ಮರಿಗೌಡ ಅವರದ್ದು ಕಳಂಕರಹಿತ ವ್ಯಕ್ತಿತ್ವ: ಸಚಿವ ದರ್ಶನಾಪುರ

KannadaprabhaNewsNetwork |  
Published : Jul 29, 2024, 12:46 AM IST
ಇತ್ತೀಚೆಗೆ ಅಗಲಿದ ಮರಿಗೌಡ ಹುಲಕಲ್ ಅವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಶಹಾಪುರ ನಗರದ ಸಂಗೊಳ್ಳಿ ರಾಯಣ್ಣ ಸಭಾ ಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಅಗಲಿದ ಕಾಂಗ್ರೆಸ್‌ ಮುಖಂಡ ಮರಿಗೌಡ ಪಾಟೀಲ್ ಹುಲಕಲ್ ಅವರು ಜಾತಿ, ಮತ, ಧರ್ಮ ಯಾವುದೇ ತಾರತಮ್ಯ ಮಾಡದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಕಳಂಕ ರಹಿತ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಅಗಲಿದ ಕಾಂಗ್ರೆಸ್‌ ಮುಖಂಡ ಮರಿಗೌಡ ಪಾಟೀಲ್ ಹುಲಕಲ್ ಅವರು ಜಾತಿ, ಮತ, ಧರ್ಮ ಯಾವುದೇ ತಾರತಮ್ಯ ಮಾಡದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಕಳಂಕ ರಹಿತ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಿಧನರಾದ ಮರಿಗೌಡ ಪಾಟೀಲ್ ಹುಲಕಲ್ ಅವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಭಾನುವಾರ ನಗರದ ಸಂಗೊಳ್ಳಿ ರಾಯಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1985 ರಿಂದ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಮುಖ್ಯಮಂತ್ರಿಗಳ ಹೆಸರೇಳಿಕೊಂಡು ಅಧಿಕಾರವನ್ನು ಎಂದು ದುರುಪಯೋಗ ಮಾಡಿಕೊಂಡವರಲ್ಲ. ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಪಕ್ಷದ ಪರ ಪರಿಶ್ರಮವಿಲ್ಲದೆ ಪ್ರಚಾರ ಮಾಡಿ ರಾಜ್ಯದಲ್ಲಿ ಪಕ್ಷಕ್ಕೆ ಅಧಿಕಾರ ತಂದು ಕೊಟ್ಟವರು ಎಂದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಮರಿಗೌಡರು ರಾಜಕೀಯವಾಗಿ ಯಾವುದೇ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿ. ಅವರ ಚಿಂತನೆಗಳು ಸದಾ ನೆನಪಿನಲ್ಲಿ ಉಳಿಯುತ್ತೇವೆ ಎಂದರು.

ಸುರಪುರ ಶಾಸಕ ರಾಜ ವೇಣುಗೋಪಾಲ ನಾಯಕ ಮಾತನಾಡಿ, ಮರಿಗೌಡರು ನಮ್ಮ ತಂದೆಯ ಸಾವಿನ ನಂತರ ಪಕ್ಷಕ್ಕೆ ಮತ್ತು ನಮಗೆ ಒಂದು ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬದ ಜೊತೆಗೆ ನಾವು ಇರುತ್ತೇವೆ ಎಂದು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಏಕದಂಡಗಿ ಮಠದ ಪೀಠಾಧಿಪತಿ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ನ್ಯಾಯಯುತವಾದ ಕೆಲಸ ಮಾಡಿದ ಮರಿಗೌಡ ಹುಲಕಲ್ ಅವರು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದಕ್ಕೆ ಇಂದಿನ ನುಡಿನಮನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮಾತೆಪ್ಪ ಸಾಹು, ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ, ಕರವೇ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶರಣು ಬಿ. ಗದ್ದುಗೆ, ಶರಣಪ್ಪ ಸಲಾದಪುರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮುಂತಾದವರು ಮಾತನಾಡಿದರು.

ಬಸವರಾಜ ವಿಭೂತಿಹಳ್ಳಿ, ಶಿವುಮಾಂತ ಸಾಹು ಚಂದಾಪುರ, ಡಾ. ಚಂದ್ರಶೇಖರ್ ಸುಬೇದಾರ್, ಆರ್. ಚನ್ನಬಸು ವನದುರ್ಗ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಮಾನಸಿಂಗ್ ಚವ್ಹಾಣ, ಧರ್ಮಣ್ಣ ಹೋತಪೇಠ, ನಿಂಗರಾಜ್ ಬಾಚಿಮಟ್ಟಿ, ಕಾಳಪ್ಪ ಕವತಿ, ಮಹಾದೇವಪ್ಪ ಸಾಲಿಮನಿ, ಮಲ್ಲಣ್ಣ ಉಳಂಡಗೇರಿ, ರವಿ ರಾಜಪುರ, ಶಾಂತಗೌಡ ನಾಗನಟಿಗಿ, ಅಯ್ಯಣ್ಣ ಕನ್ಯಾಕೋಳೂರು, ಬಲಭೀಮ ಮಡ್ನಾಳ, ಮಾಳಪ್ಪ ಸುಂಕದ ಕೆಂಭಾವಿ, ನಿಂಗಣ್ಣ ನಾಯ್ಕೋಡಿ, ಶರಬಣ್ಣ ರಸ್ತಾಪುರ, ಮಹೇಶ ರಸ್ತಾಪುರ ಮುಂತಾದವರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ