ಕನ್ನಡಪ್ರಭ ವಾರ್ತೆ ಹಾಸನ
ಆರೋಪಿ ಭವಾನಿ ಈ ಸಂಬಂಧವಾಗಿ ಪೊಲೀಸರಿಗೆ ಕಳುಹಿಸಿರುವ ತನ್ನ ಮೊಬೈಲ್ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಮನುಕುಮಾರ್ ಮತ್ತು ತನಗೂ 2023ರ ನವೆಂಬರ್ 1ರಂದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದೆ. ವಿವಾಹವನ್ನು ನೋಂದಣಿ ಕೂಡ ಮಾಡಿಸಿದ್ದೇವೆ ಎಂದು ಹೇಳಿ ವಿವಾಹ ನೋಂದಣಿಯಾಗಿರುವ ಸರ್ಟಿಫಿಕೇಟ್ ಕೂಡ ಬಹಿರಂಗಗೊಳಿಸಿದ್ದಾಳೆ.
ಮನುಕುಮಾರ್ ತನ್ನೊಂದಿಗೆ ಮದುವೆವಾದ ನಂತರವೂ ಹಲವು ಯುವತಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಪ್ರೀತಿಪ್ರೇಮದ ನಾಟಕ ಆಡುತ್ತಿದ್ದ. ಹೊಸ ವರ್ಷಾಚರಣೆ ವೇಳೆಯೂ ಹೋಟೆಲ್‌ಗೆ ಯುವತಿಯೊಬ್ಬಳೊಂದಿಗೆ ಹೋಗಿದ್ದ. ಈ ವಿಚಾರ ತಿಳಿದೇ ನಾನು ಅಲ್ಲಿಗೆ ಹೋಗಿ ಜಗಳ ಮಾಡಿದ್ದು, ತನಗೆ ನ್ಯಾಯ ಕೊಡಿಸುವಂತೆ ಭವಾನಿ ಮನವಿ ಮಾಡಿದ್ದಾಳೆ.===============