕಾಗಿರೋದು ಒಳ್ಳೆಯ ಗುಣ, ನಡತೆ, ನಂಬಿಕೆ, ಸ್ನೇಹ, ಪ್ರೀತಿ, ವಿಶ್ವಾಸ ಮಾತ್ರ ಗಟ್ಟಿಯಾಗಿ ಉಳಿಯುತ್ತದೆ, ಇದರಿಂದ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು. ಶ್ರೀ ಲಕ್ಕಮ್ಮ ದೇವಿ ಶ್ರೀ ಲಕ್ಷ್ಮಿ ದೇವಿಯ ಅನುಗ್ರಹದಿಂದ ಆದಷ್ಟು ಬೇಗ ಮಳೆ ಸುರಿಯುವಂತಾಗಲಿ ನಾಡಿಗೆ ಶಾಂತಿ ನೆಮ್ಮದಿ ದೊರೆಯಲಿ ದೇಶ ಸಮೃದ್ಧಿ ಆಗಲಿ ಎಂದು ವಿಶೇಷ ಪೂಜೆ ಹೋಮ ಮಾಡಲಾಗಿದ್ದು, ದೇವಿಯ ಕೃಪೆ ಎಲ್ಲರನ್ನೂ ಕಾಪಾಡಲಿ ಎಂದರು.

ಮಿತಿಮೀರಿದ ಪರಿಸರ ಮಾಲಿನ್ಯದಿಂದ ಸಕಾಲದಲ್ಲಿ ಮಳೆ ಬೀಳುತ್ತಿಲ್ಲ, ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಖಾಲಿ ಜಾಗಗಳಲ್ಲಿ ಗಿಡ ನೆಡುವ ಕಾರ್ಯ ಆದರೆ ಮಾನವ ಸಂಕುಲ, ಪ್ರಾಣಿ ಪಕ್ಷಿಗಳ ಸಂತತಿ ಉಳಿಸಲು ಸಾಧ್ಯವಾಗುತ್ತದೆ ಎಂದು ಚಂದ್ರಶೇಖರ್ ಗುರೂಜಿ ಸಲಹೆ ನೀಡಿದರು.

ಉಪನ್ಯಾಸಕ ರಾಜಶೇಖರ್, ಹಿರಿಯ ವಾಲಿಬಾಲ್ ಆಟಗಾರ ರಾಮಕೃಷ್ಣೇಗೌಡ, ಡಿ.ಸಿ. ನಾಗರಾಜ್, ರೂಪ ನಾಗರಾಜ್, ಡಿ.ಸಿ. ಉಮೇಶ್, ಡಿ. ಎಚ್. ರಂಗನಾಥ್, ಡಿ. ಬಿ. ಶಿವಲಿಂಗೇಗೌಡ, ಡಿ.ಆರ್. ನಾಗೇಶ್, ಟಿ. ಎಚ್. ಸ್ವಾಮಿ, ಡಿ.ಆರ್. ಜ್ಞಾನೇಶ್, ಅರ್ಚಕರುಗಳಾದ ಶ್ರೀಕಾಂತ್, ರಂಗನಾಥ್, ಸನತ್, ಯೋಗಾನಂದ, ಮಂಜೇಗೌಡ, ಮೂಡಲಗಿರಿಗೌಡ ಹಾಜರಿದ್ದರು.

Share this article