ವಿದ್ಯಾರ್ಥಿಗಳು ಶಿಕ್ಷಣ ಹಳಿಗೆ ಬರುವಂತೆ ಮಾಡಿದ ಮರಳಿ ಬಾ ನಾಟಕ

KannadaprabhaNewsNetwork |  
Published : Aug 12, 2026, 03:00 AM IST
ವಿದ್ಯಾರ್ಥಿಗಳ ಜೊತೆ ನೆಲದ ಮೇಲೆಯೇ ಕುಳಿತು ಮರಳಿ ಬಾ ನಾಟಕವನ್ನು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ವೀಕ್ಷಿಸಿದರು. | Kannada Prabha

ಸಾರಾಂಶ

ಇಂದು ವಿದ್ಯಾರ್ಥಿಗಳು ಮೊಬೈಲ್, ಆನ್ ಲೈನ್, ಮದ್ಯಪಾನ, ಡ್ರಗ್ಸ್ ಸೇರಿದಂತೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತಹ ವಿದ್ಯಾರ್ಥಿಗಳನ್ನು ಮರಳಿ ಬಾ ಕಿರುನಾಟಕ ಶಿಕ್ಷಣದ ಹಳಿಗೆ ತರಲು ಪ್ರೇರೇಪಿಸುತ್ತದೆ. ಇಂತಹ ನಾಟಕ ಪ್ರದರ್ಶನಕ್ಕೆ ಬಂದಿದ್ದು ಸಾರ್ಥಕವೆನಿಸಿತು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಕೂಡ್ಲಿಗಿ: ಇಂದು ವಿದ್ಯಾರ್ಥಿಗಳು ಮೊಬೈಲ್, ಆನ್ ಲೈನ್, ಮದ್ಯಪಾನ, ಡ್ರಗ್ಸ್ ಸೇರಿದಂತೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತಹ ವಿದ್ಯಾರ್ಥಿಗಳನ್ನು ಮರಳಿ ಬಾ ಕಿರುನಾಟಕ ಶಿಕ್ಷಣದ ಹಳಿಗೆ ತರಲು ಪ್ರೇರೇಪಿಸುತ್ತದೆ. ಇಂತಹ ನಾಟಕ ಪ್ರದರ್ಶನಕ್ಕೆ ಬಂದಿದ್ದು ಸಾರ್ಥಕವೆನಿಸಿತು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಚಿಕ್ಕಜೋಗಿಹಳ್ಳಿಯ ಸರ್ಕಾರಿ ಬಾಲಕರ ಪ್ರೌಡಶಾಲೆಯಲ್ಲಿ ಗಜಾಪುರದ ಶ್ರೀ ಗಂಗಾ ಪರಮೇಶ್ವರಿ ಗ್ರಾಮೀಣ ಹಾಗೂ ಕಲ್ಯಾಣಾಭಿವೖದ್ಧಿ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತವಾಗಿ ಆಯೋಜಿಸಿದ್ದ ಭೀಮಣ್ಣ ಗಜಾಪುರ ರಚನೆಯ ಹರಿಶ್ ಜಿಂಕೆ ನಿರ್ದೇಶನದ ಮರಳಿ ಬಾ ಎನ್ನುವ ನಾಟಕ ಉದ್ಘಾಟಿಸಿ ಮಾತನಾಡಿದರು.

ನಾನು ಶಾಸಕನಾಗಿ ಮೊದಲು ಶಿಕ್ಷಣ, ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುತ್ತಿದ್ದೇನೆ. ನಾಟಕ ನೋಡಿದ ಮೇಲೆ ನಾನು ಭಾವುಕನಾದೆ. ಕಲಾವಿದರು ಮನೋಜ್ಞವಾಗಿ, ಎಲ್ಲ ಮಕ್ಕಳ ಹೖದಯಕ್ಕೆ ತಟ್ಟುವ ಹಾಗೇ ಅಭಿನಿಯಸಿದ್ದು, ನನ್ನ ಹೖದಯಕ್ಕೂ ನಾಟಿತು. ಹೀಗಾಗಿ, ಮರಳಿ ಬಾ ನಾಟಕ ಪ್ರಸ್ತುತ ಪಡಿಸುವ ತಂಡ ತಾಲೂಕಿನ ಎಲ್ಲ ಶಾಲೆಗಳಲ್ಲಿ ಪ್ರದರ್ಶನವಾಗಲೀ. ನಮ್ಮ ಹಿಂದುಳಿದ ತಾಲೂಕಿನಲ್ಲಿ ಶಿಕ್ಷಣ ಕಲಿಯಲು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಮೈಕ್, ಉಳಿದುಕೊಳ್ಳಲು ವ್ಯವಸ್ಥೆ, ಊಟ, ಉಪಚಾರ ನಾನೇ ನೋಡಿಕೊಳ್ಳುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ರಾಜ್ಯ ನಾಟಕ ಅಕಾಡೆಮಿ ಸದಸ್ಯರಾದ ಶಿವುನಾಯಕ ದೊರೆ ಮಾತನಾಡಿ, ಗಜಾಪುರದ ಶ್ರೀ ಗಂಗಾಪರಮೇಶ್ವರಿ ಗ್ರಾಮೀಣ ಹಾಗೂ ಕಲ್ಯಾಣಾಭಿವೖದ್ಧಿ ಸಂಸ್ಥೆಯು ಯಾವುದೇ ಸರ್ಕಾರಿ ಅನುದಾನ ಪಡೆಯದೇ ನಾಟಕ ಪ್ರದರ್ಶನ ಮಾಡುತ್ತಿದೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಶಾಲೆ ಬಿಡದಂತೆ, ದುಶ್ಚಟಗಳ ದಾಸರಾಗದಂತೆ ತಡೆಯಲು ಈ ನಾಟಕ ಸ್ಫೂರ್ತಿಯಾಗುತ್ತಿದ್ದು, ಹರಿಶ್ ಜಿಂಕೆ ನಿ

ರ್ದೇಶನದಲ್ಲಿ ಎಲ್ಲ ಕಲಾವಿದರು ಉತ್ಸುಕತೆಯಿಂದ ಪಾತ್ರನಿರ್ವಹಿಸುತ್ತಿದ್ದಾರೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಬಿಸಿಎಂ ತಾಲೂಕು ಅಧಿಕಾರಿ ಶ್ಯಾಮಪ್ಪ, ಶಾಲಾಭಿವೖದ್ಧಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಯುವ ಮುಖಂಡರಾದ ಬಣವಿಕಲ್ಲು ಯರ್ರಿಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬೊಮ್ಮಣ್ಣ, ಉಪಾಧ್ಯಕ್ಷ ಧನಂಜಯ, ಮುಖ್ಯಶಿಕ್ಷಕರಾದ ಸಕಲೇಶ್ವರ, ಗೋವಿಂದಪ್ಪ, ಸರ್ಕಾರಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಭರತೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಟೇರ್ ಹಾಲೇಶ್, ಗಾಯಕರಾದ ಚಿಕ್ಕೋಬನಹಳ್ಳಿ ಡಿ.ಓ. ಮೊರಾರ್ಜಿ, ಎಂ.ಎಸ್.ಟಿ. ವಾಹನ ಮಾಲೀಕರಾದ ರಹಮತ್ ವುಲ್ಲಾ, ಮಹ್ಮದ್ ಹನೀಫ್‌ ಮುಂತಾದವರು ಹಾಜರಿದ್ದರು.

ನೆಲದ ಮೇಲೆ ಕುಳಿತು ನಾಟಕ ವೀಕ್ಷಣೆ: ಶಾಸಕ ಎನ್‌.ಟಿ. ಶ್ರೀನಿವಾಸ್‌ ನೂರಾರು ಮಕ್ಕಳ ಜೊತೆ ನೆಲದ ಮೇಲೆಯೇ ಕುಳಿತು 40 ನಿಮಿಷಗಳ ಕಾಲ ನಾಟಕ ವೀಕ್ಷಣೆ ಮಾಡಿದರು. ಶಾಸಕರು ನೆಲದ ಮೇಲೆ ಕುಳಿತದ್ದು ನೋಡಿ ಅಲ್ಲಿಯೇ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು, ಮುಖಂಡರೂ ಶಾಸಕರ ಜೊತೆ ನೆಲದ ಮೇಲೆಯೇ ಕುಳಿತು ನಾಟಕ ವೀಕ್ಷಣೆ ಮಾಡಿದರು. ನಾಟಕ ನೋಡಿದ ಮೇಲೆ ಶಾಸಕರು ಮಾತನಾಡಿ, ನಾನು ಇಷ್ಟೊಂದು ಮನಮುಟ್ಟುವಂತೆ ನಾಟಕ ಪ್ರದರ್ಶನ ಮಾಡುತ್ತಾರೆ ಎಂದು ಊಹಿಸಿರಲಿಲ್ಲ. ನಮ್ಮ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಈ ನಾಟಕ ಪ್ರದರ್ಶನ ಮಾಡಬೇಕು. ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದರು. ಸ್ಥಳದಲ್ಲಿಯೇ ನಾಟಕ ನಿರ್ದೇಶಕ ಹರೀಶ್ ಜಿಂಕೆ ಅವರಿಗೆ ₹10 ಸಾವಿರ ನಗದು ಹಣ ನೀಡಿ ಕಲಾವಿದರನ್ನು ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ಪ್ರಬಂಧ, ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ
(ಬಾಟಂ) ಮಹಿಳೆಯರ ಸಾಧನೆ ವಿಶ್ವಕ್ಕೆ ಪಸರಿಸಲಿ: ಹರಪನಹಳ್ಳಿ ರವೀಂದ್ರ