ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಯಲಕ್ಷ್ಮೀಪುರಂನ ಮಹಾಜನ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಸಮಕಾಲೀನ ಯುಗದಲ್ಲಿ ಮಾನವ ಹಕ್ಕುಗಳ ಪ್ರಸ್ತುತತೆ ಮತ್ತು ಹೊಸ ಸವಾಲು ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಎರಡನೇ ವಿಶ್ವ ಮಹಾಯುದ್ಧದ ನಂತರ ಮಾನವ ಹಕ್ಕುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿದೆ. 1948 ರಂದು ವಿಶ್ವ ಸಂಸ್ಥೆಯಿಂದ ಹಕ್ಕುಗಳ ಜಾರಿಗೆ ನಿರ್ಧರಿಸಲಾಯಿತು. ಭಾರತದ ಸಂವಿಧಾನವೂ ನೈಸರ್ಗಿಕ ಹಕ್ಕುಗಳಾಗಿ ವಾನವ ಹಕ್ಕುಗಳನ್ನು ಗುರುತಿಸಿ ನಮಗೆ ನೀಡಿದೆ. ಎಂತಹ ತುರ್ತು ಪರಿಸ್ಥಿತಿಯಲ್ಲೂ ಈ ಹಕ್ಕುಗಳನ್ನು ಮೊಟಕುಗೊಳಿಸಲಾಗಲಿ, ನಿಯಂತ್ರಣ ಹೇರುವುಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಭಯೋತ್ಪಾದನೆ ಇಂದು ಮಾನವ ಹಕ್ಕುಗಳ ರಕ್ಷಣೆಯಲ್ಲಿ ದೊಡ್ಡ ಸವಾಲಾಗಿದೆ. ನಕ್ಸಲಿಸಂ ನಲ್ಲಿ ತೊಡಗುವ ಅನೇಕರು, ಉತ್ತಮ ಶೈಕ್ಷಣಿಕ ಸಾಧನೆ ಮಾಡಿದರು. ಅವರಿಗೆ ಈ ದೃಷ್ಟಿಕೋನದಲ್ಲೂ ಸಮಸ್ಯೆ ಗಮನಿಸಬೇಕು. ಮೂಲಭೂತ ಹಕ್ಕುಗಳಿಗೆ ನಿಯಂತ್ರಣವಿದ್ದರೂ, ಮಾನವ ಹಕ್ಕುಗಳಿಗೆ ಭಿನ್ನವಾದ ಸ್ಥಾನವಿದೆ ಹಾಗೂ ಅವುಗಳಿಗೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲಾಗಿದೆ ಎಂದರು.
ಬಹಳಷ್ಟು ಜನ ಬಡತನದಲ್ಲಿದ್ದು, ಶಿಕ್ಷಣದ ಕೊರತೆಯಿಂದಾಗಿ ಕಾನೂನಿನ ಅರಿವು ಇಲ್ಲದಂತಾಗಿದೆ. ಉತ್ತಮ ಶಿಕ್ಷಣ ನೀಡುವ ಮೂಲಕ ಹಕ್ಕುಗಳ ರಕ್ಷಣೆ, ನ್ಯಾಯ ಪಡೆಯುವಲ್ಲಿ, ಸವಾಲನ್ನು ಎದುರಿಸುವ ಅಗತ್ಯವಿದೆ. ಮಾನವ ಹಕ್ಕುಗಳ ರಕ್ಷಣೆಗೆ ಸಮುದಾಯದ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವುದು ಕಷ್ಟವಾಗುತ್ತಿದೆ. ಇದಕ್ಕೆ ಎಲ್ಲರೂ ಹೊಣೆಗಾರರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಪ್ಪು ಅರಿತುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ.ಸಿ. ಬಸವರಾಜು ಮಾತನಾಡಿ ಮಾನವ ಹಕ್ಕುಗಳು ನಮ್ಮ ದೇಶಕ್ಕಲ್ಲದೆ, ಇಡೀ ವಿಶ್ವಕ್ಕೆ ಅನ್ವಯಿಸುವಂತಹ ಹಕ್ಕುಗಳು. ಈ ಎಲ್ಲಾ ಹಕ್ಕುಗಳು ಮಾನವನಿಗೆ ಪ್ರಕೃತಿದತ್ತವಾಗಿ ಬಂದಿವೆ. ಮನುಷ್ಯನ ಅಸ್ತಿತ್ವಕ್ಕೆ, ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾನವ ಹಕ್ಕುಗಳ ಅತ್ಯಂತ ಅವಶ್ಯಕ. ಮಾನವ ಹಕ್ಕುಗಳ ಉಲ್ಲೇಖವು ವೇದ, ಪುರಾಣಗಳಲ್ಲೇ ತಿಳಿಸಲಾಗಿದೆ ಎಂದರು.
ಮಹಾಜನ ಶಿಕ್ಷಣ ಸಮಾಜ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷಿ ಮುರಳೀಧರ್, ಆಡಳಿತಾಧಿಕಾರಿ ಪ್ರೊ.ಪಿ. ಸರೋಜಮ್ಮ, ಮಹಾಜನ ಕಾನೂನು ಕಾಲೇಜು ಪ್ರಾಂಶುಪಾಲೆ ಕೆ. ಸೌಮ್ಯಾ ಇದ್ದರು.