ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಸರ್ಕಾರಿ ಶಾಲೆಗಳಿಗೆ ಹಲವು ಸೌಲಭ್ಯ: ಅರವಿಂದ ರಾಘವನ್

KannadaprabhaNewsNetwork |  
Published : Oct 29, 2024, 12:46 AM IST
28ಕೆಎಂಎನ್ ಡಿ12 | Kannada Prabha

ಸಾರಾಂಶ

ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಡೀ ಕಟ್ಟಡಕ್ಕೆ 1.50 ಲಕ್ಷ ರು. ವೆಚ್ಚದಲ್ಲಿ ಬಣ್ಣ ಮಾಡಿಸಲಾಗಿದೆ. 2 ಲಕ್ಷ ರು. ವೆಚ್ಚದಲ್ಲಿ ಚಿನಕುರಳಿ ಹೋಬಳಿ ಸಣಬದಕೊಪ್ಪಲು ಸರ್ಕಾರಿ ಪ್ರೌಢ ಶಾಲೆಗೆ ಸಂಪೂರ್ಣ ರೀಪೈಟಿಂಗ್ ಮತ್ತು ವಾಟರ್ ಪ್ರೂಪಿಂಗ್ ಮಾಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದು ಬೆಂಗಳೂರಿನ ಖ್ಯಾತ ವಕೀಲ ಅರವಿಂದ ರಾಘವನ್ ತಿಳಿಸಿದರು.

ಹೋಬಳಿಯ ಮಾಣಿಕ್ಯನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಟ್ರಾಕ್ ಸೂಟ್ ವಿತರಿಸಿ ಮಾತನಾಡಿ, ಕನ್ನಡ ಶಾಲೆಗಳು ಬಲವರ್ಧನೆಯಾಗಬೇಕು ಎಂಬ ಸದಾಶಯದೊಂದಿಗೆ ಕ್ಷೇತ್ರದ ಶಾಲೆಗಳಿಗೆ ಅಕ್ಟೋಬರ್ ಮಾಹೆಯ ಚಟುವಟಿಕೆಯಲ್ಲಿ ಹಲವು ಸೌಲಭ್ಯ ನೀಡಿದ್ದೇನೆ ಎಂದರು.

ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಡೀ ಕಟ್ಟಡಕ್ಕೆ 1.50 ಲಕ್ಷ ರು. ವೆಚ್ಚದಲ್ಲಿ ಬಣ್ಣ ಮಾಡಿಸಲಾಗಿದೆ. 2 ಲಕ್ಷ ರು. ವೆಚ್ಚದಲ್ಲಿ ಚಿನಕುರಳಿ ಹೋಬಳಿ ಸಣಬದಕೊಪ್ಪಲು ಸರ್ಕಾರಿ ಪ್ರೌಢ ಶಾಲೆಗೆ ಸಂಪೂರ್ಣ ರೀಪೈಟಿಂಗ್ ಮತ್ತು ವಾಟರ್ ಪ್ರೂಪಿಂಗ್ ಮಾಡಿಸಲಾಗಿದೆ ಎಂದರು.

ಹೋಬಳಿಯ ಬೆಳ್ಳಾಳೆ ಸರ್ಕಾರಿ ಪ್ರಾಥಮಿಕ ಶಾಲೆಯ ಪೈಟಿಂಗ್‌ಗೆ 76 ಸಾವಿರ ರು., ಬೆಳ್ಳಾಳೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 79 ಸಾವಿರ ರು. ವೆಚ್ಚದಲ್ಲಿ ಬೋರ್‌ವೆಲ್‌ಗೆ ಹೊಸ ಮೋಟರ್ ಅಳವಡಿಸಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ ಯುಪಿಎಸ್ ನೀಡಲಾಗಿದೆ ಎಂದರು.

50 ಸಾವಿರ ವೆಚ್ಚದಲ್ಲಿ ಸಣಬದ ಕೊಪ್ಪಲು ಶಾಲೆಗೆ ಸ್ಮಾರ್ಟ್ ಬೋರ್ಡ್ ಕೊಡುಗೆ ನೀಡಲಾಗಿದೆ. ಮಾಣಿಕ್ಯನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ 40 ಸಾವಿರ ವೆಚ್ಚದಲ್ಲಿ ಟ್ರಾಕ್ ಸೂಟ್ ನೀಡಲಾಗಿದೆ. ಇದರ ಜೊತೆಗೆ ಸಾಮಾಜಿಕ ಕೆಲಸ ಮಾಡುವವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಲಾಗಿದೆ ಎಂದರು.

ಎರಡು ದಶಕಗಳ ಹಿಂದೆ ಮೇಲುಕೋಟೆಯ ಸುತ್ತಮುತ್ತಲ ಶಾಲೆಗಳಲ್ಲಿ ಸೇವೆ ಮಾಡಲು ಕಾರ್ಯಾರಂಭ ಮಾಡಿ ಕಾರ್ಯ ಚಟುವಟಿಕೆಯನ್ನು ಮೇಲುಕೋಟೆ ಕ್ಷೇತ್ರಕ್ಕೆ ವಿಸ್ತಿರಿಸಿ ಇದಕ್ಕೊಂದು ರೂಪ ನೀಡಲು ಬಾಲಭೈರವೇಶ್ವರ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಪ್ರಾರಂಭಿಸಿ ಈವರಗೆ ಕೋಟ್ಯಂತರ ರುಗಳ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಿ ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಕಾರ್ಪೊರೇಟ್ ಕಂಪನಿಗಳ ನಿರ್ವಹಣೆಯ ಸಚಿವಾಲಯ ನಮ್ಮ ಸೇವೆ ಗುರುತಿಸಿ ಇದೀಗ ಸಿ.ಆರ್.ಎಸ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಮ್ಮ ಟ್ರಸ್ಟ್‌ಗೆ ಅವಕಾಶ ನೀಡಿ ಆದೇಶ ಮಾಡಿದೆ. ಇದರಿಂದ ವಿವಿಧ ಕಾರ್ಪೊರೇಟ್ ಕಂಪನಿಗಳು ನಮ್ಮ ಮೂಲಕ ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಆರ್.ಎಸ್ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಈ ಬೆಳವಣಿಗೆ ನಮಗೆ ಅತ್ಯಂತ ಸಂತೋಷ ತಂದಿದ್ದು ಸಾಮಾಜಿಕ ಚಟುವಟಿಕೆ ಕೈಗೊಳ್ಳಲು ಹೆಚ್ಚು ಶಕ್ತಿ ತುಂಬಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ವಿವಿಧ ಶಾಲೆಗಳಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಬಿಇಒ ರವಿಕುಮಾರ್ ಹಾಗೂ ಶಾಲೆ ಮುಖ್ಯಶಿಕ್ಷಕರು, ಎಸ್.ಡಿ.ಎಂಸಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌