ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮೃದ್ಧಿ ಸಂತೃಪ್ತಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಮಾಡುವ ಹಲವು ಸ್ವ ಉದ್ಯೋಗ ಉಪಕರಣಗಳು- ಸೆಲ್ಕೋ ಸಂಸ್ಥೆಯಲ್ಲಿ ಲಭ್ಯವಿದೆ. ಸರ್ಕಾರಗಳು ಹಲವು ರೀತಿಯ ಸಹಾಯಧನ ನೀಡುವ ಅವಕಾಶಗಳಿವೆ ಎಂದರು.
ಹೆಣ್ಣುಮಕ್ಕಳು ನೆಮ್ಮದಿ ಜೀವನ ನಡೆಸಲು ಬಹಳಷ್ಟು ಕಷ್ಟ ಪಡುತ್ತಾರೆ. ಆರ್ಥಿಕವಾಗಿ ದುರ್ಬಲ ಹಾಗೂ ಮಾನಸಿಕವಾಗಿ ಕುಗ್ಗಿ ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಅಂತಹ ಹೆಣ್ಣುಮಕ್ಕಳಿಗೆ, ಮಹಿಳೆಯರು ನೆರವಾಗಲು ಸೆಲ್ಕೋ ಸಂಸ್ಥೆ ಸೌಲಭ್ಯ ಕಲ್ಪಿಸಿದೆ ಎಂದರು.ಸೆಲ್ಕೋ ಸಂಸ್ಥೆ ಡಿಜಿಎಂ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಇರುವ ಜೀವನ ಆಧಾರಿತ ಸೌರ ಚಾಲಿತ ಉಪಕರಣಗಳಾದ ಹಾಲು ಕರೆವ ಯಂತ್ರ, ಕುಲುಮೆ ಯಂತ್ರ, ಬೆಣ್ಣೆ ಕಡೆವ ಯಂತ್ರ, ಹೊಲಿಗೆ ಯಂತ್ರ, ರೊಟ್ಟಿ ತಯಾರಿಕ ಯಂತ್ರ, ಶೀತಿಲಿಕರಣ ಯಂತ್ರ, ಕಬ್ಬಿನಹಾಲು ತೆಗೆವ ಯಂತ್ರ, ತರಕಾರಿ ಕತ್ತರಿಸುವ ಯಂತ್ರ, ಹೀಗೆ ಹೈನುಗಾರಿಕೆ, ಕೃಷಿ, ಆಹಾರ ಸಂಸ್ಕಾರಣ ಘಟಕ, ಜೀವನೋಪಾಯ ಘಟಕ, ಅಂಗವಿಕಲರಿಗೆ ಸಂಬಂದಿಸಿದ ಸೌರ ಉಪಕರಣಗಳು, ಉದ್ಯೋಗ ಸೃಷ್ಟಿ ಮಾಡುವ ಉಪಕರಣ ಗಳ ಬಗ್ಗೆ ಮಾಹಿತಿ ನೀಡಿದರು.