ರೀಲ್ಸ್‌ನಲ್ಲಿ ಪರಿಚಯವಾಗಿ ಮದುವೆ: ಕೈ ಕೊಟ್ಟ ಪತಿಗಾಗಿ ಪತ್ನಿಯಿಂದ ಪ್ರತಿಭಟನೆ

KannadaprabhaNewsNetwork |  
Published : Jun 12, 2025, 12:52 AM IST
11ಕೆಆರ್ ಎಂಎನ್ 6.ಜೆಪಿಜಿರಾಮನಗರ ತಾಲೂಕು ಬಿಳಗುಂಬ ಗ್ರಾಮದ ಪ್ರತಾಪ್ ಮನೆ ಎದುರು ರಕ್ಷಿತಾ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಇದು ರಾಮನಗರ ತಾಲೂಕು ಬಿಳಗುಂಬ ಗ್ರಾಮದ ಪ್ರತಾಪ್‌ನನ್ನು ನಂಬಿ ವಿವಾಹವಾದ ಬನ್ನಿಕುಪ್ಪೆ (ಬಿ) ಗ್ರಾಮದ ರಕ್ಷಿತಾಳ ಕಣ್ಣೀರಿನ ಕಥೆ.

ಕನ್ನಡಪ್ರಭ ವಾರ್ತೆ ರಾಮನಗರ

ರೀಲ್ಸ್ ನೋಡಿ ಪರಿಚಯವಾದ ಯುವಕ - ಯುವತಿ ಸ್ನೇಹಿತರಾಗಿ ನಂತರ ಪ್ರಣಯವಾಗಿ ಮಾರ್ಪಟ್ಟು ಇಬ್ಬರು ಮದುವೆ ಕೂಡ ಮಾಡಿಕೊಂಡಿದ್ದರು. ಆದರೀಗ ತನ್ನನ್ನು ವಿವಾಹವಾದ ಪತ್ನಿ ಕೈಕೊಟ್ಟ ಎಂದು ಗಂಡನ ಮನೆ ಮುಂದೆ ಪ್ರತಿಭಟನೆ ಕುಳಿತಿದ್ದಾಳೆ.

ಇದು ರಾಮನಗರ ತಾಲೂಕು ಬಿಳಗುಂಬ ಗ್ರಾಮದ ಪ್ರತಾಪ್‌ನನ್ನು ನಂಬಿ ವಿವಾಹವಾದ ಬನ್ನಿಕುಪ್ಪೆ (ಬಿ) ಗ್ರಾಮದ ರಕ್ಷಿತಾಳ ಕಣ್ಣೀರಿನ ಕಥೆ.

ರೀಲ್ಸ್ ಮಾಡಿಕೊಂಡಿದ್ದ ರಕ್ಷಿತಾಗೆ ಅದರ ಮೂಲಕವೇ ಪ್ರತಾಪ್ ಪರಿಚಯವಾಗಿದ್ದನು. ಈ ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರಣಯವಾಗಿ ಮಾರ್ಪಟ್ಟು ಇಬ್ಬರು ತಿರುಪತಿಯಲ್ಲಿ ಮದುವೆಯಾಗಿ ಒಂದು ವರ್ಷ ಸಂಸಾರ ನಡೆಸಿದ್ದಾರೆ. ಆದರೀಗ ಈ ದಂಪತಿ ಸಂಸಾರಕ್ಕೆ ಜಾತಿ ಅಡ್ಡಿ ಬಂದಿದೆ.

ರಕ್ಷಿತಾ ಎಸ್ಸಿ ಸಮುದಾಯಕ್ಕೆ ಸೇರಿದರೆ, ಪ್ರತಾಪ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆತ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿದ್ದಾನೆ. ಪ್ರತಾಪ್ ಅಮ್ಮನಿಗೆ ರಕ್ಷಿತಾ ಹಿಡಿಸಿಲ್ಲ, ತಮ್ಮ ಸಮುದಾಯದ ಯುವತಿಯನ್ನು ಮದುವೆಯಾಗು, ಮನೆ ತುಂಬಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಪ್ರತಾಪ್ ಒಂದು ವರ್ಷ ಕಾಲ ರಕ್ಷಿತಾಳೊಂದಿಗೆ ಸಂಸಾರ ಮಾಡಿ ಈಗ ನಾಪತ್ತೆಯಾಗಿದ್ದಾನೆ. ರಕ್ಷಿತಾ ಪ್ರತಿದಿನ ಅವನನ್ನು ಹುಡುಕಿಕೊಂಡು ತಿರಗಾಡುತ್ತಿದ್ದಾರೆ ಮತ್ತು ನ್ಯಾಯ ಕೊಡಿಸಿ ಎಂದು ಬಿಡದಿ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದಾರೆ.

ಪತಿಯ ಮನೆ ಮುಂದೆ ಪ್ರತಿಭಟನೆ:

ಕಳೆದ ಐದು ತಿಂಗಳಿಂದ ಪತ್ನಿ ರಕ್ಷಿತಾ ಸಂಪರ್ಕಕ್ಕೆ ಪ್ರತಾಪ್ ಸಿಗುತ್ತಿಲ್ಲ. ಹೀಗಾಗಿ ರಕ್ಷಿತಾ ಪತಿ ಮನೆ ಎದುರು ಪ್ರತಿಭಟನೆ ಕುಳಿತಿದ್ದಾ‍‍ಳೆ.

ನನಗೆ ಪತಿ ಬೇಕು. ನನಗೆ ಮೋಸ ಮಾಡಿದ್ದಾನೆ. ಅಪ್ಪನ ಮನೆಯವರು ಹೊರಗೆ ಹಾಕಿದ್ದು, ಈಗ ಗಂಡನ ಮನೆಯವರು ಸೇರಿಸುತ್ತಿಲ್ಲ. ನಾನೀಗ ಬೀದಿಗೆ ಬಿದ್ದಿದ್ದೇನೆ. ನನಗೆ ಪತಿ ಬೇಕು ಎಂದು ಅಳಲು ತೋಡಿಕೊಳ್ಳುತ್ತಿದ್ದಾಳೆ. ಕಟ್ಟಿಕೊಂಡ ಪತಿಯೂ ಇಲ್ಲದೇ, ಹೆತ್ತ ತಂದೆ ತಾಯಿಯ ಆಸರೆಯೂ ಇಲ್ಲದೆ ರಕ್ಷಿತಾ ಅಳಲು ತೋಡಿಕೊಂಡಿದ್ದಾರೆ.11ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕು ಬಿಳಗುಂಬ ಗ್ರಾಮದ ಪ್ರತಾಪ್ ಮನೆ ಎದುರು ರಕ್ಷಿತಾ ಪ್ರತಿಭಟನೆ ನಡೆಸುತ್ತಿರುವುದು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ