ಕನಕಪುರ: ಕನಕೋತ್ಸವ ಎರಡನೇ ದಿನದ ಕಾರ್ಯಕ್ರಮ ಬೆಳಗ್ಗೆ 5 ಗಂಟೆಗೆ ಯೋಗಾಭ್ಯಾಸದೊಂದಿಗೆ ಆರಂಭವಾಯಿತು. ಬಳಿಕ ಬೆಳಗ್ಗೆ 7.30ಕ್ಕೆ ರನ್ ಫಾರ್ ಮನರೇಗಾ ಕಾರ್ಯಕ್ರಮ "ಮನರೇಗಾ ಉಳಿಸಿ ಗ್ರಾಮೀಣ ಜನರ ಬದುಕು ರಕ್ಷಿಸಿ " ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಹದಿನಾರು ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಮ್ಯಾರಾಥಾನ್ ಓಟಕ್ಕೆ ಬಮುಲ್ ಅಧ್ಯಕ್ಷ ಡಿ.ಕೆ ಸುರೇಶ್ ಚಾಲನೆ ನೀಡಿ ಶುಭ ಹಾರೈಸಿದರು.
ಮಧ್ಯಾಹ್ನ 2.30ರ ನಂತರ ಜಾನಪದ ಮತ್ತು ದೇಶಭಕ್ತಿ ಗೀತೆಗಳ ಗಾಯನ, ಸಮೂಹ ನೃತ್ಯ ಹಾಗೂ ಚಲನಚಿತ್ರ ಗೀತೆಗಳ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲಾದ್ಯಂತದ ಸಾವಿರಾರು ಶಾಲಾ ಮಕ್ಕಳು ಆಗಮಿಸಿ ಹುಮ್ಮಸ್ಸಿನಿಂದ ಪಾಲ್ಗೊಂಡು ಒಂದಕ್ಕೊಂದು ವಿಭಿನ್ನ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮಲ್ಲಿರುವ ಕಲಾ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದರು
ಕೇವಲ ಐದೇ ನಿಮಿಷದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭಾವಚಿತ್ರ ವನ್ನು ಒಬ್ಬ ಕಲಾವಿದ ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಸುರೇಶ್ ಚಿತ್ರ ಬಿಡಿಸುತ್ತಿದ್ದ ಮಕ್ಕಳ ಬಳಿ ಸಾಗಿ ಮೆಚ್ಚುಗೆ ವ್ಯಕ್ತಪಡಿಸಿ ಮೂಕವಿಸ್ಮಿತರಾಗಿ ನೋಡುತ್ತಾ ಮಕ್ಕಳಿಗೆ ಶುಭ ಹಾರೈಸಿದರು.ಕೆ ಕೆ ಪಿ ಸುದ್ದಿ 01(1) :
ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳು.ಕೆ ಕೆ ಪಿ ಸುದ್ದಿ 1(2)
ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿಕುಸ್ತಿ ಪಟುಗಳ ಪ್ರದರ್ಶನ.
ಕೆ ಕೆ ಪಿ ಸುದ್ದಿ 1(3)ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಶುಭ ಹಾರೈಸಿದ ಡಿ.ಕೆ.ಸುರೇಶ್
ಕೆ ಕೆ ಪಿ ಸುದ್ದಿ 1(4)ಐದೇ ನಿಮಿಷದಲ್ಲಿ ಬಿಡಿಸಿದ ಡಿ.ಕೆ.ಸಹೋದರರ ಭಾವಚಿತ್ರ