27ರಂದು ಮನ್‌ ಕಿ ಬಾತ್‌: ವೀಕ್ಷಣೆಗೆ ಸಿದ್ಧತೆ

KannadaprabhaNewsNetwork |  
Published : Jul 26, 2025, 12:00 AM IST
ಹೊನ್ನಾಳಿ ಫೋಟೋ 25ಎಚ್.ಎಲ್.ಐ1. ಜುಲೈ 27ರ  ಭಾನುವಾರ ನಡೆಯಲಿರುವ ಮನ್‌ಕಿಬಾತ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಹೊನ್ನಾಳಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ನೇತೃತ್ವದಲ್ಲಿ ತಾಲೂಕು ಬಿಜೆಪಿ ಮುಖಂಡರುಗಳು ಪೂರ್ವಭಾವಿ ಸಭೆ ನಡೆಸಿದರು.ಮಾಜಿ ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ಮಾರುತಿನಾಯ್ಕ್,ರಂಗನಾಥ್,ಎಸ್.ಎಸ್.ಬೀರಪ್ಪ, ಸಿ.ಆರ್.ಶಿವಾನಂದ್,ಮಂಜುನಾಥ್ ಇಂಚರ,ರಾಜುಗೌಡ್ರು,ಕುಳಗಟ್ಟೆ ರಂಗನಾಥ್,ಕೆ.ವಿಶ್ರೀಧರ್,ಬಾಬು ಹೋಬಳದಾರ್,ಪೇಟೆ ಪ್ರಶಾಂತ್,ತಿಪ್ಪೇಶ್ ಹಾಗೂ ಇತರರು ಇದ್ದಾರೆ. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್ ಕಾರ್ಯಕ್ರಮ ಜುಲೈ 27ರಂದು ನಡೆಯಲಿದ್ದು, ಹೊನ್ನಾಳಿಯಲ್ಲೂ ಮನ್‌ ಕಿ ಬಾತ್‌ ನೇರ ವೀಕ್ಷಣೆಗೆ ಪಟ್ಟಣದ ಮೋಹನ್ ಎನ್‌ಕ್ಲೇವ್‌ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಹೇಳಿದ್ದಾರೆ.

- ಮೋಹನ್ ಎನ್‌ಕ್ಲೇವ್‌ ಸಭಾಂಗಣದಲ್ಲಿ ವ್ಯವಸ್ಥೆ: ತಾಲೂಕು ಅಧ್ಯಕ್ಷ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್ ಕಾರ್ಯಕ್ರಮ ಜುಲೈ 27ರಂದು ನಡೆಯಲಿದ್ದು, ಹೊನ್ನಾಳಿಯಲ್ಲೂ ಮನ್‌ ಕಿ ಬಾತ್‌ ನೇರ ವೀಕ್ಷಣೆಗೆ ಪಟ್ಟಣದ ಮೋಹನ್ ಎನ್‌ಕ್ಲೇವ್‌ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಹೇಳಿದರು.

ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಕೊನೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಮುಖಾಂತರ ದೇಶವಾಸಿಗಳ ಉದ್ದೇಶಿಸಿ, ನಾಡಿನ ಪ್ರಗತಿ ವಿಷಯಗಳ ಕುರಿತು ಮಾತನಾಡುತ್ತಾರೆ. ಕಾರ್ಯಕ್ರಮ ಕುರಿತು ಪ್ರಧಾನಿ ಕಚೇರಿಯಿಂದ ಪತ್ರ ಬಂದಿರುವ ಹಿನ್ನೆಲೆ ಈ ಬಾರಿ ಹೊನ್ನಾಳಿ ಜನರು ನೇರವಾಗಿ ಭಾಗವಹಿಸಿ, ಚರ್ಚಿಸಲು ಪೂರಕವಾಗಿ ಕಾರ್ಯಕ್ರಮ ವೀಕ್ಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮನ್‌ ಕಿ ಬಾತ್ ಕಾರ್ಯಕ್ರಮದ 4 ರಾಜ್ಯಗಳ ಉಸ್ತುವಾರಿಗಳಾದ ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಅಧ್ಯಕ್ಷ ರಾಜಶೇಖರ್‌ ನಾಗಪ್ಪ ಹಾಗೂ ಇತರರು ಈ ವೇಳೆ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ನೇರಪ್ರಸಾರ ಭಾನುವಾರ ಬೆಳಗ್ಗೆ 11ರಿಂದ 11.30 ಗಂಟೆಗೆ ಡಿ.ಡಿ. -1 ವಾಹಿನಿಯಲ್ಲಿ ನೇರ ಪ್ರಸಾರ ಆಗಲಿದೆ. 11.30ರಿಂದ 12 ಗಂಟೆವರೆಗೆ ಚಂದನ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಕುಟುಂಬ ಹಾಗೂ ಇತರರು ಸಹ ಮನ್‌ ಕಿ ಬಾತ್ ವೀಕ್ಷಣೆಗೆ ವ್ಯವಸ್ಥೆ ಮಾಡಿ, ನಂತರ ಈ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಬೇಕು ಎಂದು ಕೋರಿದರು.

ತಾಲೂಕು ಮಾಜಿ ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಮಾರುತಿ ನಾಯ್ಕ್, ರಂಗನಾಥ್‌, ಬೀರಪ್ಪ, ಸಿ.ಆರ್. ಶಿವಾನಂದ್, ಮಂಜುನಾಥ್ ಇಂಚರ, ರಾಜುಗೌಡ, ಕುಳಗಟ್ಟೆ ರಂಗನಾಥ್, ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ಪೇಟೆ ಪ್ರಶಾಂತ್, ತಿಪ್ಪೇಶ್ ಇತರರು ಇದ್ದರು.

- - -

-25ಎಚ್.ಎಲ್.ಐ1.ಜೆಪಿಜಿ:

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’