ಕೊಳಕೇರಿ ಗ್ರಾಮದ ಕನ್ನಂಬಿರ ಮನುಬಿದ್ದಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಧನು ಎಂಬವರ ಪತ್ನಿ ಹಾಗು ಮಗು ಕಾಣೆಯಾಗಿದ್ದಾರೆ.
ನಾಪೋಕ್ಲು: ಕೊಳಕೇರಿ ಗ್ರಾಮದ ಕನ್ನಂಬಿರ ಮನುಬಿದ್ದಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಾಗಿರುವ
ಕೂಲಿ ಕಾರ್ಮಿಕ ಧನು ಎಂಬವರ ಪತ್ನಿ ಹಾಗು ಮಗು ಕಾಣೆಯಾಗಿದ್ದಾರೆ.
ಮೂರುವರೆ ವರ್ಷದ ಹಿಂದೆ ತಾನು ಜಯಶ್ರೀ (ದಿವ್ಯ )ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದು ಎರಡೂವರೆ ವರ್ಷದ ಗಂಡು ಮಗುವಿದೆ. ತನ್ನ ಪತ್ನಿ ಮಾ.12ರಂದು ಖಾಸಗಿ ಬಸ್ ನಲ್ಲಿ ನಾಪೋಕ್ಲುಗೆ ತೆರಳಿದವರು ಮನೆಗೆ ಹಿಂತಿರುಗಿರುವುದಿಲ್ಲ. ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ನಿಯ ಸುಳಿವು ಸಿಕ್ಕಿಲ್ಲ ಎಂದು ಧನು ದೂರಿನಲ್ಲಿ ತಿಳಿಸಿದ್ದಾರೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---------------------------------
ಇಂದು ಖಾದಿ ಬಟ್ಟೆ ಖರೀದಿಗೆ ಅವಕಾಶ
ಮಡಿಕೇರಿ: ರಾಜ್ಯದ ಎಲ್ಲ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ನೌಕರರು “ಸ್ವಯಂ ಪ್ರೇರಣೆಯಿಂದ” ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಉಡುಪನ್ನು ಧರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ಎಲ್ಲ ಸರ್ಕಾರಿ ಅಧಿಕಾರಿ/ ನೌಕರರಿಗೆ ಖಾದಿ ಬಟ್ಟೆಗಳನ್ನು ಖರೀದಿಸಲು ಸುಲಭವಾಗಿ ಲಭ್ಯವಾಗುವಂತೆ ಮಾ. 15ರಂದು ಕೃಷಿ ಇಲಾಖೆ ವತಿಯಿಂದ ಆಯೋಜಿಸಿರುವ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನ ಜೊತೆಗೆ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಗಾಂಧಿ ಮೈದಾನ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ತಾತ್ಕಾಲಿಕ ಖಾದಿ ಮಳಿಗೆಯನ್ನು ತೆರೆಯಲಾಗುತ್ತಿದೆ.ಜಿಲ್ಲೆಯ ಎಲ್ಲ ಇಲಾಖೆ/ ನಿಗಮ/ ಮಂಡಳಿ ಅಧಿಕಾರಿಗಳು ಹಾಗೂ ನೌಕರರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಡಿಕೇರಿ, ಕೊಡಗು ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಚ್.ಆರ್. ಸುಧಾಮ ಅವರು ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.