ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಾರ್ಪಳ್ಳಿ ಮಹಿಳಾ ಮಂಡಳಿ ನೇತೃತ್ವದಲ್ಲಿ ಮಾರ್ಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ 2ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಭಾನುವಾರ ನಡೆಯಿತು.ಕಾರ್ಯಕ್ರಮವನ್ನು ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್‌ನ ಶಿಕ್ಷಕಿ ಪಾವನಗಂಗ ಕೆ. ಅವರು ಉದ್ಘಾಟಿಸಿರು. ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಲತಾ ರಮಾನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಸ್ಪತ್ರೆಯ ಹಿರಿಯ ಫಾರ್ಮಾಸಿ ಅಧಿಕಾರಿ ಪ್ರವೀಣ್ ತಂತ್ರಿ, ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಭಟ್ ಮಾರ್ಪಳ್ಳಿ, ದಿ ನ್ಯೂ ಇಂಡಿಯ ಇನ್ಶುರೆನ್ಸ್ ಕಂ.ಲಿ. ನ ನಿವೃತ್ತ ಹಿರಿಯ ಅಧಿಕಾರಿ ವಸಂತ್ ಶೇರಿಗಾರ ಹಾಗೂ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಶೆಟ್ಟಿ, ಶೇಖರ ಸುವರ್ಣ ಗರಡಿಮನೆ, ಭಜನಾ ಮಂಡಳಿಯ ಅಧ್ಯಕ್ಷ ಶ್ರೀನಾಥ್ ಪೂಜಾರಿ, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಅನುರಾಧ ಉದಯ್, ಗೆಳೆಯರ ಬಳಗ ಮಾರ್ಪಳ್ಳಿಯ ಗೌರವಾಧ್ಯಕ್ಷ ಲಚೇಂದ್ರ ಬೈಲೂರು, ಅಧ್ಯಕ್ಷ ಸುಧಾಕರ ಶೇರಿಗಾರ ಉಪಸ್ಥಿತರಿದ್ದರುಕಾರ್ಯಕ್ರಮವನ್ನು ವಂದನಾ ಆರ್.ಪಿ. ನಿರೂಪಿಸಿ, ವಂದಿಸಿದರು. ಮುಖ್ಯತೀರ್ಪುಗಾರರಾಗಿ ಪ್ರಣವಿ ಎಚ್. ಸುವರ್ಣ ಮತ್ತು ಶ್ರೇಯಾ ಆಚಾರ್ಯ ಸಹಕರಿಸಿದರು.ಸಮಾರೋಪ ಸಮಾರಂಭಧ ಅಧ್ಯಕ್ಷತೆಯನ್ನು ವೈಕುಂಠ ಬಾಳಿಗ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಹರೀಶ್ ರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತ್ರಿಶಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಸ್ಥಾಪಕ ಗೋಪಾಲ ಕೃಷ್ಣ ಎನ್. ಎಸ್., ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮಾರ್ಪಳ್ಳಿ, ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಉದಯ ದೇವಾಡಿಗ, ಉದ್ಯಮಿ ಹೇಮಂತ್ ಶೆಟ್ಟಿ, ಲಕ್ಷ್ಮೀನಾರಾಯಣ ಭಟ್, ಸುಬ್ರಹ್ಮಣ್ಯ ಉಪಾಧ್ಯ ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ 100 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ಒದಗಿಸಿ ಗೌರವಿಸಲಾಯಿತು. ವಿಜೇತ ಮಕ್ಕಳಿಗೆ ವಿಶೇಷ ಬಹುಮಾನದೊಂದಿಗೆ ಗೌರವಿಸಲಾಯಿತು.